HomePage_Banner_
HomePage_Banner_
HomePage_Banner_

ಎ.1ರಿಂದ ವಿಜಯ ಬ್ಯಾಂಕ್‌ನ ವ್ಯವಹಾರಗಳು ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಜತೆ ವಿಲೀನ

ವಿಲೀನದ ಬಗ್ಗೆ ಗ್ರಾಹಕರಿಗೆ ಅಧಿಕೃತ ಸಂದೇಶ ರವಾನೆ

ಬೆಳ್ತಂಗಡಿ : ಸಾಕಷ್ಟು ಹೋರಾಟಗಳ ನಡುವೆಯೂ ದಕ್ಷಿಣ ಕನ್ನಡ ಮೂಲದ ವಿಜಯ ಬ್ಯಾಂಕ್ ಕೊನೆಗೂ ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಳಿಸುವ ಸಂಬಂಧ ಇದೀಗ ಅಧಿಕೃತವಾಗಿ ಗ್ರಾಹಕರಿಗೆ ಸಂದೇಶ ರವಾನೆಯಾಗಿದೆ. ಹೀಗಾಗಿ, ಎ.1ರಿಂದ ವಿಜಯ ಬ್ಯಾಂಕ್‌ನ ಅಸ್ತಿತ್ವ ಕಣ್ಮರೆಯಾಗಿ ಅದು ಇತಿಹಾಸದ ಪುಟ ಸೇರಲಿದೆ.
ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡ ಜತೆಗೆ ವಿಲೀನಗೊಳಿಸುವ ನಿರ್ಧಾರ ಘೋಷಣೆಯಾಗುತ್ತಿದ್ದಂತೆ ಕರಾವಳಿ ಭಾಗದಲ್ಲಿ ಅದರಲ್ಲಿಯೂ ದ.ಕ., ಉಡುಪಿ ಜಿಲೆಯಲ್ಲಿ ಸಾಕಷ್ಟು ವಿರೋಧ-ಪ್ರತಿಭಟನೆಗಳು ನಡೆದಿದ್ದವು. ಆದರೆ, ಅಸ್ತಿತ್ವ ಉಳಿಸುವ ಸಂಬಂಧ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳು, ಅಭಿಮಾನಿಗಳ ಹೋರಾಟದ ನಡುವೆಯೂ ವಿಲೀನಗೊಳಿಸುವ ಪ್ರಕ್ರಿಯೆಗಳು ನಡೆದಿತ್ತು. ಕೊನೆಯ ಹಂತದಲ್ಲಿಯಾದರೂ ಲಾಭದಲ್ಲಿರುವ ವಿಜಯ ಬ್ಯಾಂಕ್ ಅನ್ನು ವಿಲೀನ ಪ್ರಕ್ರಿಯೆಯಿಂದ ಕೈಬಿಡಬಹುದು ಎನ್ನುವ ನಿರೀಕ್ಷೆ ಹೋರಾಟಗಾರರಲ್ಲಿ, ಕರಾವಳಿಗರಲ್ಲಿ ಇತ್ತು. ಆ ನಿರೀಕ್ಷೆ ಈಗ ಹುಸಿಯಾಗಿದ್ದು, ಎ.1ರಿಂದ ವಿಜಯ ಬ್ಯಾಂಕ್‌ನ ವ್ಯವಹಾರಗಳು ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಜತೆ ವಿಲೀನಗೊಳ್ಳುವ ಮೂಲಕ ಎಲ್ಲ ಸೇವೆಗಳು ಯಥಾ ಪ್ರಕಾರ ಮುಂದುವರಿಯಲಿದೆ ಎನ್ನುವ ಅಧಿಕೃತ ಎಸ್‌ಎಂಎಸ್ ಸಂದೇಶ ಗುರುವಾರ ಎಲ್ಲ ವಿಜಯ ಬ್ಯಾಂಕ್ ಗ್ರಾಹಕರಿಗೆ ರವಾನೆಯಾಗಿದೆ.
 2019 ಎ. 1 ರಿಂದ ಬ್ಯಾಂಕ್ ಆಫ್ ಬರೋಡ, ವಿಜಯ ಬ್ಯಾಂಕ್, ದೇನಾ ಬ್ಯಾಂಕ್‌ಗಳು ಪರಸ್ವರ ವಿಲೀನಗೊಳ್ಳಲಿವೆ. ಇನ್ನು ಮುಂದಿನ ದಿನಗಳಲ್ಲಿ ನೀವು ದೇಶದ 3ನೇ ಅತಿ ದೊಡ್ಡ ಬ್ಯಾಂಕ್ ನೆಟ್ವರ್ಕ್ ಜತೆ ವ್ಯವಹಾರ ನಡೆಸಲಿದ್ದೀರಿ. ನಿಮ್ಮ ಈಗಿರುವ ಖಾತೆ ಸಂಖ್ಯೆ, ಡೆಬಿಟ್/ ಕ್ರೆಡಿಟ್ ಕಾರ್ಡ್, ಮೊಬೈಲ್ ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಸೇವೆಗಳು ಯಥಾಸ್ಥಿತಿ ಮುಂದುವರಿಯಲಿವೆ. ವಿವರಗಳಿಗೆ ನಿಮ್ಮ ಈಗಿರುವ ವಿಜಯ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ವಿಜಯ ಬ್ಯಾಂಕ್ ಮಾ.28 ರಂದು ಗ್ರಾಹಕರಿಗೆ  ಎಸ್‌ಎಂಎಸ್  ಕಳುಹಿಸಿದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.