ಸವಣಾಲು: ನದಿ ನೀರಿಗೆ ವಿಷ ಬೆರೆಸಿದ ಪ್ರಕರಣ;ದೂರು-ಪ್ರತಿದೂರು ದಾಖಲು

ಸವಣಾಲು: ಇಲ್ಲಿಯ ಪಲ್ಗುಣಿ ನದಿಯ ಕಲುಷಿತ ನೀರು ಕುಡಿದು ನಾಲ್ವರು ಅಸ್ವಸ್ಥರಾದ ಘಟನೆ ಇತ್ತೀಚೆಗೆ ವರದಿಯಾಗಿದೆ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಸವಣಾಲು ಕಾಂಜಂಡ ನಿವಾಸಿ ವಾಸುರವರ ಪತ್ನಿ ಉಷಾ, ಮಕ್ಕಳಾದ ಅಶ್ವಿತಾ, ಸುಮನಾ, ಅಶ್ವಿತ್ ಇವರುಗಳು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯ ನಿವಾಸಿ ಗೋಪಾಲ ಗೌಡ ರವರು ನದಿಯ ಕೆಂಚರಗುಂಡಿಯಲ್ಲಿ ಮೀನು ಹಿಡಿಯಲೆಂದು ರಾಸಾಯನಿಕ ಬಳಸಿದ್ದು, ಈ ನೀರನ್ನು ಅಡುಗೆಗೆ ಬಳಸಿ ತನ್ನ ಮನೆಯವರು ಅಸ್ವಸ್ಥಗೊಂಡಿರುವುದಾಗಿ ವಾಸು ದೂರು ನೀಡಿದ್ದು, ಸ್ಥಳೀಯ ನಿವಾಸಿ ಬೇಬಿ ಶೆಟ್ಟಿಯವರ ಪಂಪಿನ ಕೆಳಗೆ ಸಿಕ್ಕಿರುವ ಕಸಕಡ್ಡಿಗಳನ್ನು ತೆರವುಗೊಳಿಸುವ ಸಂದರ್ಭ ವಾಸು ಸ್ಥಳಕ್ಕಾಗಮಿಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ವಿರುದ್ಧ ಪಕ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಗೋಪಾಲಗೌಡ ಪೊಲೀಸರಿಗೆ ಪ್ರತಿದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.