HomePage_Banner_
HomePage_Banner_

ಎ.1: ಕಾಂಗ್ರೆಸ್ ಬಹಿರಂಗ ಚುನಾವಣಾ ಪ್ರಚಾರ ಸಭೆಗೆ ಬೆಳ್ತಂಗಡಿಯಲ್ಲಿ “ಡಿಕೆಶಿ”ಯಿಂದ ಚಾಲನೆ

ವಸಂತ ಬಂಗೇರ ನೇತೃತ್ವದಲ್ಲಿ ಮಿತ್ರ ಪಕ್ಷಗಳಿಂದ ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಲೋಕಸಭಾ ಚುನಾವಣೆ ಪ್ರಯುಕ್ತ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಪರ ಬೆಳ್ತಂಗಡಿ ಅಂಬೇಡ್ಕರ ಭವನದ ಬಳಿಯ ಮೈದಾನದಲ್ಲಿ ಉಭಯ ಜಿಲ್ಲೆಯ ಕಾಂಗ್ರೆಸ್ ಬಹಿರಂಗ ಚುನಾವಣಾ ಪ್ರಚಾರ ಸಭೆಉದ್ಘಾಟನೆ ನಡೆಯಲಿದ್ದು ರಾಜ್ಯದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ. ಈ ಸಮಾವೇಶದಲ್ಲಿ ತಾಲೂಕಿನ 241 ಬೂತ್ ಸಮಿತಿಗಳ ಕಾರ್ಯಕರ್ತರು -ಮತದಾರರು ಭಾಗಿಯಾಗಲಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಬೆಳ್ತಂಗಡಿ ಆಶಾಸಾಲಿಯಾನ್ ಸಭಾಂಗಣದಲ್ಲಿ ಮಾ. 27 ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನಡೆಯುವ ಈ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್, ಮಾಜಿ ಸಚಿವರಾದ ಬಿ ರಮಾನಾಥ ರೈ, ಕೆ ಗಂಗಾಧರ ಗೌಡ, ಜೆಡಿಎಸ್ ಮಾಜಿ ಸಚಿವ ಅಮರನಾಥ ಶೆಟ್ಟಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಮೈತ್ರಿ ಅಭ್ಯರ್ಥಿ, ಪಕ್ಷದ ಭರವಸೆಯ ಯುವ ನಾಯಕ ಮಿಥುನ್ ರೈ ಅವರೂ ಭಾಗವಹಿಸಿ ತಾಲೂಕಿನ ಜನತೆಯ ಮತಯಾಚಿಸಲಿದ್ದಾರೆ. ಅಲ್ಲದೆ ಈ ಸಮಾವೇಶದಲ್ಲಿ ಉಭಯ ಜಿಲ್ಲೆಗಳ ಪಕ್ಷದ ಮುಖಂಡರುಗಳು, ಜನಪ್ರತಿನಿಧಿಗಳು, ಮೈತ್ರಿ ಪಕ್ಷಗಳಾದ ಜೆಡಿಎಸ್- ಸಿಪಿಐಎಂ ಪಕ್ಷದ ಮುಖಂಡರುಗಳು, ಬೆಂಬಲ ನೀಡುವ ಇತರ ಮುಖಂಡರುಗಳು ಭಾಗಿಯಾಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಾಜಶೇಖರ ಅಜ್ರಿ ಮತ್ತು ಶ್ರೀನಿವಾಸ ವಿ ಕಿಣಿ, ಜಿ.ಪಂ ಸದಸ್ಯರಾದ ಪಿ ಧರಣೇಂದ್ರ ಕುಮಾರ್ ಮತ್ತು ನಮಿತಾ, ತಾ.ಪಂ ಸದಸ್ಯ ಪ್ರವೀಣ್ ಗೌಡ, ಕೆಪಿಸಿಸಿ ಸದಸ್ಯ ಪೀತಾಂಬರ ಹೇರಾಜೆ, ಮುಖಂಡರಾದ ಅಭಿನಂದನ್, ಉಷಾ ಶರತ್, ಪಳನಿಸ್ವಾಮಿ, ಗಿರೀಶ್ ಕೋಟ್ಯಾನ್, ಅಬ್ದುಲ್ ರಹಿಮಾನ್ ಪಡ್ಪು, ಪಿ ಕೇಶವ ಗೌಡ ಮತ್ತು ಬಿ ಅಶ್ರಫ್ ನೆರಿಯ, ತಾ| ಮಹಿಳಾ ಜೆಡಿಎಸ್ ಅಧ್ಯಕ್ಷೆ ಸಿಂಧೂದೇವಿ ಉಪಸ್ಥಿತರಿದ್ದರು.

