ಡಿಸಿ ಮನ್ನಾ ಭೂಮಿ ಸಂರಕ್ಷಣೆ-ಅರ್ಹರಿಗೆ ಹಂಚಿಕೆ ವಿಚಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತಹಶಿಲ್ದಾರರ ಮಿಲಿಟರಿ ದರ್ಪಕ್ಕೆ ಚುನಾವಣೆ ಬಳಿಕ ತಕ್ಕ ಉತ್ತರ: ಡಿಎಸ್‌ಎಸ್ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ 

ಮಾಲಾಡಿ: ಇನ್ನೂ ರಾಜ್ಯದಲ್ಲಿ ದಲಿತ ಸಮಾಜ ಭೂರಹಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಅವರಿಗಾಗಿ ಮೀಸಲಿಟ್ಟ ಡಿಸಿ ಮನ್ನಾ ಭೂಮಿಯ್ನು ಬಲಾಡ್ಯರು, ಮಠ ಮಾನ್ಯಗಳು ಕಬಳಿಸಿಕೊಂಡಿದ್ದಾರೆ. ಈ ಬಗ್ಗೆ ಸಚಿವರಿಗೆ ಸರಕಾರಕ್ಕೆ ಮಾಹಿತಿ ನೀಡಲಾದರೂ ಇದುವರೆಗೆ ಯಾವುದೇ ಕ್ರಮ ಆಗಿಲ್ಲ, ಈ ಭೂಮಿಗಳನ್ನು ವಶಪಡಿಸಿಕೊಂಡು ಅರ್ಹರಿಗೆ ಹಂಚುವ ಇಚ್ಛಾಶಕ್ತಿ ಈ ಸರಕಾರಕ್ಕಿಲ್ಲ. ಬೆಳ್ತಂಗಡಿಯಲ್ಲೂ ಕೂಡ ಈ ವಿಚಾರದಲ್ಲಿ ಅನ್ಯಾಯವಾಗಿದ್ದು, ಡಿಸಿ ಮನ್ನಾ ಭೂಮಿಯ ಬಗ್ಗೆ ಅರಿವು ಮತ್ತು ಮಾಹಿತಿ ಇಲ್ಲದ ಇಲ್ಲಿನ ತಹಶಿಲ್ದಾರರು ತಾವು ಈ ಹಿಂದೆ ಇದ್ದ ಮಿಲಿಟರಿ ದರ್ಪವನ್ನು ದಲಿತರ ಮೇಲೆ ಪ್ರಯೋಗಿಸಲು ಹೊರಟಿದ್ದಾರೆ. ಮಾಲಾಡಿಯಲ್ಲೂ ಕೂಡ ಇದೇ ಕೆಲಸ ಆಗಿದೆ. ಸ್ವತಃ ತಾ.ಪಂ ಉಪಾಧ್ಯಕ್ಷರೇ ಡಿಸಿ ಮನ್ನಾ ಭೂಮಿ ಕಬಳಿಸಿದ್ದು ತಾಕತ್ತಿದ್ದರೆ ಈ ತಹಶಿಲ್ದಾರರು ಅವರನ್ನು ಇಲ್ಲಿಂದ ಹೊರದಬ್ಬಲಿ. ಡಿಎಸ್‌ಎಸ್‌ನ ಈ ಸವಾಲನ್ನು ಅವರು ಸ್ವೀಕರಿಸಲಿ. ಇಲ್ಲದಿದ್ದರೆ ಚುನಾವಣೆ ಬಳಿಕ ಮುಂದಿನ ಹೋರಾಟ ನಡೆಸಲಾಗುವುದು ಎಂದು ಡಿಎಸ್‌ಎಸ್ ರಾಜ್ಯ ಪ್ರ. ಸಂಚಾಲಕ ಮಾವಳ್ಳಿ ಶಂಕರ್ ಎಚ್ಚರಿಕೆ ನೀಡಿದರು.
ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಮಾ. 23 ರಂದು ಕರೆಯಲಾಗಿದ್ದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ತಹಶಿಲ್ದಾರರು ಓರ್ವ ಸರಕಾರಿ ನೌಕರ ಅಷ್ಟೇ. ಅಧಿಕಾರ ದುರುಪಯೋಗಪಡಿಸಿಕೊಂಡು ಅಮಾಯಕರ ಮೇಲೆ ಕೇಸು ಹಾಕಿ ಬೆದರಿಸುವುದು ತುಂಬಾ ದಿನ ನಡೆಯೂದಿಲ್ಲ. ಮಾಲಾಡಿ ಪ್ರಕರಣದಲ್ಲಿ ಇದರ ಹಿಂದೆ ಯಾರದೆಲ್ಲಾ ಸಂಚು ಇದೆ ಎಂಬುದು ಸ್ಪಷ್ಠವಾಗಿ ಗೋಚರವಾಗುತ್ತಿದೆ. ಶಾಸಕರೂ ಇರಬಹುದು. ಕೊಯ್ಯೂರು ಗ್ರಾಮದಲ್ಲಿರುವ ಡಿಸಿ ಮನ್ನಾ ಭೂಮಿಯ ಬಗ್ಗೆ ತಹಶಿಲ್ದಾರರು ತಪ್ಪು ಅಂಕಿಅಂಶ ಕೊಟ್ಟಿದ್ದು ಅವರಿಗೆ ಮಾಹಿತಿಯೇ ಇಲ್ಲ.
ನಮ್ಮ ನಾಡಿನಲ್ಲಿ ರಾಮಜನ್ಮಭೂಮಿಗೆ ಜಾಗ ಬೇಕು ಎಂದು ಕೇಳ್ತಾರೆ ಇರಲಿ ನಮ್ಮ ಅಭ್ಯಂತರ ಇಲ್ಲ. ಆದರೆ ದಲಿತರಿಗೆ ಜೀವನೋಪಾಯಕ್ಕಾಗಿ ಡಿಸಿ ಮನ್ನಾ ಭೂಮಿ ಕೂಡ ಬೇಕು ಎಂದಷ್ಟೇ ನಾವು ಕೇಳುತ್ತಿದ್ದೇವೆ. ಮಾಲಾಡಿ ಕೇಸಿನಲ್ಲಿ ಟಾಸ್ಟ್‌ಪೋರ್ಸ್ ಅನ್ನೂ ಮೀರಿ ತಹಶಿಲ್ದಾರರು ನಡೆದುಕೊಂಡಿದ್ದಾರೆ. ಚುನಾವಣೆ ಸಂದರ್ಭ ಕೆಎಲ್‌ಆರ್ ಆಕ್ಟ್ ಏನೆಂದು ಗೊತ್ತಿಲ್ಲದ ತಹಶಿಲ್ದಾರರು ಬೇನಾಮಿ ಹಣದಲ್ಲಿ ಕಲ್ಲುಬೇಲಿ ಹಾಕಿಸಿದ್ದು ತಪ್ಪು. ಈ ಹಿಂದಿನಂತೆ ಈ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಮುಕ್ತವಾಗಿಡಬೇಕು. ಅಲ್ಲದೆ ಇಲ್ಲಿ ೨ ದಲಿತ ಕುಟುಂಬಗಳಿಗೆ ದಿಗ್ಬಂಧನ ಹಾಕುವ ಕೆಲಸವೂ ನಡೆದಿದೆ. ಇದನ್ನು ಸಂಘಟನೆ ಸಹಿಸಿಕೊಳ್ಳದು. ಮುಂದಕ್ಕೆ ಸೂಕ್ತವಾಗಿ ಪ್ರತಿಕ್ರೀಯಿಸಲಿದೆ. ಅಲ್ಲದೆ ಅಮಾಯಕರ ಮೇಲೆ ಹಾಕಲಾದ ಕೇಸನ್ನು ಬೇಶರತ್ ಆಗಿ ವಾಪಾಸು ಪಡೆಯಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ಪುದುವೆಟ್ಟು, ಡೀಕಮ್ಮ, ತಾ| ಸಂಚಾಲಕ ನೇಮಿರಾಜ್ ಕಿಲ್ಲೂರು, ಶ್ರೀಧರ ಕಳೆಂಜ, ಶ್ರೀನಿವಾಸ ಕೆ, ತಾ.ಪಂ ಸದಸ್ಯ ಓಬಯ್ಯ, ಸತೀಶ್, ಬಿ.ಕೆ ಶೇಖರ್, ಜನಾರ್ದನ ಸುದೆಮುಗೇರು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.