ಬಿಎಸ್‌ಐ ಜಿಲ್ಲಾ ಘಟಕದಿಂದ ಮಡಂತ್ಯಾರು ಕಾಲೇಜಿಗೆ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳ 22ಸಂಪುಟಗಳ ಕೊಡುಗೆ

ಸಂಪುಟಗಳ ಕುರಿತಾಗಿ ಕೆ.ಪಿ.ಟಿ ಯ ಪ್ರೊಫೆಸರ್ ಭಾಸ್ಕರ್ ವಿಟ್ಲ ರವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮಡಂತ್ಯಾರು: ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ (ಬಿಎಸ್‌ಐ) ದ.ಕ ಜಿಲ್ಲಾ ಘಟಕದ ವತಿಯಿಂದ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇದರ ಗ್ರಂಥಾಲಯಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳ 22 ಸಂಪುಟಗಳನ್ನು ಕೊಡುಗೆಯಾಗಿ ನೀಡಲಾಯಿತು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹಮ್ಮಿಕೊಂಡ ಐತಿಹಾಸಿಕ ಚಳುವಳಿಯ ಹೋರಾಟದ ಮೊಟ್ಟಮೊದಲ ಚಳುವಳಿಯೆಂದು ಚರಿತ್ರೆಯಲ್ಲಿ ದಾಖಲಾದ ಮಹಾರಾಷ್ಟ್ರದ ಮಹಾಡ್‌ನಲ್ಲಿ ನಡೆದ ಸಾರ್ವಜನಿಕ ಕೆರೆ ನೀರಿನ ಹಕ್ಕುಗಳ ಪ್ರತಿಪಾದನೆಯ ಚೌಡರ್ ಕೆರೆ ನೀರಿನ ಹೋರಾಟದ 92 ನೇ ವರ್ಷಾಚರಣೆಯ ಸಂದರ್ಭ ಈ ಕೊಡಿಗೆ ನೀಡಲಾಯಿತು.
ಈ ಸಂದರ್ಭ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರಾ, ಕಾಲೇಜಿನ ಲೈಬ್ರೆರಿಯನ್ ಪೌಲ್ ಮಿನೇಜಸ್, ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕ ಶ್ರೀನಾಥ್ ಬಿ.ಎಸ್, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಘಟಕದ ಮುಖ್ಯಸ್ಥ ಭಾಸ್ಕರ್ ವಿಟ್ಲ, ಧಮ್ಮಾನಂದ ಬೆಳ್ತಂಗಡಿ, ಶೇಖರ್ ಎಸ್.ಆರ್ ಹಾಗೂ ಗುರುದೇವ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಉಪನ್ಯಾಸಕಿ ಹೇಮಾವತಿ .ಕೆ ಮೊದಲಾದವರು ಉಪಸ್ಥಿತರಿದ್ದರು.
ಸಂಪುಟಗಳನ್ನು ಕೊಡುಗೆಯಾಗಿ ನೀಡಿದ ನಂತರ ಕಾಲೇಜಿನ ಗ್ರಂಥಾಲಯದಲ್ಲಿ ಅದನ್ನು ಪ್ರದರ್ಶನಕ್ಕೆ ಇಡಲಾಯಿತು ಹಾಗೂ ಸಂಪುಟಗಳ ಕುರಿತಾಗಿ ಕೆ.ಪಿ.ಟಿ ಯ ಪ್ರೊಫೆಸರ್ ಭಾಸ್ಕರ್ ವಿಟ್ಲ ರವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.