ವಸಂತ ಬಂಗೇರ ಹೇಳಿದ್ದು:
ಚುನಾವಣೆ ಕಾವು ಏರುತ್ತಿರುವಂತೆ ಬಿಜೆಪಿ ಸುಳ್ಳಿನ ಕಂತೆ ಬಿಚ್ಚುತ್ತಿದೆ. ಯುಪಿಎ ಸರಕಾರ, ಸಿದ್ದು ಸರಕಾರ ಹಾಗೂ ಈಗಿನ ಹೆಚ್‌ಡಿಕೆ ನೇತೃತ್ವದ ಸಮ್ಮಿಶ್ರ ಸರಕಾರ  ಅನೇಕ ಜನಪರ ಕೆಲಸ ಮಾಡಿದೆ. ಯುಪಿಎ ಕಾಲದಲ್ಲಿ ಆಗಿರುವಂತೆ ಪಂಚಾಯತ್‌ಗೆ ನೇರ ಅನುದಾನ ಬರುತ್ತಿದೆ. ಹಳ್ಳಿಹಳ್ಳಿಗೆ ವಿದ್ಯುತ್ ಬಂದಿದೆ. ರಾಜ್ಯ ಸರಕಾರದಿಂದ ಸಾಲ ಮನ್ನಾ ಪ್ರಯೋಜನ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಇತ್ಯಾಧಿ ನೇರ ಪ್ರಯೋಯಜನವಾಗಿದೆ. ಇದು ಯಾವುದೂ ಕೇಂದ್ರದ ಸಾಧನೆ ಅಲ್ಲ. ಇದನ್ನೇ ಮುಂದಿಟ್ಟು ಕಾರ್ಯಕರ್ತರು ಈ ಬಾರಿ ಕೆಲಸ ಮಾಡಿ ಪಕ್ಷ ಗೆಲ್ಲಿಸಲಿದ್ದಾರೆ.

ಗಂಗಾಧರ ಗೌಡ ಹೇಳಿದ್ದು: 
ಜಿಲ್ಲೆಗೆ ಕ್ರಿಯಾಶೀಲ ಸಮರ್ಥ ಸಂಸದ ಬೇಕು. ಆ ಸ್ಥಾನವನ್ನು ಯುವ ಮತ್ತು ಶಕ್ತಿವಂತ ಅಭ್ಯರ್ಥಿ ಮಿಥುನ್ ರೈ ಭರಿಸಲಿದ್ದಾರೆ. ಚುನಾವಣೆಯ ಸಂದರ್ಭ ಪ್ರಚಾರದಷ್ಟೇ ಅಪಪ್ರಚಾರಕ್ಕೂ ಮಹತ್ವ ಇದೆ. ಬಿಜೆಪಿ ಈಗ ಅಪಪ್ರಚಾರದ ಮಾರ್ಗ ಹಿಡಿದಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಚತ್ತೀಸ್‌ಘಡ, ರಾಜಸ್ಥಾನ ರಾಜ್ಯಗಳಲ್ಲಿ ಅವರ ಪಕ್ಷ ಅಸ್ತಿತ್ವವನ್ನೇ ಕಳೆದುಕೊಂಡಿದ್ದನ್ನು ಜನ ನೋಡಿದ್ದಾರೆ. ಹೀಗಿರುವಂತೆ ಗಿಮಿಕ್ ನಡೆಯಿತು. ಈ ಬಗ್ಗೆ ನಮಗೆ ಬೇಸರ ಇದೆ. ಅವರು ಇದನ್ನೆ ಮುಂದಿಟ್ಟು