ಪಾರೆಂಕಿ: ಹಾರಬೆ ಶ್ರೀ ದುಗ್ಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವ

ಪಾರೆಂಕಿ: ಇಲ್ಲಿಯ ಶ್ರೀ ರಾಮನಗರ ಹಾರಬೆ ಶ್ರೀ ದುಗ್ಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವವು  ಮಾಲಾಡಿ ಮಂಜುನಾಥ ಭಟ್ ಅಂತರರವರ ಉಪಸ್ಥಿತಿಯಲ್ಲಿ ಜರುಗಿತು. ಬೆಳಿಗ್ಗೆ ಗಣಹೋಮ, ನಾಗ ದೇವರಿಗೆ ತಂಬಿಲ ಸೇವೆ, ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ದುಗ್ಗಲಾಯ ದೈವ ಮತ್ತು ಗುಳಿಗ ದೈವಗಳ ನೇಮೋತ್ಸವವು ಜರುಗಿತು.
ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಮಹಿಷಮರ್ಧಿನಿ ಯಕ್ಷಗಾನ ಸಂಘ ಪಾರೆಂಕಿ ಮಡಂತ್ಯಾರು ಇವರಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ಜರುಗಿತು. ದುಗ್ಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವದಲ್ಲಿ ಸಮಿತಿ ಹಾಗೂ ಊರ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.