ಅಕ್ರಮ ಹಲಸು ಮರದ ದಿಮ್ಮಿಗಳ ಸಾಗಾಟ, ಪಿಪಕ್ ಸಹಿತ ಆರೋಪಿ ಬಂಧನ: ಓರ್ವ ಪರಾರಿ

ತೆಕ್ಕಾರು: ಇಲ್ಲಿನ ತೆಕ್ಕಾರು ಗ್ರಾಮದ ಅಜಿಲಮೊಗ್ರು ಸೇತುವೆ ಬಳಿ ಪಿಕಪ್ ವಾಹನದಲ್ಲಿ ಯಾವುದೇ ಪರವಾಣಿಗೆ ಇಲ್ಲದೇ ಸರಕಾರದ ಅರಣ್ಯ ಸೊತ್ತಾದ ಹಲಸು ಜಾತಿಯ ಮರಗಳನ್ನು ಅಕ್ರಮವಾಗಿ ಎಲ್ಲಿಂದಲೋ ಕಡಿದು ಸಾಗಾಟ ಮಾಡಿದ ಪ್ರಕರಣವನ್ನು ಪತ್ತೆಹಚ್ಚಲಾಗಿದ್ದು, ಮರದ ದಿಮ್ಮಿ ಸಮೇತ ವಾಹನ ಮತ್ತು ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತರನ್ನು ಪಿಕಪ್ ಚಾಲಕ ಶಾಂತಿಪ್ರಸಾದ್ ಎಂಬರೆಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ ಹಕೀಂ ಓಡಿ ಪರಾರಿಯಾಗಿದ್ದಾರೆ.
ಸ್ವಾಧೀನಪಡಿಸಿಕೊಂಡ ಮರದ ದಿಮ್ಮಿಗಳ ಅಂದಾಜು ಮೌಲ್ಯ ರೂ. 25 ಸಾವಿರ, ಪಿಕಪ್ ವಾಹನದ ಅಂದಾಜು ಮೌಲ್ಯ ರೂ 1.15 ಲಕ್ಷ ರೂ. ಹೀಗೆ ವಶಪಡಿಸಿಕೊಂಡ ಒಟ್ಟು ಎಲ್ಲಾ ಸೊತ್ತಿನ ಮೌಲ್ಯ 1.40 ಲಕ್ಷ ರೂ. ಎಂದು ಉಪ್ಪಿನಂಗಡಿ ಪೊಲೀಸರ ಕೇಸಿನಲ್ಲಿ ದಾಖಲಿಸಲಾಗಿದೆ.
ಅರಣ್ಯ ಕಾಯ್ದೆಯಡಿ ಕೇಸು ದಾಖಲು:
ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ಕಲಂ: 43, 144, 165 ಕರ್ನಾಟಕ ಅರಣ್ಯ ನಿಯಮ ಮತ್ತು ಕಲಂ: 379 ಜೊತೆಗೆ 34 ಐಪಿಸಿ ರಂತೆ ದಾಖಲಾಗಿರುವ ಪ್ರಕರಣದ ವಿಚಾರಣೆ ಆರಂಭವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.