ಬೆಳ್ತಂಗಡಿ ವೀರಕೇಸರಿ ವತಿಯಿಂದ ಮೂರು ಬಡ ಕುಟುಂಬಗಳಿಗೆ ವೈದ್ಯಕೀಯ ನೆರವು

Advt_NewsUnder_1
Advt_NewsUnder_1

ಬೆಳ್ತಂಗಡಿ : ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಇದೀಗ ಮೂರನೇ ವರ್ಷದ 9 ನೇ ತಿಂಗಳಲ್ಲಿ 81 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಸಮಾಜದ ಕಣ್ಣೀರೊರೆಸುವ ಕಾರ್ಯವನ್ನು ಮುಂದುವರೆಸಿದೆ.
79ನೇ ಸೇವಾಯೋಜನೆಯಾಗಿ ಮೊಗ್ರು ಗ್ರಾಮದ  ಕುಂಡಾಜೆ ಮನೆ ನಿವಾಸಿಯಾಗಿರುವ ಹರೀಶ್ ಇವರ ಕಾಲಿನ ಶಸ್ತ್ರಚಿಕಿತ್ಸೆಗೆ ಮತ್ತು ಇವರ ಪತ್ನಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇವರ ಚಿಕಿತ್ಸಾ ವೆಚ್ಚಕ್ಕಾಗಿ 15  ಸಾವಿರ ರೂಗಳ ಚೆಕ್ ಅನ್ನು ಹಸ್ತಾಂತರಿಸಲಾಯಿತು.
80ನೇ ಸೇವಾಯೋಜನೆಯಾಗಿ ಪಡಂಗಡಿ ಗ್ರಾಮದ ಮಂಜೆಬೆಟ್ಟು ಮನೆ ನಿವಾಸಿಯಾಗಿರುವ ಜಯಪ್ರಕಾಶ್ ಇವರ ತಂದೆಯು ಕ್ಯಾನ್ಸರ್ ರೋಗದಿಂದ ವಿಧಿವಶರಾಗಿದ್ದು, ಇದೀಗ ಇವರ ತಾಯಿ ಕೂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ 15000 ರೂಗಳ ಚೆಕ್ ಅನ್ನು ಹಸ್ತಾಂತರಿಸಲಾಯಿತು.
81ನೇ ಸೇವಾಯೋಜನೆಯಾಗಿ ಧರ್ಮಸ್ಥಳದ ಮಂಜಶ್ರೀ ನಗರ ನಿವಾಸಿ  ಮಂಜುಳಾ ಇವರಿಗೆ ಎದೆಯಲ್ಲಿ ಗೆಡ್ಡೆ ಬೆಳೆದು, ಇವರ ಅಪರೇಷನ್ ವೆಚ್ಚಕ್ಕಾಗಿ 20000 ರೂಗಳ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಈ 3 ಸೇವಾ ಯೋಜನೆಗಳಿಗೆ ಒಟ್ಟು 50 ಸಾವಿರ ರೂಪಾಯಿಗಳನ್ನು ವೀರಕೇಸರಿ ತಂಡದ ಸದಸ್ಯರೆಲ್ಲರ ಸಹಕಾರದಿಂದ ಸಂಗ್ರಹಿಸಿ ತಂಡದ ಸದಸ್ಯರ ಸಮ್ಮುಖದಲ್ಲಿ ಚೆಕ್ ಹಸ್ತಾಂತರಿಸಲಾಯಿತು. ಈ ಯೋಜನೆಯ ಯಶಸ್ಸಿನೊಂದಿಗೆ 81ನೇ ಸೇವಾಯೋಜನೆಯನ್ನು ಪೂರ್ಣಗೊಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.