ಬೆಳ್ತಂಗಡಿ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಪರಂಪರ ಸಂಘದಿಂದ  ಉಪನ್ಯಾಸ ಕಾರ್ಯಕ್ರಮವು ಇತ್ತೀಚೆಗೆ  ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ  ಹಿಮಾಕರ್ ಎ.ಕೆ. ಸುಳ್ಯ ರವರು  ಕರಾವಳಿ ಭಾಗದ ಇತಿಹಾಸ, ಆರ್ಥಿಕ ಚಟುವಟಿಕೆ, ಭೌಗೋಳಿಕ ಲಕ್ಷಣಗಳು, ಭಾರತಕ್ಕೆ ಯೂರೋಪಿಯನ್ನರ ಆಗಮನದ ಉದ್ದೇಶ ಹೀಗೆ ಇತಿಹಾಸ ಅಧ್ಯಯನದ ವಾಸ್ತವಿಕ ಮಜಲುಗಳ  ಕುರಿತು  ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ  ಡಾ. ಟಿ.ಪಿ. ಆಂಟನಿ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ  ಪ್ರೊ. ರಾಘವ ಎನ್.  ಉಪಸ್ಥಿತರಿದ್ದರು. ಪ್ರೊ. ಕವಿತ   ಅತಿಥಿಗಳನ್ನು ಸ್ವಾಗತಿಸಿ, ತೃತೀಯ ಬಿ.ಎ. ವಿದ್ಯಾರ್ಥಿನಿ ಅಕ್ಷಿತಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.