ಮಾಯಾ ಮಹಾದೇವ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನಾಚರಣೆ

ಬೆಳಾಲು : ಶ್ರೀ ಮಾಯಾ ಮಹಾದೇವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಬಳಿಕ ಮೂರನೇ ವರ್ಷದ ಪ್ರತಿಷ್ಠಾ ದಿನಾಚರಣೆ ಮಾ.24ರಂದು ವೇ.ಮೂ.ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಜರಗಿತು.
ಗಣಹೋಮ ಕಲಶಾಭಿಷೇಕ, ರುದ್ರಾಭಿಷೇಕ, ಮಹಾಪೂಜೆ ನೆರವೇರಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಪದ್ಮಗೌಡ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಮಾಯಾಗುತ್ತು ಪುಷ್ಪದಂತ ಜೈನ್, ರಾಜಪ್ಪ ಗೌಡ ಪುಚ್ಚೆಹಿತ್ತಿಲು, ಗಂಗಯ್ಯಗೌಡ ಅದವೂರು, ನಾಣ್ಯಪ್ಪ ಪೂಜಾರಿ ಮುಂಡ್ರೊಟ್ಟು, ದಿನೇಶ್ ಎಂ.ಕೆ, ಅರ್ಚಕ ಕೇಶವ ರಾಮಯಾಜಿ, ಸುಕನ್ಯಾ ನಾರಾಯಾಣ ಮಂಜನೊಟ್ಟು ಚಂದ್ರಾಚತಿ ಕೊಲ್ಲಿಮಾರು, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ, ಶೇಖರ ಗೌಡ ಕೊಲ್ಲಿಮಾರು, ರುಕ್ಮಯ್ಯ ಗೌಡ ಪರಾರಿ, ಸಮಿತಿಯ ಸದಸ್ಯರುಗಳು, ಊರವರು ಭಾಗವಹಿಸಿ ಸಹಕರಿಸಿದರು. ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ನಾರಾಯಣ ಸುವರ್ಣ ಜಾತ್ರಾ ಉತ್ಸವದ ಲೆಕ್ಕಪತ್ರ ಮಂಡಿಸಿದರು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.