ನಾಳೆ ವಿಜಯ ಬ್ಯಾಂಕ್‌ಗೆ ನಳಿನ್ ಪರವಾಗಿ ನಾವು ಅಂತಿಮ ಮೊಳೆಹೊಡೆಯಲಿದ್ದೇವೆ: ಐವನ್ ಡಿ’ಸೋಜಾ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಲಾಭದಲ್ಲಿರುವ ವಿಜಯ ಬ್ಯಾಂಕನ್ನು ನರೇಂದ್ರ ಮೋದಿಯವರು ಮಾರಾಟ ಮಾಡಿದ್ದಾರೆ. ಕರಾವಳಿಯ ಜನರ ವಿಶ್ವಾಸ ಮತ್ತು ಭಾವನೆಯ ಬ್ಯಾಂಕ್ ಆಗಿದ್ದ ವಿಜಯ ಬ್ಯಾಂಕ್‌ಗೆ ಈ ಸ್ಥಿತಿ ಬರಲು ನಳಿನ್ ಕುಮಾರ್ ಕಟೀಲ್ ಮತ್ತು ಮೋದಿಯವರು ನೇರ ಕಾರಣ. ಮಾ. 31 ಈ ಬ್ಯಾಂಕಿನ ಕೊನೆಯ ದಿನವಾಗಿದ್ದು, ಆದ್ದರಿಂದ ನಾಳೆ(ರವಿವಾರ) ವಿಜಯ ಬ್ಯಾಂಕ್‌ನ ಜಿಲ್ಲೆಯ ಯಾವುದಾದರೂ ಒಂದು ಶಾಖೆಯ ಎದುರು ಶವ ಪೆಟ್ಟಿಗೆಗೆ ನಳಿನ್ ಕುಮಾರ್ ಅವರು ಅಂತಿಮ ಮೊಳೆ ಹೊಡೆಯಲಿ. ಇಲ್ಲದಿದ್ದರೆ ಅವರ ಪರವಾಗಿ ನಾವೇ ನಾಳೆ ಆ ಕೆಲಸ ಮಾಡಲಿದ್ದೇವೆ ಎಂದು ವಿಧಾನ ಪರಿಷತ್ ಶಾಸಕ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಹೇಳಿದರು.
ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಮಾ. 30 ರಂದು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ವಿವರ ನೀಡಿದರು.
ರಂಜನ್ ಗೌಡ ಕಾಂಗ್ರೆಸ್ ಸೇರ್ಪಡೆ:
ಬಿಜೆಪಿ ಯುವ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ, ಮಂಡಲದ ಮಾಜಿ ಅಧ್ಯಕ್ಷ ರಂಜನ್ ಜಿ ಗೌಡ ಕಾಂಗ್ರೆಸ್ ಸೇರ್ಪಡೆ ಖಚಿತಗೊಂಡಿದೆ ಎಂದು ಐವನ್ ಹೇಳಿದರು.
ಕಳೆದ ಚುನಾವಣೆ ಸಂದರ್ಭ ಅವರ ತಂದೆಯವರು, ಮಾಜಿ ಸಚಿವ ಕೆ ಗಂಗಾಧರ ಗೌಡ ಪಕ್ಷಕ್ಕೆ ಸೇರ್ಪಡೆಗೊಂಡು ನಮಗೆ ಶಕ್ತಿ ನೀಡಿದ್ದಾರೆ. ಇದೀಗ ಅವರ ಪುತ್ರ, ಯುವ ನಾಯಕ ರಂಜನ್ ಗೌಡ ಅವರ ಸೇರ್ಪಡೆಯೂ ಪಕ್ಷಕ್ಕೆ ಶಕ್ತಿ ತರಲಿದೆ. ಯುವ ಜನತೆ ಬಿಜೆಪಿಯಿಂದ ವಿಮುಖವಾಗುತ್ತಿದ್ದು,ಪಕ್ಷಕ್ಕೆ ಆಕರ್ಷಣೆಯಾಗುತ್ತಿರುವುದನ್ನು ಈಗಾಗಲೇ ದೇಶಾಧ್ಯಂತ ಚಾಲನೆ ದೊರೆತಿದೆ ಎಂದರು.
