ಬೆಳ್ತಂಗಡಿ ಸೋಶಿಯಲ್ ಮೀಡಿಯಾದಲ್ಲಿ ಈ ವಾರ

ರಾಹುಲ್ ಭಾಷಣಕ್ಕೆ ಪಿಲಿಬೈಲ್ ಯಮುನಕ್ಕ ಚಿತ್ರದ ವಾಕ್ಯ ಬೆರೆಸಿ ಹಾಸ್ಯ…!!!!

ರಾಹುಲ್ ಗಾಂಧಿ ಒಂದು ಕಡೆ ಮಾಡಿದ ಭಾಷಣದಲ್ಲಿ ನೀರವ್ ಮೋದಿ ಮೋಧಿಭಾಯಿ…!! ಲಲಿತ್ ಮೋದಿ.. ಮೋದಿ ಬಾಯಿ..!!! ಇತ್ಯಾದಿ  ಶಬ್ಧಗಳನ್ನು ಬಳಸಿ ಆವೇಶಭರಿತವಾಗಿ ಮಾತನಾಡಿದ ತುಣುಕನ್ನು ಆಯ್ದುಕೊಂಡು ಅದರ ಕೊನೆಗೆ ಪಿಲಿಬೈಲು ಯಮುನಕ್ಕ ಚಿತ್ರದಲ್ಲಿನ ಒಂದು ದೃಷ್ಯ ಜೋಡಿಸಿ, ಅರವಿಂದ ಬೋಳಾರ್ ಅವರು ತನ್ನ ಪಕ್ಕದಲ್ಲಿ ಮಲಗಿದ ವ್ಯಕ್ತಿಯನ್ನು ಕರೆದು,…ಅಲ್ಲಿ ಬೀಸಾಡುವಂತಹಾ ವಸ್ತುವೇನಾದರೂ ಕೈ ಸಿಗುವಂತಹದ್ದು ಇದ್ದರೆ ಕೊಡು. ಆತನ ಎದೆಗೆ ಬಿಸಾಡು…ಎಂಬುದಾಗಿ ಡೈಲಾಗ್ ಮಿಕ್ಸ್ ಮಾಡಿದ್ದು ಇದು ಎಲ್ಲರ ವಾಟ್ಸ್‌ಆಪ್‌ಗಳಲ್ಲಿ ಭಾರೀ ಹಾಸ್ಯದ ವೀಡಿಯೋವಾಗಿ ಹರಿದಾಡುತ್ತಿದೆ.

ನಳಿನ್ ಆಟಿ ಕಷಾಯ…-ಔಷಧಿಯ ಗುಣ ಆರೋಗ್ಯಕ್ಕೆ ಒಳ್ಳೆಯದು
ಈ ಬಾರಿಯ ಲೋಕಸಭಾ ಚುನಾವಣೆ ರಂಗೇರುತ್ತಿರುವಂತೆ ಬಿಜೆಪಿ ಪಕ್ಷದಿಂದ ಮತ್ತೊಮ್ಮೆ ನಳಿನ್ ಕುಮಾರ್ ಕಟೀಲ್ ಅವರೇ ಅಭ್ಯರ್ಥಿ ಎಂದು ಘೋಷಣೆಯಾದ ಬೆನ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮೆಸೇಜ್ ಆಟಿ ಕಷಾಯ
ತುಳುನಾಡಿನಲ್ಲಿ ಆಟಿ ಅಮಾವಾಸ್ಯೆಯಂದು ಪಾಲೆದ ಕೆತ್ತೆದ ಕಷಾಯ ಕುಡಿಯುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಅದು ಕಹಿಯಾಗಿದ್ರೂ ಆ ದಿನ ಅದರಲ್ಲಿ ಔಷಧೀಯ ಗುಣ ಒಳಗೊಂಡಿರುತ್ತದೆ ಎಂಬುದು ಹಿರಿಯರು ತಿಳಿಸಿಕೊಟ್ಟ ಪಾಠ. ಆದ್ದರಿಂದ ಅನಿವಾರ್ಯವಾಗಿ ಆ ದಿನ ಕಹಿಯಾದ ಆಟಿ ಕಷಾಯ ಕುಡಿಯಲೇ ಬೇಕಾಗುತ್ತದೆ.
ಅಂತೆಯೇ ಈ ಬಾರಿ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ದೊರೆತಾಗ ಟ್ರೋಲ್ ಆದ ಮೆಸೇಜ್‌ನಲ್ಲಿ,, ನಳಿನ್ ಕುಮಾರ್ ಕಟೀಲ್ ಅವರಿಗೆ ಮತ. ನರೇಂದ್ರ ಮೋದೀಜಿಯವರಿಗಾಗಿ ಮತ ಅವರನ್ನು ಬೆಂಬಲಿಸುವುದು ಅನಿವಾರ್ಯ ಎಂಬರ್ಥದಲ್ಲಿ ಭಾರೀ ಪ್ರಚಾರ ಪಡೆದು ಎಲ್ಲರ ಮುಖದಲ್ಲೂ ನಗು ತರಿಸಿತು.

