ನೆಕ್ಕಿಲಾಡಿ ಜೆಸಿಐ ಘಟಕದಿಂದ ಮಜ್ಜಿಗೆ ವಿತರಣೆ

ಕರಾಯ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದಲ್ಲಿ ನೆಕ್ಕಿಲಾಡಿ ಜೆಸಿಐ ಘಟಕದ ವತಿಯಿಂದ ಭಕ್ತಾಧಿಗಳಿಗೆ ಮಜ್ಜಿಗೆ ವಿತರಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯರು ಮತ್ತು ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಜಿತ್‌ಕುಮಾರ್ ಹಲೇಜಿ, ಉತ್ಸವ ಸಮಿತಿಯ ಅಧ್ಯಕ್ಷ ಮೋಹನ್‌ದಾಸ್ ಕೊಲ್ಲಿ, ಸದಸ್ಯರಾದ ರಾಧಕೃಷ್ಣ ಶೆಟ್ಟಿ, ಪೂವಣಿ ,ಜಗದೀಶ ಶೆಟ್ಟಿ ಮೈರ, ಗ್ರಾ. ಪಂ. ಸದಸ್ಯ ನವೀನ್ ಕುಮಾರ್ ದೈಹಿಕ ಶಿಕ್ಷಕ ಬೊಮ್ಮಯ್ಯ ಬಂಗೇರ, ನೆಕ್ಕಿಲಾಡಿ ಜೆಸಿಐ ಅಧ್ಯಕ್ಷ ಜೆಎಫ್‌ಡಿ ವಿನಿತ್ ಶಗ್ರಿತ್ತಾಯ, ಕಾರ್ಯದರ್ಶಿ ಹೆಚ್‌ಜಿಎಫ್ ರಮೇಶ್ ಶುಭಾಷನಗರ, ಸದಸ್ಯರಾದ ಜಯಪ್ರಕಾಶ ಜೋಗಿತ್ತಾಯ, ಶಿವಪ್ರಸಾದ್ ಆಚಾರ್ಯ, ಶ್ರೀಕಾಂತ್ ಕರಾಯ, ಶಶಿಕಾಂತ್ ಕರಾಯ ಮೊದಲಾದವರು ಉಪಸ್ಥಿತರಿದ್ದರು. ಗಣ್ಯರಾದ ಗೀತಾ ಕುದ್ದಣ್ಣಾಯ, ಕರುಣಾಕರ ಕುದ್ದಣ್ಣಾಯ, ಉಷಾ ಕುದ್ದಣ್ಣಾಯ, ಸೀತಾರತ್ನ, ಅರ್ಚಕ ವಿಠಲ ಆಚಾರ್ಯ ಮತ್ತು ಭಕ್ತಾಧಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ 2018 ರ ಎಸ್.ಎಸ್.ಎಲ್.ಸಿಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಇಂದ್ರಪ್ರಸ್ಥ ಶಾಲೆಯ ವಿದ್ಯಾರ್ಥಿನಿ ಅನನ್ಯ ಕುದ್ದಣ್ಣಾ ರವರನ್ನು ಜೆಸಿಐ ನೆಕ್ಕಿಲಾಡಿ ವತಿಯಿಂದ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.