ಬೆಳ್ತಂಗಡಿ ನ್ಯಾಯಾಧೀಶರುಗಳಿಗೆ ವಕೀಲರ ಸಂಘದಿಂದ ಸ್ವಾಗತ ಕಾರ್ಯಕ್ರಮ

Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಬೆಳ್ತಂಗಡಿ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶರಾಗಿ ಭಡ್ತಿಗೊಂಡ ಕೆ.ಎಂ ಆನಂದ ಹಾಗೂ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡ ಸತೀಶ್ ಕೆ.ಜಿ ಇವರನ್ನು ಸ್ವಾಗತಿಸುವ ಕಾರ್ಯಕ್ರಮ ಮಾ.25 ರಂದು ಜರುಗಿತು.
ವಕೀಲರ ಸಂಘದ ವತಿಯಿಂದ ಇಬ್ಬರು ನ್ಯಾಯಾಧೀಶರನ್ನು ಹೂ ಗುಚ್ಚ ನೀಡಿ ಸ್ವಾಗತಿಸಲಾಯಿತು. ನ್ಯಾಯಾಧೀಶರಾದ ಕೆ.ಎಂ ಆನಂದ ಅವರು ಮಾತನಾಡಿ, ಬೆಳ್ತಂಗಡಿ ವಕೀಲರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಸಾಮಾನ್ಯರಿಗೆ ಶೀಘ್ರವಾಗಿ ನ್ಯಾಯ ಒದಗಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ಎರಡು ಸಾವಿರ ಕೇಸ್ ಪೈಲ್‌ಗಳಿದ್ದು, ಇವುಗಳ ಶೀಘ್ರ ವಿಲೇಗೆ ಎಲ್ಲಾ ವಕೀಲರುಗಳು ಸಹಕಾರ ನೀಡಬೇಕು ಎಂದರು.
ನೂತನ ನ್ಯಾಯಾಧೀಶರಾದ ಸತೀಶ್ ಕೆ.ಜಿ ಯವರು ಮಾತನಾಡಿ ಬಾರ್ ಮತ್ತು ಬೆಂಚ್ ಒಂದೇ ನ್ಯಾಣ್ಯದ ಎರಡು ಮುಖಗಳಿದ್ದಂತೆ, ಇವುಗಳೆರಡು ಸಮರ್ಪಕವಾಗಿ ಕೆಲಸ ಮಾಡಿದರೆ ಮಾತ್ರ ಕಲಾಪಗಳು ಸುಗಮವಾಗಿ ನಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ ಅವರು ಮಾತನಾಡಿ, ಬೆಳ್ತಂಗಡಿ ವಕೀಲರ ಸಂಘ ಉತ್ತಮ ಸಹಕಾರಗಳನ್ನು ನೀಡುತ್ತಿದ್ದು, ವಕೀಲರ ವೈಯಕ್ತಿಕ ಸಮಸ್ಯೆಗಳು ಬಂದಾಗ ಇದನ್ನು ಅರಿತುಕೊಂಡು ಬೆಂಚ್ ಸಹಕರಿಸಬೇಕು. ಬೆಂಚ್ ಮತ್ತು ಬಾರ್ ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಶೀಘ್ರವಾಗಿ ನ್ಯಾಯದಾನ ದೊರೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಕೆಲಸ ಮಾಡಿದಾಗ ಶೀಘ್ರವಾಗಿ ನ್ಯಾಯದಾನ ದೊರೆಯಲು ಸಾಧ್ಯವಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ವಕೀಲರಾದ ನೇಮಿರಾಜ ಶೆಟ್ಟಿ, ಹಿರಿಯ ವಕೀಲರ ಸಂಘದ ಅಧ್ಯಕ್ಷ ಶಶಿಕಿರಣ್ ಜೈನ್ ಉಪಸ್ಥಿತರಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಮನೋಹರ ಕುಮಾರ್ ಸ್ವಾಗತಿಸಿದರು. ವಕೀಲ ಶೈಲೇಶ್ ಠೋಸರ್ ಕಾರ್ಯಕ್ರಮ ನಿರೂಪಿಸಿ, ವಕೀಲ ಶ್ರೀನಿವಾಸ ಗೌಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.