ಎಸ್‌ಡಿಪಿಐ ನಿಷೇಧ ಮಾಡುವುದಾದರೆ – ಭಜರಂಗ ದಳ ನಿಷೇಧ...!!
ಕಾಂಗ್ರೆಸ್‌ನಿಂದ ಮಿಥುನ್ ರೈ ಅಭ್ಯರ್ಥಿ ಎಂದು ಖಚಿತವಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿಯುತ್ತಿರುವ ಮೆಸೇಜ್ ಬಜರಂಗದಳ ನಿಷೇಧದ ಬಗ್ಗೆ ಮಿಥುನ್ ರೈ ಆಡಿದ್ದಾರೆನ್ನಲಾದ ಭಾಷಣ.
ಇದು ಕಳೆದ ಬಾರಿ ವಿಧಾನ ಸಭಾ ಚುನಾವಣೆಗೂ ಮುನ್ನ ಶೋಭಾ ಕರಂದ್ಲಾಜೆ ಅವರು ರಾಜ್ಯದಲ್ಲಿ ಎಸ್‌ಡಿಪಿಐ ನಿಷೇಧಗೊಳಿಸಬೇಕು ಎಂದು ಧ್ವನಿ ಎತ್ತಿದ್ದ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಿಥುನ್ ರೈ ಅವರು ಪತ್ರಿಕಾಗೋಷ್ಠಿ ನಡೆಸಿ ಅದರಲ್ಲಿ ಮಾತನಾಡುವ ವೇಳೆ, ಎಸ್‌ಡಿಪಿಐ ನಿಷೇಧಕ್ಕೆ ಒತ್ತಾಯಿಸುವುದಾದರೆ ಭಜರಂಗದಳ ಕೂಡ ನಿಷೇಧಕ್ಕೆ ಒತ್ತಾಯಿಸಲಿ ಎಂದಿರುವ ವೀಡಿಯೋವನ್ನು ಹರಿಯಬಿಡಲಾಗಿದೆ. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು, ಮಿಥುನ್ ರೈ ಪ್ರೆಸ್‌ಮೀಟ್ ಫುಲ್ ವೀಡಿಯೋ ಹಾಕಿ ಉತ್ತರ ಕೊಡುವ ಕೆಲಸ ಮಾಡುತ್ತಿದ್ದಾರೆ.

ರಕ್ತ ಮುಖ್ಯವಲ್ಲ….ಮೆದುಳು ಮುಖ್ಯ..!
ರಮಾನಾಥ ರೈ ಅವರ ಬಗ್ಗೆ ಇನ್ನೊಂದು ಸ್ಟೇಟಸ್ ಈ ವಾರ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ರಾಹುಲ್ ಗಾಂಧಿಯವರಲ್ಲಿ ಮೋತಿಲಾಲ್‌ರ ರಕ್ತ ಇದೆ. ಅವರು ದೇಶದ ಪ್ರಧಾನಿಯಾಗುತ್ತಾರೆ ಎಂದು ರಮಾನಾಥ ರೈ ಹೇಳಿದ್ದಾಗಿ ಬರೆದಿರುವ ಪೋಸ್ಟ್‌ನ ಕೆಳಗೆ, ದೇಶದ ಪ್ರಧಾನಿಯಾಗಲು ಮೋತಿಲಾಲ್ ರಕ್ತ ಅಲ್ಲ..ಮಂಡೆಯಲ್ಲಿ ಒಂಚೂರು ಬೊಂಡು ಇರಬೇಕು ಎಂಬುದಾಗಿ ಪೋಸ್ಟ್ ಮಾಡಿದ್ದಾರೆ.
1 ರೂ. ಗೆ 15  ಡಾಲರ್…
ಕೇರಳ ರಾಜ್ಯ ಉಸ್ತುವಾರಿಯಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಕೇರಳದಲ್ಲಿ ಕನ್ನಡದಲ್ಲಿ ಮಾಡಿದ ಭಾಷಣವನ್ನು ಮಲೆಯಾಳಕ್ಕೆ ಭಾಷಾಂತರ ಗೊಳಿಸುವ ಸಂದರ್ಭದ ಒಂದು ಹಂತವನ್ನು ಮಾತ್ರ ಕಟ್‌ ಮಾಡಿ 1  ರೂ.ಗೆ 15 ಡಾಲರ್ ದೊರೆಯುವಂತೆ ಮಾಡಲಿದ್ದಾರೆ ಮೋದಿಜಿಯವರು ಎಂದಿರುವ ವೀಡಿಯೋ ಅರವಿಂದ ಬೋಳಾರ್ ಅವರು ಪ್ರತಿ ಜೋಕ್ ಮಾಡುವ ವೀಡಿಯೋ ವೈರಲ್ ಆಗಿದೆ.

