ಮದ್ದಡ್ಕ: ತೋಟಗಾರ ಧರ್ನಪ್ಪ ಗೌಡರಿಗೆ ಬೀಳ್ಕೊಡುಗೆ

ಮದ್ದಡ್ಕ: ತೋಟಗಾರಿಕಾ ಇಲಾಖೆಯಲ್ಲಿ ದಿನಕೂಲಿ ನೌಕರರಾಗಿ, ತೋಟಗಾರರಾಗಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಣಪ್ಪ ಗೌಡ ಇವರಿಗೆ ಬೀಳ್ಕೋಡುಗೆ ಸಮಾರಂಭ ಮಾ.23ರಂದು ಮದ್ದಡ್ಕ ತೋಟಗಾರಿಕಾ ಇಲಾಖೆಯಲ್ಲಿ ಜರುಗಿತು.
ಧರ್ಣಪ್ಪ ಗೌಡರು 1976 ರಲ್ಲಿ ಇಲಾಖೆಗೆ ದಿನಕೂಲಿ ನೌಕರರಾಗಿ ಸೇವೆಗೆ ಸೇರಿದ್ದು, ಸುಮಾರು 10 ವರ್ಷಗಳ ಕಾಲ ದಿನಕೂಲಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ತೋಟಗಾರರಾಗಿ ಸುಮಾರು 29 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ 2019 ಫೆ.28 ರಂದು ಸೇವೆಯಿಂದ ನಿವೃತ್ತರಾದರು. ಇಲಾಖೆಯಲ್ಲಿ ಒಟ್ಟು 29 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಇವರನ್ನು ಇಲಾಖೆ ವತಿಯಿಂದ ಮಾ.23 ರಂದು ಶಾಲು ಹೊದಿಸಿ, ಸ್ಮರಣಿಕೆಯಿತ್ತು ಆತ್ಮೀಯವಾಗಿ ಬೀಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ತೋಟಗಾರಿಕಾ ನಿರ್ದೇಶಕಿ ಕು| ಲಿಖಿತ್‌ರಾಜ್, ಸಹಾಯಕ ತೋಟಗಾರಿಕಾ ಅಧಿಕಾರಿ ಸಂಜೀವ ಹಾಗೂ ಇಲಾಖೆಯ ಸಿಬಂದಿ ವರ್ಗದವರು, ಪ್ರಗತಿಪರ ಕೃಷಿಕರಾದ ಜಗನ್ನಾಥ್ ಶೆಟ್ಟಿ ಹಾಗೂ ಇತರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.