ಡಿಸಿಸಿ ಬ್ಯಾಂಕ್ ನಿರ್ದೇಶಕತ್ವಕ್ಕೆ ಚುನಾವಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಎನ್.ಎಸ್ ಗೋಖಲೆ                                                                    ನಿರಂಜನ ಬಾವಂತ ಬೆಟ್ಟು

ಬೆಳ್ತಂಗಡಿಯಿಂದ ಇಬ್ಬರು ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ಬೆಳ್ತಂಗಡಿ; ಪ್ರತಿಷ್ಠಿತ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ನಿರ್ದೇಶಕತ್ವಕ್ಕೆ ಮಾ. 22 ರಂದು ಚುನಾವಣೆ ನಡೆಯಲಿದ್ದು ಬೆಳ್ತಂಗಡಿ ತಾಲೂಕಿನ ಇಬ್ಬರು ಹಿರಿಯ ಸಹಕಾರಿ ಧುರೀಣರು ಅಂತಿಮ ಕಣದಲ್ಲಿದ್ದಾರೆ.
ಸುಮಾರು 32 ವರ್ಷಗಳಿಂದ ಬೆಳ್ತಂಗಡಿಯನ್ನು ಪ್ರತಿನಿಧಿಸಿ ಬ್ಯಾಂಕಿನ ನಿರ್ದೇಶಕರಾಗಿರುವ  ಮತ್ತು ಮುಂಡಾಜೆ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಹಿರಿಯ ಸಹಕಾರಿ ಎನ್.ಎಸ್ ಗೋಖಲೆ ಅವರು ಸ್ಪರ್ಧಿಸುತ್ತಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ನೇರವಾಗಿ ರಾಜಕೀಯಕ್ಕೆ ಅವಕಾಶಗಳಿಲ್ಲವಾದರೂ ಇಂದು ಎಲ್ಲವೂ ಪಕ್ಷಗಳ ಅಥವಾ ಪಕ್ಷಗಳ ಬೆಂಬಲಿತರು ಎಂಬ ವಾತಾವರಣ ಸರ್ವೇ ಸಾಮಾನ್ಯವಾಗಿದೆ.
ಪ್ರಸ್ತುತ ಚುನಾವಣೆಯಲ್ಲಿ ಕಣದಲ್ಲಿರು ನಿರಂಜನ ಬಾವಂತಬೆಟ್ಟು ಅವರು ಕಾಂಗ್ರೆಸ್ ಬೆಂಬಲಿತರಾದರೆ ಎನ್.ಎಸ್ ಗೋಖಲೆ ಅವರು ಸಹಕಾರಿ ಭಾರತಿ ಬೆಂಬಲಿತರಾಗಿ ಗುರುತಿಸಿಕೊಂಡಿದ್ದಾರೆ.

ನಿರಂನಜ ಬಾವಂತಬೆಟ್ಟು ಲಘು ಪರಿಚಯ:
ತಣ್ಣೀರುಪಂತ ಸಹಕಾರಿ ಸಂಘದ ಅಧ್ಯಕ್ಷರಾಗಿ ದೀರ್ಘ ವರ್ಷದ ಅನುಭವಿ, ಕಳೆದ 32 ವರ್ಷಗಳಿಂದ ಡಿಸಿಸಿ ಬ್ಯಾಂಕಿನ ನಿರ್ದೇಶಕ, ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು. ಇಂದು ಈ ಸಂಘ ಸರಾಸರಿ 5600 ಲೀಟರ್ ಹಾಲು ಸಂಗ್ರಹ ಮಾಡುವ ಮೂಲಕ ಜಿಲ್ಲೆಯಲ್ಲೇ ಮೊದಲ ಸ್ಥಾನದಲ್ಲಿದೆ.ದ. ಕ ಜಿ.ಪಂ ಉಪಾಧ್ಯಕ್ಷರಾಗಿ ಅನುಭವಿ. ಹಿಂದೆ ದ.ಕ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಎನ್.ಎಸ್ ಗೋಖಲೆ ಲಘು ಪರಿಚಯ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಹಕಾರಿ ಎನ್.ಎಸ್ ಗೋಖಲೆಯವರು. ಮುಂಡಾಜೆ ಸಹಕಾರಿ ಸಂಘದ ಪ್ರಸ್ತುತ ಅಧ್ಯಕ್ಷರು. ಹಿಂದೆ ನಾರಾಯಣ, ಜಿ.ಎಸ್ ಆಚಾರ್ಯ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷರಾಗಿದ್ದಾಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿದ್ದವರು. ಮಾಸ್ ಲಿಮಿಟೆಡ್ ಸಿಇಒ ಆಗಿ ನಿವೃತರಾಗಿರುವವರು. ಎಸ್‌ಕೆಎಸಿಎಂಎಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ ಅನುಭವಿ. ರಾಜ್ಯ ಅಪೆಕ್ಸ್ ಬ್ಯಾಂಕಿನ ಒಂದು ಅವಧಿಗೆ ನಿರ್ದೇಶಕರೂ ಆಗಿದ್ದವರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.