ಮೋದಿ ಸಲುವಾಗಿ ಸಂಸದರನ್ನು ಸಹಿಸಿಕೊಳ್ಳುವ ಸ್ಥಿತಿ ಬಂದಿದೆ –
ಅರ್ಹರಿಗೆ ಆಧರಿಸಿಯೇ ಸೀಟು ಸಿಕ್ಕಿದೆ

ಹೀಗೆಂದು ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಡಾ.ಪ್ರಭಾಕರ ಭಟ್ಟ್ ಅವರು ಹೇಳಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದೆ. ಜೊತೆಗೆ ಮಂಗಳೂರು ಕ್ಷೇತ್ರದಲ್ಲಿ ನಳಿನ್ ಅವರಿಗೆ ಟಿಕೇಟ್ ನೀಡಬಾರದಾಗಿ ಪ್ರಭಾಕರ್ ಭಟ್ ವಿರೋಧ ವ್ಯಕ್ತಪಡಿಸಿದ್ದಾಗಿಯೂ ಪ್ರಚಾರಗಳು ನಡೆದಿವೆ. ಆದರೆ ಈ ಬಗ್ಗೆ ವಾಟ್ಸ್‌ಆಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಸಾಕಷ್ಟು ಪ್ರತ್ಯುತ್ತರಗಳೂ ಬಂದಿದೆ. ನಳಿನ್ ಈ ಕ್ಷೇತ್ರಕ್ಕೆ ಹೊಸಬರೇನೂ ಅಲ್ಲ. ಅವರು ಚುನಾವಣೆ ಸ್ಪರ್ಧಿಸುವ ಅವಕಾಶ ಪಡೆಯುವ ಮುನ್ನ ಈ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟನೆಗಾಗಿ ರಾತ್ರಿ ಹಗಲು ಓಡಾಡಿದವರು.
ಆರ್.ಎಸ್.ಎಸ್ ಕಾರ್ಯಕರ್ತರಾಗಿ ಸಂಘಟನೆ ಮತ್ತು ಬಿಜೆಪಿ ಪಕ್ಷದ ಬಲವರ್ಧನೆಗಾಗಿ ದುಡಿದಿದ್ದಾರೆ. ಅವರ ಅರ್ಹತೆ ಆಧರಿಸಿಯೇ ಅವರಿಗೆ ಸ್ಪರ್ಧೆಗೆ ಅವಕಾಶ ಸಿಕ್ಕಿದೆ ಎಂದು ಹೇಳಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಚುನಾವಣೆಯ ಹಿನ್ನೆಲೆ ಮತ್ತು ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿರುವಂತೆ ಈ ಬಾರಿ ಹಿಂದಿಗಿಂತಲೂ ಹೆಚ್ಚು ಸೋಷಿಯಲ್ ಮೀಡಿಯಾ ಸದ್ದು ಮಾಡುತ್ತಿದೆ. ಚುನಾವಣಾ ಆಯೋಗ ಈ ಬಗ್ಗೆ ವಿಶೇಷ ಸೂಚನೆ ನೀಡಿದ್ದರೂ ಜನ ಮಾತ್ರ ತಮ್ಮ ತಮ್ಮ ನಾಯಕರನ್ನು ಹೊಗಳಿಕೊಳ್ಳಲು ಈ ಮಾಧ್ಯಮವನ್ನು ಇನ್ನಿಲ್ಲದಂತೆ ಬಳಸಿಕೊಳ್ಳುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.