5 ವರ್ಷದಲ್ಲಿ 4.70 ಕೋಟಿ ಉದ್ಯೋಗ ನಷ್ಟ:
ಕೇಂದ್ರ ಸರಕಾರ ಚುನಾವಣೆಗೂ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿತ್ತು. ಆದರೆ ಅದೀಗ ಹುಸಿಯಾಗಿದೆ. ಎಲ್ಲ ಕಡೆ ಉದ್ಯೋಗ ಬೇಡಿಕೆ ಹೆಚ್ಚಿದ್ದು, ನರೇಗಾದಲ್ಲಿ ಬೇಡಿಕೆ ಅಧಿಕವಾಗುತ್ತಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಗುಜರಾತ್‌ನ ಸೂರತ್ ಪಟ್ಟಣವೊಂದರಲ್ಲೇ 8 ಲಕ್ಷ ಉದ್ಯೋಗ ನಷ್ಟ ಉಂಟಾಗಿದೆ. ಹೀಗೆ ಬಿಜೆಪಿ ಆಡಳಿತದ ಈ ಅವಧಿಯಲ್ಲಿ ಒಟ್ಟು 4.70 ಕೋಟಿ ಉದ್ಯೋಗ ನಷ್ಟ ಉಂಟಾಗಿದೆ ಎಂದು ಐವನ್ ಆರೋಪಿಸಿದರು.
20 ರಿಂದ 24 ಸ್ಥಾನ:
ಈ ಬಾರಿ ಕಾಂಗ್ರೆಸ್ ಕಡೆಗೆ ಎಲ್ಲರ ಒಲವು ಹೆಚ್ಚಾಗಿದೆ. ನಮ್ಮ ಪ್ರವಾಸದಲ್ಲಿ ನಮಗೆ ಹೆಚ್ಚಿನ ಬೆಂಬಲ ಉತ್ಸಾಹ ಕಂಡುಬರುತ್ತಿದೆ. ಸೋಮವಾರ ಬೆಳ್ತಂಗಡಿಯಲ್ಲಿ ನಡೆಯುವ ಪಕ್ಷದ ಪ್ರಚಾರ ಸಭೆಯಲ್ಲಿ ಇದು ಗೊತ್ತಾಗಲಿದೆ. ಸಚಿವರಾದ ಡಿಕೆಶಿವಕುಮಾರ್ ಉದ್ಘಾಟಿಸುವ ಈ ಸಭೆಯಲ್ಲಿ ಸಚಿವರಾದ ಜಯಮಾಲಾ, ಯುಟಿ ಖಾದರ್ ಸಹಿತ ಇನ್ನಿತರ ನಾಯಕರುಗಳು ಭಾಗವಹಿಸಲಿದ್ದಾರೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು 20 ರಿಂದ 24 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಅಂತೆಯೇ ದೇಶದಲ್ಲೇ ಮಿತ್ರಕೂಟಗಳು ಸೇರಿ 340 ಕ್ಕೂ ಅಧಿಕ ಸ್ಥಾನಗಳು ಗೆದ್ದು ಕೇಂದ್ರದಲ್ಲಿಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ, ಕೆಪಿಸಿಸಿ ಉಸ್ತುವಾರಿ ನವೀನ್‌ಚಂದ್ರ ಶೆಟ್ಟಿ, ತರಬೇತುದಾರ ದಿನೇಶ್ ಕೋಟ್ಯಾನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಿ ಅಶ್ರಫ್ ನೆರಿಯ, ರಾಜಶೇಖರ ಶೆಟ್ಟಿ ಮಡಂತ್ಯಾರು, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಶ್ರೀನಿವಾಸ ವಿ ಕಿಣಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.