ಧರ್ಮಸ್ಥಳದಲ್ಲಿ “ಗ್ರಾಮಾಭಿವೃದ್ಧಿ -ಕೂಡ್ಗಿ ಚಿಂತನೆಗಳು” ಗ್ರಂಥ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಎ.ಜಿ ಕೂಡ್ಗಿ ಕೃಷಿ ಸಂಸ್ಕೃತಿಯ ಭೀಷ್ಮಾಚಾರ್ಯ ಇದ್ದಂತೆ: ಮಹಾಬಲೇಶ್ವರ ಭಟ್


ಧರ್ಮಸ್ಥಳ: “ಸಾಧನೆ ಮಾಡದೆ ಸಾಯುವ ಸಾವು ಸಾವಲ್ಲ, ಇನ್ನೊಬ್ಬರಿಗೆ ಬದುಕನ್ನು ನೀಡದ ಬದುಕು ಬದುಕಲ್ಲ” ಎಂಬ ಮಾತನ್ನು ಎ.ಜಿ ಕೂಡ್ಗಿ ಅವರು ಅಕ್ಷರಶಃ ಸಾಕಾರಗೊಳಿಸಿದವರು. ಸದಾ ಪ್ರಯೋಗಶೀಲ ಮನೋಪ್ರವೃತ್ತಿ ಇರುವ ಅವರು ಕೃಷಿ ಕೇಂದ್ರಿತ ಮತ್ತು ಅಭಿವೃದ್ಧಿ ಕೇಂದ್ರಿತ ವಿಚಾರಗಳ ಬಗ್ಗೆ ತಮ್ಮ ಬರಹಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಅವರು ಒಂದು ರೀತಿಯಲ್ಲಿ ಕೃಷಿ ಸಂಸ್ಕೃತಿಯ ಭೀಷ್ಮಾಚಾರ್ಯ ಎಂದು ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಭಟ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಮಾ. 19ರಂದು ನಡೆದ, ಶ್ರೀ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆಯ ವತಿಯಿಂದ ಪ್ರಕಟಗೊಂಡ ಎ.ಜಿ ಕೂಡ್ಗಿ ಅವರ ಗ್ರಂಥ ಗ್ರಾಮೀಣಾಭಿವೃದ್ಧಿ- ಕೂಡ್ಗಿ ಚಿಂತನೆಗಳು” ಇದನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವಿಶೇಷ ಆರ್ಥಿಕ ವಲಯಗಳು ಬರುವುದರಿಂದ ಭಂಜರು ಭೂಮಿಗೆ ಉತ್ತಮ ಬೆಲೆ, ಉದ್ಯೋಗಗಳ ಸೃಷ್ಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಹೊಂದುತ್ತದೆ ಎಂದು ವರು ತಮ್ಮ ಬರಹಗಳ ಮೂಲಕ ವಾದಿಸಿದ್ದಾರೆ. ರೈತರ ಸಾಲ ಮನ್ನಾ ಎಂಬ ಪರಿಕಲ್ಪನೆಯನ್ನು ಪ್ರಬಲವಾಗಿ ವಿರೋಧಿಸುವ ಅವರು ಅದರಿಂದ ಆಗುವ ದುಷ್ಪರಿಣಾಮದ ಬಗ್ಗೆ ಹೊಂದಿದ್ದ ಸ್ಪಷ್ಟ ನಿಲುವನ್ನು ಈ ಪುಸ್ತಕದಲ್ಲಿ ಮುದ್ರಿಸಲಾಗಿದೆ. ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮೂಲಕ ಆ ಊರಿನ ಅಭಿವೃದ್ಧಿ, ನಮ್ಮ ಬ್ಯಾಂಕ್ ಆ ಗ್ರಾಮವನ್ನು ದತ್ತು ತೆಗೆದುಕೊಂಡಿರುವುದು, ೧೪ ನದಿಗಳ ಜೋಡಣೆ ಬಗ್ಗೆ ಸೌಭಾಗ್ಯ ಸಂಜೀವಿನಿ ಎಂಬ ಹೆಸರಿಟ್ಟು ಅವರು ನೀಡುತ್ತಿರುವ ಸಲಹೆಗಳು ಅವುಗಳೆಲ್ಲವನ್ನೂ ದಾಖಲಿಸಿರುವ ಅವರ ಕಲ್ಪನೆಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಆ ನಿಟ್ಟಿನಲ್ಲಿ ಇದೊಂದು ಆಳವಾದ ಅಧ್ಯಯನದ ಆಕರ ಗ್ರಂಥ ಎಂದು ಅವರು ಬಣ್ಣಿಸಿದರು.
ಸಮಾರಂಭದಲ್ಲಿ ಅತಿಥಿಯಾಗಿದ್ದ ಡಿ ಸುರೇಂದ್ರ ಕುಮಾರ್ ಶುಭ ಕೋರಿದರು. ಪುಸ್ತಕದ ಸಂಪಾದಕ ಬಾಲಿಗದ್ದೆ ಡಾ. ಶ್ರೀಧರ ಭಟ್ಟ ಅವರು ಪುಸ್ತಕದ ವಿಶೇಷತೆ ಬಗ್ಗೆ, ಕೂಡ್ಗಿ ಅವರ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಹೇಮಾವತಿ ವಿ ಹೆಗ್ಗಡೆ, ಅನಿತಾ ಸುರೇಂದ್ರ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೋ. ಎಸ್ ಪ್ರಭಾಕರ್ ಉಪಸ್ಥಿತರಿದ್ದರು.
ಕವಿತಾ ಮತ್ತು ಸುಮಂಗಳಾ ಪ್ರಾರ್ಥನೆ ಹಾಡಿದರು. ಗ್ರಾ. ಯೋ. ನಿರ್ದೇಶಕ ಪ್ರಕಾಶ್ ರಾವ್ ನಿರೂಪಿಸಿದರು. ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್ ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಡಾ. ಎಂ.ಪಿ ಶ್ರೀನಾಥ್ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.