ಎಸ್.ಡಿ.ಪಿ.ಐ. ಅಭ್ಯರ್ಥಿ ಇಲ್ಯಾಸ್ ತುಂಬೆ, ಇಸ್ಮಾಯಿಲ್ ಶಾಫಿ.ಕೆ ನಾಮಪತ್ರ

Advt_NewsUnder_1
Advt_NewsUnder_1
Advt_NewsUnder_1

ದ.ಕ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಎಸ್.ಡಿ.ಪಿ.ಐ ಅಭ್ಯರ್ಥಿಗಳಾಗಿ ಇಲ್ಯಾಸ್ ಮುಹಮ್ಮದ್ ತುಂಬೆ ಹಾಗೂ ಇಸ್ಮಾಯಿಲ್ ಶಾಫಿ.ಕೆ ಅವರು ಮಾ.25 ರಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ಹಂಂಪನಕಟ್ಟೆ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್‍ಯಾಲಿಯಲ್ಲಿ ಬಂದ ಅವರು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ನಾಮಪತ್ರ ಸಲ್ಲಿಸಿದರು. ಪಕ್ಷದ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ, ಹನೀಫ್ ಖಾನ್ ಕೊಡಾಜೆ, ರಿಯಾಜ್  ಫರಂಗಿಪೇಟೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ನವಾಜ್ ಶರೀಫ್ ಕಟ್ಟೆ, ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಪಿಎಫ್‌ಐ ಪುತ್ತೂರು ಜಿಲ್ಲಾಧ್ಯಕ್ಷ ಇಕ್ಬಾಲ್ ಬಂಗೇರಕಟ್ಟೆ, ಎಸ್‌ಡಿಪಿಐ ತಾಲೂಕು ಸಮಿತಿ ಸದಸ್ಯರಾದ ರಿಯಾಜ್, ಹನೀಫ್ ಪುಂಜಾಲಕಟ್ಟೆ, ಫಝಾಲ್ ಮೂರುಗೋಳಿ, ಫಝಾಲ್ ರಹಿಮಾನ್ ಉಜಿರೆ, ಅಶ್ಫಾಕ್ ಪುಂಜಾಲಕಟ್ಟೆ, ಸಾಧಿಕ್ ಲಾಯಿಲ, ದಾವೂದ್ ಗುರುವಾಯನಕೆರೆ ಮೊದಲಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.