HomePage_Banner_
HomePage_Banner_

ಚುನಾವಣಾ ಪ್ರಚಾರಕ್ಕೆ ಸರಕಾರಿ ವಾಹನ ಬಳಕೆ ನಿಷೇಧ

ಬೆಳ್ತಂಗಡಿ: ಚುನಾವಣಾ ಪ್ರಚಾರ ಕಾರ್ಯದಲ್ಲಿ ಸರಕಾರದ ಅಧಿಕೃತ ವಾಹನ ಬಳಕೆ ಮಾಡುವುದನ್ನು ಚುನಾಚಣಾ ಆಯೋಗ ಸಂಪೂರ್ಣವಾಗಿ ನಿಷೇಧಿಸಿದೆ.
ಪ್ರಚಾರಕ್ಕೆ ಸರಕಾರಿ ವಾಹನ ಬಳಸಿ ಆಡಳಿತ ಮಂತ್ರ ದುರುಪಯೋಗ ಮಾಡುವುದು ಕಂಡು ಬಂದರೆ ಸಾರ್ವಜನಿಕರು ತಕ್ಷಣ ಆಯಾ ಕ್ಷೇತ್ರದ ವೀಕ್ಷಕರಿಗೆ ಅಥವಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಬಹುದು.
ಕೇಂದ್ರ ಹಾಗೂ ರಾಜ್ಯ ಸರಕಾರದ ವಾಹನಗಳು ಕೇಂದ್ರ ಮತ್ತು ರಾಜ್ಯ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ಸಂಸ್ಥೆಗಳು, ಸಹಭಾಗಿತ್ವದ ಸಂಸ್ಥೆಗಳು, ವಾಣಿಜ್ಯ ಆಡಳಿತ ಮಂಡಳಿಗಳ ವಾಹನಗಳು, ಸ್ಥಳೀಯ ಸಂಸ್ಥೆಗಳಿ , ನಗರ ಸಭೆ ಮತ್ತು ಪುರಸಭೆ ವಾಹನಗಳು, ಸಹಕಾರ ಸಂಘಗಳ ವಾಹನಗಳು, ಸ್ವಾಯತ್ತ ಜಿಲ್ಲಾ ಸಮಿತಿಗಳ ವಾಹನಗಳು, ಸಾರ್ವಜನಿಕ ಹಣ ತೊಡಗಿಸಲ್ಪಟ್ಟ ಯಾವುದೇ ಸಂಸ್ಥೆಗಳ ವಾಹನಗಳು, ಕೇಂದ್ರ ಹಾಗೂ ರಾಜ್ಯ ಸರಕಾರದ ಗೃಹ ಸಚಿವಾಲಯದ ವ್ಯಾಪ್ತಿಗೆ ಒಳಪಟ್ಟ ಕೇಂದ್ರೀಯ ಪೊಲೀಸ್ ಸಂಸ್ಥೆಯ ವಾಹನಗಳನ್ನು ಸರಕಾರಿ ವಾಹನಗಳೆಂದು ಆಯೋಗ ಪರಿಗಣಿಸಿದೆ.
ಕೇಂದ್ರ ಮತ್ತು ರಾಜ್ಯ ಸರಕಾರದ ಸಚಿವರು ತಮ್ಮ ಖಾಸಗಿ ವಾಹನದಲ್ಲಿ ಖಾಸಗಿ ಪ್ರವಾಸ ಕೈಗೊಳ್ಳಬಹುದು. ಆದರೆ ಖಾಗಸಗಿ ಭೇಟಿ ಸಂದರ್ಭ ಸಚಿವರ ಸರಕಾರಿ ಸಿಬ್ಬಂದಿ ಜೊತೆಗಿರಲು ಅವಕಾಶವಿಲ್ಲ. ಸಚಿವರು ಸಾರ್ವಜನಿಕ ಹಿತಾಸಕ್ತಿಗಾಗಿ ತುರ್ತು ಸಂದರ್ಭ ಪ್ರಯಾಣಿಸುವುದಾದರೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಅದರ ಪ್ರತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಇಂತಹ ಅಧಿಕೃತ ಪ್ರವಾಸದ ಸಂದರ್ಭ ಯಾವುದೇ ಪ್ರಚಾರ ಅಥವಾ ರಾಜಕೀಯ ಚಟುವಟಿಕೆ ನಡೆಸಲು ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ಸೂಚಿಸಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.