ವೇಣೂರು: ಅಂಗಡಿಗೆ ನುಗ್ಗಿದ ಮಳೆ ನೀರು, ಉರುಳಿಬಿದ್ದ ಮರ, ವಿದ್ಯುತ್ ಕಂಬಗಳು ದರಾಶಾಹಿ

ವೇಣೂರು: ಬೆಳ್ತಂಗಡಿ ತಾಲೂಕಿನ ವೇಣೂರು ಪರಿಸರದಲ್ಲಿ ಎ.2 ರಂದು  ಸಂಜೆ ಸುಮಾರು ಅರ್ಥ ತಾವು ಉತ್ತಮ ಮಳೆ ಸುರಿಯಿತು. ಚರಂಡಿ ಬ್ಲಾಕ್ ಆದ ಕಾರಣ ಇಲ್ಲಿಯ ಕಾಲೇಜು ರಸ್ತೆಯ ಮುಂಭಾಗದಲ್ಲಿನ ಅಂಗಡಿಗಳಿಗೆ ನೀರು ನುಗ್ಗಿತು. ಎಲೆಕ್ಟ್ರಿಕಲ್ಸ್ ಅಂಗಡಿಯ ಕೆಲವು ಉಪಕರಣಗಳು ಹಾಳಾಗಿವೆ.

ಉರುಳಿದ ವಿದ್ಯುತ್ ಕಂಬಗಳು
ಬೀಸಿದ ಭಾರೀ ಗಾಳಿಗೆ ನಾರಾವಿ ಹಾಗೂ ವೇಣೂರು ವ್ಯಾಪ್ತಿಯ ಕುರ್‍ಲೊಟ್ಟು, ಪೆರ್ಮುಡ ಹಾಗೂ ಕಲ್ಲತ್ತಿ ಪ್ರದೇಶಗಳಲ್ಲಿ ವಿದ್ಯುತ್ ತಂತಿ ಮೇಲೆ ಮರ ಉರುಳಿ ಬಿದ್ದು ಸುಮಾರು 8 ಕ್ಕೂ ಅಧಿಕ ಕಂಬಗಳು ದರಾಶಾಹಿಯಾಗಿದೆ. ಈಗಾಗಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿ ಜನ ಪರದಾಡುವಂತಾಯಿತು.

ನಾರಾವಿ: ಚಲಿಸುತ್ತಿದ್ದ ರಿಕ್ಷಾ ಮೇಲೆ ಬಿದ್ದ ಮರ
ಕಾರ್ಕಳ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ನಾರಾವಿ ಪರಿಸರದಲ್ಲಿ ಭಾರೀ ಗಾತ್ರದ ಮರವೊಂದು ಚಲಿಸುತ್ತಿದ್ದ ಗೂಡ್ಸ್ ರಿಕ್ಷಾ ಮೇಲೆ ಉರುಳಿಬಿದ್ದಿದ್ದು, ಚಾಲಕ ಪವಾಡಸದೃಶ್ಯ ಅಪಾಯದಿಂದ ಪಾರಾಗಿದ್ದಾರೆ. ರಾಜ್ಯ ಹೆದ್ದಾರಿಗೆ ಅಡ್ಡವಾಗಿ ಬಿದ್ದು ಸುಮಾರು ಒಂದು ಗಂಟೆ ಕಾಲ ರಸ್ತೆ ತಡೆ ಉಂಟಾಯಿತು. ಮರದ ಅಡಿಗೆ ಗೂಡ್ಸ್ ರಿಕ್ಷಾ ಒಂದು ಸಿಲುಕಿ ನಜ್ಜುಗುಜ್ಜಾಗಿದೆ. ಅಂಡಿಂಜೆಯ ಗೂಡ್ಸ್ ರಿಕ್ಷಾ ಇದಾಗಿದ್ದು, ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.