ಓಟುಕೊಡಿ ಎಂದು ಕೇಳುತ್ತಿದ್ದಾರೆ. ಇದು ಕಾಕತಾಳಿಯವೋ, ಏನು ಎಂದು ಹೇಳಲು ಸಾಧ್ಯವಿಲ್ಲ. ಇಂದಿರಾ ಗಾಂಧಿ ಇರುವಾಗ ಬಾಂಗ್ಲಾ ವಿಮೋಚನೆ, ಲಾಲ್‌ಬಹದ್ದೂರ್‌ಶಾಸ್ತ್ರಿ, ಜವಾಹರಲಾಲ್ ನೆಹರೂ ಕಾಲದಲ್ಲೂ ಯುದ್ಧಗಳಾಗಿದ್ದು ಇದನ್ನು ಕಾಂಗ್ರೆಸ್ ಓಟಿಗಾಗಿ ಬಳಸಿಕೊಂಡಿಲ್ಲ, ಬಿಜೆಪಿ ಮಾತೆತ್ತಿದರೆ 5 ವರ್ಷದಲ್ಲಿ ತಾವೇ ಕಟ್ಟಿದಂತೆ ದೇಶ-ದೇಶ ಎನ್ನುತ್ತದೆ. ಈ ದೇಶ  ಎಲ್ಲರೂ ಸೇರಿ ಕಟ್ಟಿದಂತಹದ್ದು.
ಇಲ್ಲಿ ರಬ್ಬರ್‌ಗೆ ಬೆಲೆ ಇಲ್ಲ. ಅಡಿಕೆಗೆ ಕೊಳೆರೋಗ ಬಂದಿದ್ದು ರಾಜ್ಯ 69 ಸಾವಿರ ಕೋಟಿ ಸಾಲ ಮನ್ನಾ ಮಾಡಿದರೆ ಕೇಂದ್ರ ಏನೂ ಕೊಟ್ಟಿಲ್ಲ, ಕಸ ಗುಡಿಸುವವರಿಗೆ ಪಿಎಫ್ ಮಾಡಿಸಿ ಉದ್ಯೋಗ ಕೊಟ್ಟಿದ್ದೇವೆ ಎಂದು ತಪ್ಪು ಮಾಹಿತಿ ಕೊಡುತ್ತಿದೆ. ರಾಮನ ಹೆಸರಿನಲ್ಲಿ ಧರ್ಮರಾಜಕಾರಣ ಮಾಡಲು ಹೋಗಿ ವಿಫಲಗೊಂಡು ಈಗ ಹೊಸ ಹುನ್ನಾರ ಮಾಡಿ ಅಪಪ್ರಚಾರದ ಹಾದಿ ಹಿಡಿದಿದೆ. ಆದ್ದರಿಂದ ಜೆಡಿಎಸ್, ಸಿಪಿಐಎಂ ಮಿತ್ರಪಕ್ಷಗಳು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದು ಗೆಲುವಿಗೆ ಶ್ರಮಿಸುತ್ತಿದ್ದಾರೆ. ಚಾರ್ಮಾಡಿ ಶಿರಾಡಿ ಸಂಪಾಜೆ ಮೂರು ಘಾಟ್‌ಗಳು ಮಳೆಗಾದಲ್ಲಿ ಬಂದಾಗುತ್ತಿದ್ದು ನಮ್ಮ ಪ್ರದೇಶ ದ್ವೀಪವಾಗುತ್ತಿದೆ. ಆದರೆ ಸಂಸದರು ಯಾವುದೇ ಕೆಲಸ ಮಾಡಿಲ್ಲ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.