ಧರ್ಮಸ್ಥಳದ ಬಸ್ ನಿರ್ವಾಹಕಿ ಇಂದಿರಾ ರ್‍ಯಾಗಿಗೆ ಚೂರಿ ಇರಿದ ಪ್ರಕರಣ: ಆರೋಪಿಗೆ ಕಠಿಣ ಜೈಲು ಶಿಕ್ಷೆ 

ಬೆಳ್ತಂಗಡಿ: ಧರ್ಮಸ್ಥಳ ಡಿಪ್ಪೋದ ಬಸ್ ನಿರ್ವಾಹಕಿ ಇಂದಿರಾ ರ್‍ಯಾಗಿಯವರಿಗೆ 5 ವರ್ಷದ ಹಿಂದೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ, ಬಿಜಾಪುರದ ರಾಮನಗರ ನಿವಾಸಿ ಮೋಹನ್ ಅವರ ಪುತ್ರ ಪ್ರಕಾಶ್ ವಲ್ಲಾಪುರ(36.ವ) ಎಂಬಾತನಿಗೆ ಪುತ್ತೂರು 5ನೇ ಹೆಚ್ಚುವರಿ ಸತ್ರ ಜಿಲ್ಲಾ ನ್ಯಾಯಾಲಯ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ರೂ.10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
2014 ಮಾ.19ರಂದು ಧರ್ಮಸ್ಥಳ ಡಿಪ್ಪೋದಿಂದ ಸುಳ್ಯ, ಕಾಸರಗೋಡು ಹೋಗಿ ಬಸ್ ಸುಬ್ರಹ್ಮಣ್ಯ ಬಸ್ ನಿಲ್ದಾಣಕ್ಕೆ ಬಂದಾಗ ಪ್ರಕಾಶ್ ವಲ್ಲಾಪುರ ಬಸ್‌ನಲ್ಲಿದ್ದ ತನ್ನ ಪತ್ನಿ ನಿರ್ವಾಹಕಿ ಇಂದಿರಾ ರ್‍ಯಾಗಿ ಅವರಿಗೆ ಚೂರಿಯಿಂದ ತಿವಿದು ಗಂಭೀರ ಗಾಯಗೊಳಿಸಿದ್ದರು. ಸುಬ್ರಹ್ಮಣ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ಕೇಸು ದಾಖಲಿಸಿಕೊಂಡು ಆರೋಪ ಪಟ್ಟಿನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಘಟನೆ ವಿವರ: ಗುತ್ತಿಗೆ ಆಧಾರದಲ್ಲಿ ಮೆಸ್ಕಾಂ ಬಿಲ್ ರೀಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಪ್ರಕಾಶ್ ಅವರು ಧರ್ಮಸ್ಥಳ ಡಿಪ್ಪೋದ ಬಸ್ ನಿರ್ವಾಹಕಿಯಾಗಿರುವ ಇಂದಿರಾ ರ್‍ಯಾಗಿ ಅವರನ್ನು 2013ರಲ್ಲಿ ವಿವಾಹವಾಗಿದ್ದು, ಉಜಿರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು.
ಕಾಲಕ್ರಮೇಣ ಪ್ರಕಾಶ್ ಕೆಲಸಕ್ಕೆ ಹೋಗದೆ ಪತ್ನಿಯನ್ನು ಬೆದರಿಸಿ ಆಕೆಯ ಸಂಬಳವನ್ನು ಕೇಳಿ ಪಡೆಯುತ್ತಿದ್ದು, 2014ರ ಮಾ.19ರಂದು ಇಂದಿರಾ ರ್‍ಯಾಗಿ ಅವರು ನಿರ್ವಾಹಕಿಯಾಗಿ ಧರ್ಮಸ್ಥಳದಿಂದ ಸುಳ್ಯ, ಕಾಸರಗೋಡು ಹೋಗಿ ಹಿಂದಿರುಗುವ ಬಸ್‌ನಲ್ಲಿ ಕರ್ತವ್ಯಕ್ಕೆ ತೆರಳಿದ್ದರು. ಸಂಜೆ ಬಸ್ ಸುಳ್ಯ ಬಸ್ ನಿಲ್ದಾಣಕ್ಕೆ ಬಂದಿತ್ತು. ಅದೇ ಬಸ್‌ನಲ್ಲಿ ಇಂದಿರಾ ರ್‍ಯಾಗಿ ಅವರ ಪತಿ ಪ್ರಕಾಶ್ ಕೂಡಾ ಇದ್ದರು. ಪ್ರಯಾಣಿಕರು ಎಲ್ಲರೂ ಬಸ್‌ನಿಂದ ಇಳಿದ ಬಳಿಕ ಪ್ರಕಾಶ್ ಅವರು ಬಸ್‌ನಲ್ಲಿದ್ದ ಪತ್ನಿಯ ಬಳಿಗೆ ಹೋಗಿ ಆಕೆಯ ಎದೆ, ಬಲ ಕಾಲು, ಕೆನ್ನೆಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದರು. ಕೂಡಲೇ ಇಂದಿರಾ ರ್‍ಯಾಗಿಯವರನ್ನು ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು.
ಬಸ್‌ನಲ್ಲಿದ್ದ ಆರೋಪಿ ಪ್ರಕಾಶ್‌ನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿ, ಕೇಸು ದಾಖಲಿಸಿಕೊಂಡಿದ್ದರು. ಆಗಿನ ಇನ್‌ಸ್ಪೆಕ್ಟರ್ ಮಹದೇವ ಶೆಟ್ಟಿಯವರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿಯ ಮೇಲಿನ ಆರೋಪ ಸಾಬೀತಾಗಿದ್ದು ಮಾ.21ರಂದು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಮೇಲಿನ ಪ್ರಕರಣ ಸೆಕ್ಷನ್ 498(ಎ)ಗೆ 1 ವರ್ಷ ಜೈಲು, ರೂ.4 ಸಾವಿರ ದಂಡ, ಸೆಕ್ಷನ್337ಕ್ಕೆ 7 ವರ್ಷ ಜೈಲು ಮತ್ತು ರೂ.5 ಸಾವಿರ ದಂಡ, ಸೆಕ್ಷನ್ 307ಕ್ಕೆ 7 ವರ್ಷ ಜೈಲು ಮತ್ತು ರೂ.10ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಶಿವಣ್ಣ ಅವರು ತೀರ್ಪು ನೀಡಿದ್ದಾರೆ. ಪ್ರಕರಣದ ವಿಚಾರಣೆಯ ಹಂತದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಆಗಿನ ಸರಕಾರಿ ಅಭಿಯೋಜಕ ಉದಯ ಕುಮಾರ್ ವಾದ ಮಂಡನೆ ಮಾಡುತ್ತಿದ್ದರು. ಇದೀಗ ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.