ಮಂಚದಪಲ್ಕೆ ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ

ಅಂಗನವಾಡಿ ಮಕ್ಕಳ ಪರದಾಟ-ಗ್ರಾ.ಪಂಕ್ಕೆ ನಾಗರಿಕರ ಮನವಿ

ನಡ: ನಡ ಗ್ರಾ.ಪಂ ವ್ಯಾಪ್ತಿಯ ಮಂಚದಪಲ್ಕೆ ಪ್ರದೇಶದಲ್ಲಿ ಸುಮಾರು 35 ಕುಟುಂಬಗಳಿದ್ದು, ಇಲ್ಲಿಯ ನಾಗರಿಕರಿಗೆ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳು ಕಳೆದ ಒಂದು ವಾರದಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದು, ತಮಗೆ ನೀರು ಒದಗಿಸುವಂತೆ ಗ್ರಾಮ ಪಂಚಾಯತಕ್ಕೆ ಮನವಿ ಸಲ್ಲಿಸಿದ್ದಾರೆ.
ಮಂಚದಪಲ್ಕೆ ಪ್ರದೇಶದಲ್ಲಿ ಸುಮಾರು ೩೫ ಕುಟುಂಬಗಳಿದ್ದು, ಈ ಪ್ರದೇಶಕ್ಕೆ ಇಲ್ಲಿಯ ಕೊಳವೆ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ನೀರು ಸರಬುರಾಜು ಸಂಪೂರ್ಣ ನಿಂತು ಹೋಗಿದೆ. ಇದರಿಂದಾಗಿ ಈ ಕುಟುಂಬಗಳಿಗೆ ಕುಡಿಯಲು ನೀರಿಲ್ಲದೆ ಬಹಳಷ್ಟು ಸಮಸ್ಯೆಯಾಗಿದೆ. ಅಲ್ಲದೆ ಇಲ್ಲಿಯ ಅಂಗನವಾಡಿಯ ಮಕ್ಕಳಿಗೂ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ.
ಇಲ್ಲೇ ಹತ್ತಿರದಲ್ಲಿ ಇರುವ ನದಿಯಲ್ಲಿ ನೀರು ಬತ್ತಿ ಹೋಗಿದ್ದು, ಇದ್ದ ನೀರು ತುಂಬಾ ಕಲುಷಿತಗೊಂಡಿದೆ. ಇದರಿಂದಾಗಿ ಇಲ್ಲಿಯ ನಿವಾಸಿಗಳು ನೀರಿಗಾಗಿ ಪರಿತಪಿಸುತ್ತಿದ್ದು, ಸ್ಥಳೀಯವಾಗಿ ಕೊಳವೆ ಬಾವಿ ಹೊಂದಿರುವರಲ್ಲಿ ಕೇಳಿ ಕುಡಿಯುವ ನೀರು ಪಡೆಯುತ್ತಿದ್ದರೂ, ಅವರಲ್ಲಿಯೂ ನೀರಿಲ್ಲದೆ ಅವರು ನಿರಾಕರಿಸುತ್ತಿದ್ದಾರೆ. ತಮ್ಮ ಸಮಸ್ಯೆ ಬಗ್ಗೆ ಈ ಮಂಚದಪಲ್ಕೆ ಪ್ರದೇಶದ ನಾಗರಿಕರು ನಡ ಗ್ರಾಮ ಪಂಚಾಯತಕ್ಕೆ ತೆರಳಿ ತಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ತಮ್ಮ ಪ್ರದೇಶದ ಕೊಳವೆ ಬಾವಿಯನ್ನು ಕೂಡಲೇ ಪರೀಕ್ಷಿಸಿ ಈ ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಕೂಡಲೇ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮನವಿಯಲ್ಲಿ ನಾಗರಿಕರು ಒತ್ತಾಯಿಸಿದ್ದಾರೆ. ಮನವಿಯನ್ನು ಗ್ರಾ.ಪಂ ಪಿ.ಡಿ.ಒ ಶ್ರೀನಿವಾಸ್ ಸ್ವೀಕರಿಸಿ ನೀರಿನ ವ್ಯವಸ್ಥೆ ಮಾಡಿಸುವ ಭರವಸೆಯನ್ನು ನೀಡಿದರು. ಮನವಿ ನೀಡುವ ಸಂದರ್ಭದಲ್ಲಿ ಗ್ರಾಮಸ್ಥರಾದ ಎಂ.ಡಿ ಭಾಸ್ಕರ್, ಗುಣಕರ ಸುವರ್ಣ, ಎಂ.ಡಿ ಸಂಜೀವ, ಸುಂದರ ಆಚಾರ್ಯ, ಪದ್ಮಾವತಿ, ವನಜಾಕ್ಷಿ, ನಿತಿನ್ ಎಸ್, ಪುಷ್ಪ, ಪಾರ್ವತಿ, ನೆಬಿಸ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.