ಕಡಿರುದ್ಯಾವರ: ಯೋಗೀಶ್ ಹೆಬ್ಬಾರ್ ಸಿರಿಬೈಲು ನಿಧನ

Advt_NewsUnder_1
Advt_NewsUnder_1
Advt_NewsUnder_1

ಕಡಿರುದ್ಯಾವರ: ಇಲ್ಲಿನ ಸಿರಿಬೈಲು ನಿವಾಸಿ, ಹಿರಿಯ ಕಾಂಗ್ರೆಸ್ಸಿಗ ಯೋಗೀಶ್ ಹೆಬ್ಬಾರ್ ಸಿರಿಬೈಲು (70ವ.) ಅವರು ಮಾ. 26ರಂದು ಹೃದಯಾಘಾತಕ್ಕೊಳಗಾಗಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಪ್ರತಿಪರ ಕೃಷಿಕರಾಗಿದ್ದ ಅವರು ದೀರ್ಘ ವರ್ಷಗಳಿಂದ ದೂದ್‌ಪೇಡ ತಯಾರಿಯ ಗೃಹ ಉದ್ಯಮ ನಡೆಸುತ್ತಿದ್ದರು. ವ್ಯವಹಾರ ನಿಮಿತ್ತ ಮಂಗಳವಾರದಂದು ಉಜಿರೆ ಪೇಟೆಗೆ ಬಂದಿದ್ದ ಅವರು ಮಧ್ಯಾಹ್ನ ಸಹೋದರನಿಗೂ ಸಹಿತ ಅನೇಕ ಮಂದಿಗೆ ಮಾತನಾಡಲು ಸಿಕ್ಕಿದ್ದು ಎಂದಿನಂತೆ ಲವಲವಿಕೆಯಿಂದಲೇ ಇದ್ದರು. ಮಧ್ಯಾಹ್ನ ಮನೆಗೆ ವಾಪಾಸಾದವರೇ ಒಂದು ಲೋಟ ಹಾಲು ಕುಡಿದು ಮಲಗಿದವರು ಹೃದಯಾಘಾತಕ್ಕೊಳಗಾಗಿ ಅಲ್ಲೇ ಮೃತಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದ ಅವರು ಹಲವು ಬಾರಿ ಚುನಾವಣೆಗೂ ಸ್ಪರ್ಧಿಸಿದ್ದರು.
ಮೃತರು ತಾಯಿ ಪದ್ಮಾಕ್ಷಿ, ಪತ್ನಿ, ತಾ.ಪಂ ಮಾಜಿ ಸದಸ್ಯೆ ಹಾಗೂ ತಾ| ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಭಾರತೀ ಹೆಬ್ಬಾರ್, ಪುತ್ರ, ಪ್ರಸನ್ನ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಕಿರಣ್ ಹೆಬ್ಬಾರ್, ಪುತ್ರಿ, ಕೇರಳದ ಕೊಚ್ಚಿಯಲ್ಲಿರುವ ಶೈಲಾ ಮಹೇಶ್ ಭಟ್, ಅಳಿಯ,4 ಮಂದಿ ಮೊಮ್ಮಕ್ಕಳು, ಸಹೋದರರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.