ಪಿಯುಸಿ ರಜೆ ಅವಧಿ ಮೇ 19ರವರೆಗೆ ವಿಸ್ತರಣೆ

ಬೆಳ್ತಂಗಡಿ: ಮೇ 2 ಅಥವಾ ಮೇ 6 ರಂದು ಆರಂಭವಾಗಬೇಕಾಗಿದ್ದ ಪಿಯುಸಿ ತರಗತಿಗಳ ರಜಾ ಅವಧಿಯನ್ನು ವಿಸ್ತರಣೆ ಮಾಡಿ ಪಿಯು ಇಲಾಖೆ ಆದೇಶ ನೀಡಿದೆ. ಮಾ.20ರಿಂದ ಮೇ.19ರವರೆಗೂ ರಜೆ ಇರಲಿದ್ದು, ಮೇ 20ರಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆ ಮೇ 2 ಅಥವಾ ಮೇ.6ರಂದು ಪಿಯು ತರಗತಿಗಳನ್ನು ಆರಂಭಿಸಲು ಸರಕಾರ ಉದ್ದೇಶಿಸಿತ್ತು. ಸರಕಾರದ ನಿಲುವಿನ ವಿರುದ್ಧ ಉಪನ್ಯಾಸಕರ ಸಂಘ ಮೌಲ್ಯಮಾಪನ ಬಹಿಷ್ಕಾರಕ್ಕೆ ತೆಗೆದುಕೊಂಡ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆಯುವ ಸಾಧ್ಯತೆಯಿದೆ. ಸರಕಾರ ನಮ್ಮ 20 ಬೇಡಿಕೆಗಳಲ್ಲಿ ಇದುವರೆಗೆ ಒಂದನ್ನು ಮಾತ್ರ ಈಡೇರಿಸಿದೆ. ಇನ್ನುಳಿದ 19 ಬೇಡಿಕೆಗಳ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತರ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಉಚಿತ ಬಸ್ ಸೇವೆ: ಇಂದಿನಿಂದ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ ಉಚಿತ ಬಸ್ ಪ್ರಯಾಣ ಸೇವೆ ಕಲ್ಪಿಸಿದೆ. ಮಾ.21ರಿಂದ ಎ.41ರವರೆಗೆ ಈ ಸೇವೆ ಲಭ್ಯವಾಗಲಿದೆ. ಈಗಾಗಲೇ ನಿಗಮದಿಂದ ರಿಯಾಯಿತಿ ಪಾಸುಗಳನ್ನು ಪಡೆದಿರುವ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಪ್ರಯಾಣಿಸಬಹುದು ಎಂದು ಸಂಸ್ಥೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.