HomePage_Banner_
HomePage_Banner_

ಹೊಸಂಗಡಿ: ಉಚಿತ ನೇತ್ರ ತಪಾಸಣೆ ಶಿಬಿರ

ಆರೋಗ್ಯಕ್ಕೆ ಎಂಸಿಎಫ್ ಆದ್ಯತೆ: ಪ್ರಭಾಕರ ರಾವ್

ಹೊಸಂಗಡಿ: ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವ ಎಂಸಿಎಫ್ ಹಲವು ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ನೆರವಾಗುತ್ತಾ ಬಂದಿದೆ. ಆರೋಗ್ಯ, ಸ್ವಚ್ಛತೆ, ಕೃಷಿ ಮುಂತಾದ ಚಟುವಟಿಕೆಗಳಿಗೆ ಎಂಸಿಎಫ್ ಆದ್ಯತೆ ನೀಡುತ್ತಿದೆ ಎಂದು ಮಂಗಳೂರು ಕೆಮಿಕಲ್ ಆಂಡ್ ಫಾರ್ಟಿಲೈಜರ್‍ಸ್ ಲಿ. (ಎಂಸಿಎಫ್) ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಭಾಕರ ರಾವ್ ಹೇಳಿದರು.
ಮಂಗಳೂರು ಕೆಮಿಕಲ್ ಆಂಡ್ ಫಾರ್ಟಿಲೈಜರ್‍ಸ್ ಲಿ., ದೇರಳಕಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಹೊಸಂಗಡಿ ಫ್ರೆಂಡ್ಸ್ ಕ್ಲಬ್, ಮೂಡಬಿದಿರೆ ಯುವವಾಹಿನಿ ಘಟಕ, ಮಾರೂರು ಹೊಸಂಗಡಿಯ ಹಿ.ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ವಿಜಯ ಗ್ರಾಮಾಭಿವೃದ್ಧಿ ಪ್ರತಿಷ್ಟಾನ ಮಂಗಳೂರು ಇದರ ಪೆರಿಂಜೆ ಸಮಿತಿ ವತಿಯಿಂದ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಭಾಭವನದಲ್ಲಿ ಜರಗಿದ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾರೂರು ಹೊಸಂಗಡಿ ಶ್ರೀ ಗೋಪಿನಾಥ ಕೊಡಮಣಿತ್ತಾಯ ದೇವಸ್ಥಾನದ ವೆಂಕಟರಾಜ ಅಸ್ರಣ್ಣ ಉದ್ಘಾಟಿಸಿ ಶುಭ ಹಾರೈಸಿದರು. ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಚ್ಚಿದಾನಂದ ಎ., ಯುವವಾಹಿನಿ ಮೂಡಬಿದಿರೆ ಘಟಕದ ಅಧ್ಯಕ್ಷ ರಾಜೇಶ್ ಪೂಜಾರಿ, ಪೆರಿಂಜೆ ಶಾಲೆ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಎಚ್. ಆಲಿಯಬ್ಬ, ಮಾರೂರು ಹೊಸಂಗಡಿ ಹಿ.ಪ್ರಾ. ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಕೇಶವ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಎಂಸಿಎಫ್ ಅಧಿಕಾರಿ ಜಯರಾಮ ಕಾರಂದೂರು ಸ್ವಾಗತಿಸಿ, ವಿಜಯ ಗ್ರಾಮಾಭಿವೃದ್ಧಿ ಪ್ರತಿಷ್ಠಾನ ಪೆರಿಂಜೆ ಸಮಿತಿ ಅಧ್ಯಕ್ಷ, ಕಾರ್ಯಕ್ರಮ ಸಂಯೋಜಕ ಹರಿಪ್ರಸಾದ್ ಪಿ. ನಿರ್ವಹಿಸಿ, ವಂದಿಸಿದರು.

211 ಮಂದಿ ಶಿಬಿರಾರ್ಥಿಗಳು
ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ 211 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ42 ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಸೂಚಿಸಲಾಯಿತು. 162 ಮಂದಿಗೆ ಕನ್ನಡಕ ಅನಿವಾರ್ಯತೆ ಕಂಡು ಬಂದಿದ್ದು, ಎಂಸಿಎಫ್ ವತಿಯಿಂದ ನೀಡಲಾಗುತ್ತದೆ. ಪಾಲ್ಗೊಂಡ ಶಿಬಿರಾರ್ಥಿಗಳ ಡಯಾಬಿಟಿಸ್ ಮತ್ತು ರಕ್ತದೊತ್ತಡವನ್ನು ಪರಿಶೀಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.