“ಮಕ್ಕಳು ನಾವು” ರಕ್ಷಣೆ- ನಮ್ಮ ಹಕ್ಕು ಬೀದಿ ನಾಟಕ ಪ್ರದರ್ಶನ

ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ ದಯಾಳ್‌ಬಾಗ್ ಗ್ರಾಮಾಭಿವೃದ್ಧಿ ಯೋಜನೆ ವಿಮುಕ್ತಿ ಲಾಯಿಲ, ವಿಮುಕ್ತಿ ಚೈಲ್ಡ್ ಫಂಡ್ ಯೋಜನೆ ಸಹಯೋಗದೊಂದಿಗೆ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಮಿಲಾಗ್ರಿಸ್ ಕಾಲೇಜು ಉಡುಪಿ ಇದರ ವಿದ್ಯಾರ್ಥಿಗಳು ಅಭಿನಯಿಸುವ ಮಕ್ಕಳ ದೌರ್ಜನ್ಯ ಮತ್ತು ರಕ್ಷಣೆಯ ಕುರಿತಾದ ಬೀದಿ ನಾಟಕ ಮಕ್ಕಳು ನಾವು ರಕ್ಷಣೆ ನಮ್ಮ ಹಕ್ಕು ನಾಟಕ ಬೆಳ್ತಂಗಡಿ ಬಸ್ಸು ತಂಗುದಾಣದಲ್ಲಿ ನಡೆಯಿತು.
ದಯಾಳ್‌ಬಾಗ್ ಸಂಸ್ಥೆಯ ಉಪಾಧ್ಯಕ್ಷ ರೆ. ಫಾ.ವಿಜಯ್ ಉದ್ಘಾಟನೆ ನೆರವೇರಿಸಿದರು. ಸಮಾರಂಭದಲ್ಲಿ ವಿಮುಕ್ತಿ ವಿವಿಧ ವಿಭಾಗದ ಕಾರ್ಯಕರ್ತರಾದ ಅಶೋಕ್, ಎಮಿಲ್ಡಾ, ಫ್ರಾನ್ಸಿಸ್, ಅನ್ವಿತಾ, ಸವಿತಾ, ಶೋಭಾ, ಹಿಲ್ಡಾ, ಸಿದ್ದಾಂತ್, ಇವರುಗಳು ಭಾಗಿಯಾಗಿದ್ದರು.
ಉಡುಪಿ ಕಾಲೇಜಿನ ಪ್ರಾಧ್ಯಾಪಕ ವಿಘ್ನೇಶ್ ಹೊಳ್ಳ ಅವರ ನೇತೃತ್ವ ಮತ್ತು ಹಿನ್ನೆಲೆ ಗಾಯನದೊಂದಿಗೆ 20 ನಿಮಿಷಗಳ ಬೀದಿ ನಾಟಕ ಪ್ರದರ್ಶನಗೊಂಡಿತು. ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ, ಮಹಿಳಾ ಶೋಷಣೆ ಬಗ್ಗೆ ಜಾಗೃತಿಯ ಸಂದೇಶದ ಮೇಲೆ ಈ ನಾಟಕ ಪ್ರದರ್ಶನ ನಡೆಯಿತು.
ಬೆಳ್ತಂಗಡಿ ಬಸ್ಸು ತಂಗುದಾಣ, ಉಜಿರೆ, ಸಂತೆಕಟ್ಟೆ ಮತ್ತು ಗುರುವಾಯನಕೆರೆ ಬಸ್ಸು ನಿಲ್ದಾಣ ಈ ನಾಲ್ಕು ಕೇಂದ್ರಗಳಲ್ಲಿ ಯಶಸ್ವಿ ಪ್ರದರ್ಶನ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.