ಕಾಪಿನಡ್ಕ: ಬಳೆಂಜ ಗ್ರಾಮ ಕಾಪಿನಡ್ಕ ಎಂಬಲ್ಲಿ ಜೆಸಿಬಿ ಚಾಲಕನ ನಿರ್ಲಕ್ಷ್ಯತನದಿಂದಾಗಿ ಯಂತ್ರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು ಪರಿಸರದಾದ್ಯಂತ ವಿದ್ಯುತ್ ವ್ಯತ್ಯಯವಾಗಿದೆ.
ಗುರುವಾಯನಕೆರೆ- ನಾರಾವಿ ರಾಜ್ಯ ಹೆದ್ದಾರಿಯಲ್ಲಿ ಜೆಸಿಬಿ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದ್ದು ಪರಿಣಾಮ ಕಾಪಿನಡ್ಕ, ಬಳಂಜ, ಕೆದ್ದು, ಅಳದಂಗಡಿ, ಸೋಳಬೆಟ್ಟು, ಪಿಲ್ಯ,ಇತ್ತ ಸವಣಾಲು, ಶಿರ್ಲಾಲು ಗ್ರಾಮದ ಕೆಲ ಭಾಗಗಳಲ್ಲೂ ವಿದ್ಯುತ್ ವ್ಯತ್ಯವಾಗಿದೆ. ಇಲ್ಲಿನ ನಿವಾಸಿಗಳಿಗೆ ಮೊಬೈಲ್ ಫೋನ್ ಕೂಡ ಚಾರ್ಚ್ ಮಾಡಲಾಗದೆ ಪರಿತಪಿಸುವಂತಾಯಿತು. ಅಲ್ಲದೆ ಇದೀಗ ತೀವ್ರ ಬಿಸಿಲು ಇದ್ದು ಕೃಷಿ ತೋಟಕ್ಕೆ ನೀರು ಹಾಯಿಸಲು ಪಂಪ್ ಚಾಲನೆಗೂ ಸಮಸ್ಯೆ ಎದುರಾಗಿ ಜನ ಕಂಗಾಲಾದ ಬಗ್ಗೆಯೂ ವರದಿಯಾಗಿದೆ. ಜೆಸಿಬಿ ಮಾಲಕರ ವಿರುದ್ಧ ಸಂಬಂಧಿತ ಇಲಾಖೆ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.