ಬಳಂಜ : ಪಂಚಲಿಂಗೇಶ್ವರ ಟ್ರೋಪಿ ವಾಲಿಬಾಲ್ ಪಂದ್ಯಾಟ

ಬಳಂಜ : ಬಳಂಜ ವಾಲಿಬಾಲ್ ಕ್ಲಬ್ ಇದರ ಸಹಯೋಗದೊಂದಿಗೆ ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈ.ಲಿ ನ ಸ್ಥಾಪಕ ಅಶ್ವಥ್ ಹೆಗ್ಡೆ ಇವರ ಮಾಲಕತ್ವದ ಪಂಚಲಿಂಗೇಶ್ವರ ತಂಡದ ವತಿಯಿಂದ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಪಂಚಲಿಂಗೇಶ್ವರ ಟ್ರೋಪಿ 2019 ಇದರ ಉದ್ಘಾಟನೆಯು ಮಾ. 30ರಂದು ಬಳಂಜ ಶ್ರೀ ದೈವ ಕೊಡಮಣಿತ್ತಾಯ ಆವರಣದಲ್ಲಿ ನಡೆಯಿತು.
ಹೋಟೆಲ್ ಉದ್ಯಮಿ ಸುಂದರ ಅಂಚನ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿ.ವಿ.ಎಲ್‌ನ ಗೌರವಾಧ್ಯಕ್ಷ ಬಿ.ಶೀತಲ್ ಪಡಿವಾಳ್, ಕೋಟ್ಯಾನ್ ರಾಕರ್‍ಸ್ ತಂಡದ ಸಂತೋಷ್.ಪಿ ಕೋಟ್ಯಾನ್, ಬಿ.ವಿ.ಎಲ್ ಕಾರ್ಯದರ್ಶಿ ಯೋಗೀಶ್ ಯೈಕುರಿ, ಸಂಘಟನಾ ಕಾರ್ಯದರ್ಶಿ ಸುರೇಶ್ ಹೇವ, ಸುವರ್ಣ ಸ್ಟೈಕರ್‍ಸ್‌ನ ರಂಜಿತ್ ಹೆಚ್.ಡಿ, ಸತೀಶ್ ದೇವಾಡಿಗ, ಹರೀಶ್ ಬಳಂಜ, ಗ್ರಾ.ಪಂ ಸದಸ್ಯ ಯಶೋಧರ ಶೆಟ್ಟಿ, ಬಳಂಜ ಭಜನಾ ಸಮಿತಿಯ ರತ್ನಾಕರ ಶೆಟ್ಟಿ, ಜಗದೀಶ್ ಕೊಂಗುಲ ಹಾಗೂ ತಂಡದ ಮಾಲಕರು, ಆಟಗಾರರು ಉಪಸ್ಥಿತರಿದ್ದರು. ಪ್ರಮೋದ್ ಬಿ.ಎಸ್ ಸ್ವಾಗತಿಸಿ, ನಿಸಾರ್ ನಿರೂಪಿಸಿದರು.

ಪ್ರಶಸ್ತಿ ಪಡೆದ ತಂಡಗಳು
ಬಿ.ವಿ.ಎಲ್ ಪಂದ್ಯಾಟದಲ್ಲಿ ಸಚಿನ್ ಶೆಟ್ಟಿಯವರ ಕ್ಯಾಂಪಸ್ ವಾರಿಯರ್‍ಸ್ ತಂಡ ಪ್ರಥಮ, ರಾಕೇಶ್ ಹೆಗ್ಡೆ ಮಾಲಕತ್ವದ ಇಕೋ ಪ್ರೆಶ್ ತಂಡ ದ್ವಿತೀಯ, ಸಂತೋಷ್.ಪಿ.ಕೋಟ್ಯಾನ್ ಮಾಲಕತ್ವದ ಕೋಟ್ಯಾನ್ ರಾಕರ್‍ಸ್ ತಂಡ ತೃತೀಯ, ರಂಜಿತ್ ಹೆಚ್.ಡಿ ಮಾಲಕತ್ವದ ಸುಧಾಮ ಸ್ಟೈಕರ್‍ಸ್, ತಂಡ ಚತುರ್ಥ ಸ್ಥಾನವನ್ನು ಪಡೆಯಿತು. ಹಾಗೂ ಉತ್ತಮ ಪಾಸರ್ ಅಗಿ ಲತೇಶ್ ಪೆರಾಜೆ, ಉತ್ತಮ ಅಟೆಕ್ಕರ್ ಅಗಿ ಸುಕೇಶ್ ಬೊಂಟ್ರೋಟ್ಟು ಉತ್ತಮ ಅಲ್‌ರೌಂಡರ್ ಅಗಿ ಹನೀಫ್ ಬಳಂಜ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.