ಉಜಿರೆ ರುಡ್‌ಸೆಟ್‌ ವಾರ್ಷಿಕ ವರದಿ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಎಪ್ರಿಲ್  1 ರಂದೇ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡುವ ಸಂಪ್ರದಾಯವು ಕಳೆದ ಮೂವತ್ತೇಳು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ರೀತಿಯಲ್ಲಿ ಉಜಿರೆ ರುಡ್‌ಸೆಟ್‌ನ 2018-19 ರ ಸಾಲಿನ ವಾರ್ಷಿಕ ವರದಿಯನ್ನು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ  ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.

2018-19 ರ ಸಾಲಿನಲ್ಲಿ 29 ವಿವಿಧ ತರಬೇತಿ ಕಾರ್ಯಕ್ರಮಗಳಲ್ಲಿ 756 ಯುವಕ ಯುವತಿಯರಿಗೆ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡಿ ಶೇ.74 ಶಿಭಿರಾರ್ಥಿಗಳನ್ನು ಸ್ವ ಉದ್ಯೋಗಿಗಳನ್ನಾಗಿ ಹೊರತರುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ. ಮುಂದಿನ ವರ್ಷದಲ್ಲೂ ಸ್ಥಳೀಯವಾಗಿ ಬೇಡಿಕೆ ಆಧಾರಿತ ವಿವಿಧ ತರಬೇತಿ ಕಾರ್‍ಯಕ್ರಮಗಳನ್ನು ಅಯೋಜಿಸುವಂತೆ ಶುಭ ಹಾರೈಸಿದರು.

ಜೊತೆಗೆ ಕರ್ನಾಟಕದಲ್ಲಿರುವ ಇತರ 06 ರುಡ್‌ಸೆಟ್ ಸಂಸ್ಥೆಗಳಾದ ಬ್ರಹ್ಮಾವರ, ಚಿತ್ರದುರ್ಗ, ಧಾರವಾಡ, ವಿಜಯಪುರ, ಮೈಸೂರು, ಬೆಂಗಳೂರು ಹಾಗು ಕಣ್ಣೂರು ಶಾಖೆಯ 2018-19 ರ ಸಾಲಿನ ವಾರ್ಷಿಕ ವರದಿಗಳನ್ನು ಕೂಡ  ಬಿಡುಗಡೆಗೊಳಿಸಿದರು. ಸಂಸ್ಥೆಗಳ ಒಂದು ವರ್ಷದ ಕಾರ್‍ಯ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೆಶಕ  ಎಮ್.ಜನಾರ್ಧನ್‌, ಸಂಸ್ಥೆಯ ನಿರ್ದೆಶಕ  ವಿನಯ್ ಕುಮಾರ್ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.