HomePage_Banner_
HomePage_Banner_
HomePage_Banner_

ಪುಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಮ್ಯಾನೆೇಜ್ಮೆಂಟ್ ಡೇ’

ಯಶಸ್ಸಿನ ಕನಸು ನನಸಾಗಲು ಪ್ರಯೋಗಶೀಲತೆ ಅತೀ ಮುಖ್ಯ

ಪುಂಜಾಲಕಟ್ಟೆ : ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ಬಿ.ಬಿ.ಎ ವಿಭಾಗದ ಆಶ್ರಯದಲ್ಲಿ ‘ಮ್ಯಾನೆಜ್ಮೆಂಟ್ ಡೇ ಎಂಬ ಒಂದು ದಿನದ ಕಾರ್ಯಾಗಾರವನ್ನು  ಇತ್ತೀಚೆಗೆ ನಡೆಸಲಾಯಿತು. ಏಸ್ ಪ್ರಮೋಟರ್‍ಸ್ ಆಂಡ್ ಡೆವೆಲಪರ್  ಪಾಲುದಾರ  ಹಾಗೂ ಫ್ರಿಂಜ್ (Spa & salon Mangalore)  ಮಾಲಕ ಜಿತೇಶ್ ಜೈನ್   ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯಾಗಿ ಗಳಿಸಿದ ಜ್ಞಾನ ನೂರಾರು ಮಂದಿಗೆ ಉದ್ಯೋಗಾವಕಾಶ ಕೊಡುವ ಮಟ್ಟಿಗೆ ನನ್ನನ್ನು ಬೆಳೆಸಿತು. ಸ್ವಉದ್ಯೋಗ ಹಾಗೂ ಉದ್ಯಮಶೀಲತೆಯೇ ಇಂದಿನ ಯುವಜನತೆಗೆ ಉತ್ತಮ ಬಾಳನ್ನು ಕಟ್ಟಿಕೊಡಬಲ್ಲದು. ವಿದ್ಯಾರ್ಥಿಗಳು ಜ್ಞಾನವನ್ನು ಗಳಿಸುವುದರೊಂದಿಗೆ ಅದನ್ನು ಪ್ರಾಯೋಗಿಕವಾಗಿ ಅನ್ವಯಿಸಿಕೊಳ್ಳಲು ಮ್ಯಾನೆಜ್ಮೆಂಟ್ ಡೇ ಕಾರ್ಯಕ್ರಮ ಬಹಳ ಪರಿಣಾಮಕಾರಿ ಎಂದು ಅವರು ಅಭಿಪ್ರಾಯಪಟ್ಟರು.

ಪ್ರೊ। ಖಂಡೋಜಿ ಲಮಾಣಿ ಇವರು ಅಧ್ಯಕ್ಷತೆ ವಹಿಸಿದ್ದರು. ನಿರ್ವಹಣಾಶಾಸ್ತ್ರ (ಬಿ.ಬಿ.ಎ) ವಿಭಾಗ ಮುಖ್ಯಸ್ಥೆ  ಪ್ರೊ. ಪ್ರೀತಿ ಕೆ ರಾವ್  ಅತಿಥಿಗಳ ಕಿರುಪರಿಚಯ ಮಾಡಿದರು.  ವಾಣಿಜ್ಯಶಾಸ್ತ್ರ ವಿಭಾಗದ  ಮುಖ್ಯಸ್ಥ ಡಾ. ಲೋಕೇಶ ವಿದ್ಯಾರ್ಥಿಗಳಿಗೆ  ಶುಭ ಹಾರೈಸಿದರು.

ತೃತೀಯ ಬಿ. ಬಿ.ಎ ವಿದ್ಯಾರ್ಥಿನಿಯರಾದ   ಕು.ಪ್ರಜ್ಞಾ ವಂದಿಸಿ, ಕು.ಪ್ರೀತಿ ಕಾರ್‍ಯಕ್ರಮ  ನಿರೂಪಿಸಿದರು. ಈ   ಕಾರ್ಯಾಗಾರದಲ್ಲಿ ಬಿ.ಬಿ.ಎ ವಿದ್ಯಾರ್ಥಿಗಳಿಗಾಗಿ ವ್ಯವಹಾರ ಆಡಳಿತ ಹಾಗೂ ನಿರ್ವಹಣಾಶಾಸ್ತ್ರ ವಿಷಯಗಳ  ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು, ವಿದ್ಯಾರ್ಥಿಗಳ ಎಂಟು ತಂಡಗಳು ವಿವಿಧ ವ್ಯಾಪಾರ ಮಳಿಗೆಗಳನ್ನು ನಡೆಸುವುದರ ಮೂಲಕ ತಮ್ಮ ವ್ಯವಹಾರ ಜ್ಞಾನವನ್ನು ಒರೆಗೆ ಹಚ್ಚಿದರು. ಸುಮಾರು 100 ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.