ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ

ಸಂವಿಧಾನ” ಹೇಳಿಕೆಗೆ ಖಂಡಿಸದ ಪ್ರಧಾನಿ ಇರುವ ದೇಶ ಅಪಾಯದಲ್ಲಿದೆ” ಹೈಕೋರ್ಟ್ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ 

ಬೆಳ್ತಂಗಡಿ: ಸೈನಿಕರು ನಡೆಸಿದ ದಾಳಿ ಬಿಜೆಪಿಗರಿಗೆ ಮತದ ಪ್ರಶ್ನೆಯಾದರೆ ಕಾಂಗ್ರೆಸ್ಸಿಗರಿಗೆ ಅಭಿಮಾನದ ಮತ್ತು ದೇಶದ ಸುಭದ್ರತೆಯ ಸಂಗತಿ. ದೇಶಭಕ್ತಿ ಎಂದರೆ ಅದು ಬಿಜೆಪಿ ಸೊತ್ತಲ್ಲ. ಭಾರತೀಯರ ಪ್ರತಿಯೊಬ್ಬರ ದಮನಿಗಳಲ್ಲೂ ಇದೆ. ಇಂದು ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂಬ ಚರ್ಚೆ ಎದ್ದಿದೆ. ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗ್ಡೆ ಅವರು ಸಂವಿಧಾನ ಬದಲಾಯಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿದಾಗಲೂ ಖಂಡಿಸದ ಪ್ರಧಾನಿ ಇದ್ದಾರೆ ಎಂದಾದರೆ ಅಂತಹಾ ದೇಶ ಅಪಾಯದಲ್ಲಿದೆ ಎಂದು ಹೈಕೋರ್ಟ್ ನ್ಯಾಯವಾದಿಯೂ ಆಗಿರುವ ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ  ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಮತ್ತು ಚುನಾವಣಾ ತಯಾರಿ ಬಗ್ಗೆ ಕಾರ್ಯಕರ್ತರನ್ನು ಹುರಿದುಂಬಿಸುವ ಸಲುವಾಗಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ವತಿಯಿಂದ ಆಶಾ ಸಾಲಿಯಾನ ಸಭಾಂಗಣದಲ್ಲಿ ಮಾ. 20 ರಂದು ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಎಪಿಎಂಸಿ ಅಧ್ಯಕ್ಷ ಕೇಶವ ಪಿ ಗೌಡ, ಬೆಳ್ತಂಗಡಿ ಕ್ಷೇತ್ರದ ಚುನಾವಣಾ ಉಸ್ತುವಾರಿ ನವೀನ್‌ಚಂದ್ರ ಶೆಟ್ಟಿ ಪುಡಬಿದ್ರೆ ಸಭೆಯಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ ಅಜ್ರಿ, ಜಿ.ಪಂ ಸದಸ್ಯರಾದ ಪಿ ಧರಣೇಂದ್ರ ಕುಮಾರ್, ನಮಿತಾ ಕೆ ಪೂಜಾರಿ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಸದಸ್ಯರಾದ ಪ್ರವೀಣ್ ಗೌಡ, ಓಬಯ್ಯ, ಜಯರಾಮ ಎ, ಜಯಶೀಲಾ, ಕೇಶವತಿ, ವಿನುಷಾ ಪ್ರಕಾಶ್, ಗೋಪಿನಾಥ ನಾಯಕ್, ಅಲ್ಪಸಂಖ್ಯಾತರ ಘಟಕದ ನಗರ ಅಧ್ಯಕ್ಷ ಬಿ ಅಶ್ರಫ್ ನೆರಿಯ, ಗ್ರಾಮೀಣ ಅಧ್ಯಕ್ಷ ಅಯ್ಯೂಬ್, ಕೆಪಿಸಿಸಿ ಸದಸ್ಯ ಪೀತಾಂಬರ ಹೇರಾಜೆ, ನಗರ ಬ್ಲಾಕಿನ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಎಚ್ ಖಾಲಿದ್ ಕಕ್ಕ್ಯೇನಾ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿಟಿ ಸೆಬಾಸ್ಟಿಯನ್, ನಗರ ಮಹಿಳಾ ಘಟಕದ ಅಧ್ಯಕ್ಷೆ ಹಾಜಿರಾಬಾನು, ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಶರತ್, ಅಲ್ಪ ಸಂಖ್ಯಾತ ಮುಖಂಡ ಚಾರ್ಮಾಡಿ ಹಸನಬ್ಬ, ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು, ಪಳನಿ ಸ್ವಾಮಿ, ದಿನೇಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ವಿ ಕಿಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜಶೇಖರ್ ಶೆಟ್ಟಿ ಮಡಂತ್ಯಾರು, ನಾಮದೇವ ರಾವ್ ಮುಂಡಾಜೆ ಕಾರ್ಯಕ್ರಮ ನಿರೂಪಿದರು. ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ವಂದಿಸಿದರು.

ಕಾಂಗ್ರೆಸ್ ಗೆಲುವಿಗಾಗಿ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಿ: ವಸಂತ ಬಂಗೇರ
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ಕೇಂದ್ರದಲ್ಲಿ ಹಿಂದೆ ಮನ್‌ಮೋಹನ ಸಿಂಗ್ ಇದ್ದಾಗ, ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಮನೆಮನೆಗೆ ತಿಳಿಸುವ ಕಾರ್ಯ ಮಾಡಲು ಇಂದಿನಿಂದಲೇ ಇಳಿಯಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಲು ವಿಫುಲ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು. ನಳಿನ್ ಕುಮಾರ್ ಕಟೀಲು ಅವರು ಪ್ರಧಾನಿ ಬಳಿ ಒಮ್ಮೆಯೂ ಮಾತನಾಡಿಲ್ಲ, ಮಾತನಾಡಲು ಅವರಿಗೆ ಆಗೂವುದೂ ಇಲ್ಲ. ಪ್ರಧಾನಿ ವಿರುದ್ಧ ಮಾತನಾಡಲು ಬಿಜೆಪಿಯಲ್ಲಿ ಯಾರಿಗೂ ಶಕ್ತಿ ಇಲ್ಲ. ಮತ್ತೊಮ್ಮೆಮೋದಿ ಕೈಗೆ ಆಡಳಿತ ಕೊಟ್ಟರೆ ಈ ದೇಶ ಸರ್ವನಾಶವಾಗಲಿದೆ ಎಂದು ಟೀಕಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.