ಕೊಕ್ಕಡ ಅನಂತ ಪದ್ಮನಾಭ ಶಾಸ್ತ್ರಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಸಂಸ್ಕೃತ ಶಿರೋಮಣಿ, ಕನ್ನಡ ವಿದ್ವಾನ್, ಪ್ರಕಾಂಡ ಪಂಡಿತರಾಗಿದ್ದ ವೇ| ಮೂ| ಕೊಕ್ಕಡ ಅನಂತಪದ್ಮನಾಭ ಶಾಸ್ತ್ರಿ (92 ವ.) ಅವರು ಮಾ. 29ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕೊಕ್ಕಡ ಶ್ರೀಮತಿ ಕ್ಯಾತ್ಯಾಯಿನಿ ಮತ್ತು ವೆಂಕಟರಮಣ ಕೆದಿಲಾಯ ದಂಪತಿ ಪುತ್ರರಾಗಿ ಜನಿಸಿದ ಇವರು ಇವರು ವೇದ, ಉಪನಿಷತ್ತುಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದರು. ಅನೇಕ ಪುಸ್ತಕಗಳನ್ನೂ ರಚಿಸಿದ್ದು, ಧರ್ಮಸ್ಥಳ, ಬಪ್ಪನಾಡು, ಎಲ್ಲೂರು, ಸೌತಡ್ಕ ಮುಂತಾದ ಅನೇಕ ದೇಗುಲಗಳ ಸುಪ್ರಭಾತ, ಭಕ್ತಿಗೀತೆಗಳ ಸಾಹಿತ್ಯವನ್ನೂ ಬರೆದಿದ್ದರು. ಉಜಿರೆ, ಧರ್ಮಸ್ಥಳ, ಕೊಡಗು ಸರಕಾರಿ ಪ್ರೌಢಶಾಲೆ, ಮೂಲ್ಕಿ ಪ.ಪೂ ಕಾಲೇಜುಗಳಲ್ಲಿ ಸಂಸ್ಕೃತ ಪಂಡಿತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ಸಂಸ್ಕೃತ ಹಾಗೂ ವೇದಾಧ್ಯಯನ ಗುರುಕುಲಗಳನ್ನು ಸ್ಥಾಪಿಸಿ ಅನೇಕ ಮಂದಿಗೆ ಶಿಕ್ಷಣ ನೀಡಿದ್ದರು.
2014 ರಲ್ಲಿ ಶಿಶಿಲದಲ್ಲಿ ನಡೆದಿದ್ದ13ನೇ ಬೆಳ್ತಂಗಡಿ ತಾ| ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು.
2009ರಲ್ಲಿ ಸೌತಡ್ಕದಲ್ಲಿ ನಡೆದಿದ್ದ 9ನೇ ಬೆಳ್ತಂಗಡಿ ತಾ| ಕನ್ನಡ ಸಾಹಿತ್ಯ ಸಮ್ಮೇಳನ, ಪಡುಬಿದ್ರಿಯ ಶ್ರೀ ವನದುರ್ಗಾ ಟ್ರಸ್ಟ್ ಹಾಗೂ ಉಡುಪಿಯ ಅಷ್ಟ ಮಠಾಧೀಶರಿಂದಲೂ ಸಮ್ಮಾನಿಸಲ್ಪಟ್ಟಿದ್ದರು. ಪಲಿಮಾರು, ಯೋಗದೀಪಿಕಾ ಗುರುಕುಲದಲ್ಲಿ 10 ವರ್ಷ ಪ್ರಾಚಾರ್ಯರಾಗಿದ್ದರು .

ಮೃತರ ಪುತ್ರ ಕಿನ್ನಿಗೋಳಿಯ ಎಸ್. ಕೋಡಿಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ| ರಾಧಾಕೃಷ್ಣ ಶಾಸ್ತ್ರಿ ಹಾಗೂ ಓರ್ವ  ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರು ಸಹಿತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.