ವೇಣೂರು: ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Advt_NewsUnder_1
Advt_NewsUnder_1
Advt_NewsUnder_1

ಜೀರ್ಣೋದ್ಧಾರದ ಯೋಗ, ಭಾಗ್ಯ ನಮ್ಮದು: ಕಟೀಲು ಅಸ್ರಣ್ಣ

ವೇಣೂರು: ದೇಗುಲಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗಲು ಯೋಗ, ಭಾಗ್ಯ ಬೇಕು. ಅದೀಗ ನಮಗೆ ಲಭಿಸಿದೆ. ಯಾವುದೇ ದ್ವೇಷ, ಅಸೂಯೆ, ತಾರತಮ್ಯ ಇಲ್ಲದೆ ಭದ್ರಕಾಳಿ ದೇವಿಗೆ ದೇಗುಲ ನಿರ್ಮಾಣ ಆಗಿದೆ. ಇಲ್ಲಿಯ ಪ್ರಧಾನ ದೇವರ ದೇಗುಲ ನಿರ್ಮಾಣಕ್ಕೂ ಸಂಕಲ್ಪ ಮಾಡಬೇಕಿದೆ. ಈ ಮೂಲಕ ಭವ್ಯ ದೇಗುಲ ನಿರ್ಮಾಣ ಆಗಲಿ ಎಂದು ಶ್ರೀ ಕ್ಷೇತ್ರ ಕಟೀಲಿನ ಅಸ್ರಣ್ಣರಾದ ವೇ|ಮೂ| ಅನಂತ ಪದ್ಮನಾಭ ಅಸ್ರಣ್ಣ ಹೇಳಿದರು.
ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ. 22ರಂದು ಜರಗಿದ ಶ್ರೀ ಭದ್ರ ಮಹಾಕಾಳಿ ದೇವಿಯ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿ, ಭಕ್ತರು ಹಾಗೂ ದಾನಿಗಳ ಸಹಕಾರದಿಂದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವೂ ಶೀಘ್ರ ನೆರವೇರುವಂತಾಗಲಿ ಎಂದರು.
ಜೀರ್ಣೋದ್ಧಾರ ಸಮಿತಿಯ ತಾಂತ್ರಿಕ ನಿರ್ವಾಹಕ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಮಂಗಳೂರಿನ ಉದ್ಯಮಿ ರಾಜಗೋಪಾಲ ರೈ, ಕುಕ್ಕೇಡಿ ಕೋಡಿಕೊಡಂಗೆಯ ರಾಧಾಕೃಷ್ಣ, ಮೂಡಬಿದಿರೆ ನಾರಾಯಣ ಸಾಮಿಲ್‌ನ ಭಾನುಮತಿ ಶೀನಪ್ಪ, ಉದ್ಯಮಿ ಆನಂದ ದೇವಾಡಿಗ ದುಬೈ, ಸುಬ್ಬಯ್ಯ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ತಂತ್ರಿ ಶ್ರೀಪಾದ ಪಾಂಗಾಣ್ಣಾಯ ಹಾಗೂ ಪ್ರಧಾನ ಅರ್ಚಕ ಟಿ.ವಿ. ವಿಷ್ಣುಮೂರ್ತಿ ಭಟ್ ಹಾಗೂ ತಂಡದವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ವ್ಯವಸ್ಥಾಪನ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರು ಸಹಕರಿಸಿದರು.
ವೆಬ್‌ಸೈಟ್ ಬಿಡುಗಡೆ
ದೇವಸ್ಥಾನದ ಜೀಣೋದ್ಧಾರ ಕಾರ್ಯಗಳ ವಿವರಗಳನ್ನು ತಲುಪಿಸಲು ನಿರ್ಮಿಸಲಾದ ವೆಬ್‌ಸೈಟನ್ನು ಡಾ| ಪದ್ಮಪ್ರಸಾದ ಅಜಿಲರು ಅನಾವರಣಗೊಳಿಸಿದರು.
ಸಮ್ಮಾನ
ಜೀರ್ಣೋದ್ಧಾರ ಕಾರ್ಯಕ್ಕೆ ರೂ. 1 ಲಕ್ಷಕ್ಕಿಂತ ಮೇಲ್ಪಟ್ಟು ಧನಸಹಾಯ ನೀಡಿದ ದಾನಿಗಳನ್ನು ವೇದಿಕೆಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಶ್ರಮದಾನದ ಮೂಲಕ ಸಹಕರಿಸಿದ ಪವಿತ್ರ ಜ್ಞಾನವಿಕಾಸ ಕೇಂದ್ರ ಗುಂಡೂರಿ, ಅನುಶ್ರೀ ಜ್ಞಾನ ವಿಕಾಸಕೇಂದ್ರ ಬಜಿರೆ ಹಾಗೂ ವೇಣೂರು ಪ್ರಗತಿಬಂಧು ಒಕ್ಕೂಟವನ್ನು ಗೌರವಿಸಲಾಯಿತು.
ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಪಿ. ಧರಣೇಂದ್ರ ಕುಮಾರ್ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ಪ್ರಾಸ್ತಾವಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರ್ವಹಿಸಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸೋಮಯ್ಯ ಹನೈನಡೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.