ಅಕ್ರಮ ಪವೇಶ: ಮರ ಕಡಿದು ದಾರಿಗೆ ಅಡ್ಡಿ ನಾಲ್ವರ ವಿರುದ್ಧ ಕೇಸು ದಾಖಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಾಲಾಡಿ: ಇಲ್ಲಿನ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದ ಕೊಲ್ಪೆದಬೈಲು ಎಂಬಲ್ಲಿ ಶಾಲೆಯ ಬೇಲಿ ಹಾಕುವ ನೆಪದಲ್ಲಿ ನಮ್ಮ ಪಟ್ಟಾ ಜಾಗದೊಳಗೆ ಅಕ್ರಮ ಪ್ರವೇಶಿಸಿ ನಮ್ಮ ಮರ ಕಡಿದುರುಳಿಸಿ ಅಂಗಳದಲ್ಲೇ ತಂತಿ ಬೇಲಿ ನಿರ್ಮಿಸಿ ನಮಗೆ ಜಾತಿ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ ಎಂದು ಆಪಾದಿಸಿ ನೀಲಮ್ಮ ಅವರು ನೀಡಿದ ದೂರಿನಂತೆ ನಾಲ್ವರ ವಿರುದ್ಧ ಕೇಸು ದಾಖಲಾಗಿದೆ.
ಮಾಲಾಡಿ ಶಾಲಾ ಪ್ರಭಾರ ಮುಖ್ಯಶಿಕ್ಷಕ ಜಯರಾಜ್ ಜೈನ್, ಮಡಂತ್ಯಾರು ತಾ.ಪಂ ಕ್ಷೇತ್ರದ ಸದಸ್ಯ ಜೋಯೆಲ್ ಮೆಂಡೋನ್ಸಾ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪ್ರವೀಣ್ ಪೂಜಾರಿ ಮತ್ತು ಸದಸ್ಯ ಸತೀಶ ಇವರ ಮೇಲೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇವರುಗಳು ನಮಗೆ ಜಾತಿ ನಿಂದನೆ ಕೂಡ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಅಲ್ಲದೆ ಮಾ. 23 ರಂದು ಸ್ಥಳ ವೀಕ್ಷಣೆಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ದೂರುದಾರೆ ನೀಲಮ್ಮ ಅವರು, ಸದ್ರಿಯವರು ನಿರ್ಮಿಸಿದ ಬೇಲಿಯಿಂದಾಗಿ ನಮ್ಮ ಮನೆಗೆ ಹೋಗುವ ದಾರಿಗೆ ತೊಂದರೆಯಾಗಿದೆ. ಅಲ್ಲದೆ ಅನಾರೋಗ್ಯದಿಂದಿರುವ ನನ್ನ ತಾಯಿಯನ್ನು ಇದೇ ಕಾರಣದಿಂದ ಇಲ್ಲಿಂದ ಬೇರೆ ಮನೆಗೆ ಸ್ಥಳಾಂತರಿಸುವಂತಾಗಿದೆ. ಬೇಲಿ ನಿರ್ಮಿಸಿ ಅಕ್ರಮ ರಸ್ತೆ ನಿರ್ಮಿಸಲು ಹೊರಟಿರುವ ಜಾಗ ನಮ್ಮ ಪಟ್ಟಾ ಜಾಗಕ್ಕೆ ಸೇರಿದ್ದಾಗಿದೆ ಎಂದು ತಿಳಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.