ಬೆಳ್ತಂಗಡಿ: ವಿಶ್ವ ಮಹಿಳಾ ದಿನಾಚರಣೆ, ಸನ್ಮಾನ

Advt_NewsUnder_1
Advt_NewsUnder_1

ಮಹಿಳೆಯರು ದೌರ್ಜನ್ಯ ಎದುರಿಸುವ ಮೂಲಕ ಸಮರ್ಥರಾಗಬೇಕು: ಪ್ರೊ.| ಶಕುಂತಲಾ ಬಿ.

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ, ಯುವ ವೇದಿಕೆ ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ತಾಲೂಕು ಮಹಿಳಾ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮಾ.17 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ನಡೆಯಿತು.
ಕನ್ನಿಕಾ ಪದ್ಮಗೌಡ ಬೆಳಾಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಜಿರೆ ಶ್ರೀ ಧ.ಮಂ.ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶಕುಂತಲಾ ಬಿ ಮಾತನಾಡಿ, ಮಹಿಳೆಯರು ಉನ್ನತ ಶಿಕ್ಷಣ, ಸಹನೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಬೇಕು ಹಾಗೂ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸಾತ್ಮಕ ಕೃತ್ಯಗಳನ್ನು ತಡೆಯುವ ಮೂಲಕ ಮಹಿಳೆಯರು ಸಂಘಟಿತರಾಗಬೇಕು ಎಂದರು.
ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಸೋಮೇ ಗೌಡ ಜೆ, ಪ್ರ.ಕಾರ್ಯದರ್ಶಿ ಮೋಹನ ಗೌಡ, ತಾಲೂಕು ಗೌಡರ ಯಾನೆ ಒಕ್ಕಲಿಗರ ಯುವ ವೇದಿಕೆ ಸೇವಾ ಸಂಘದ ಅಧ್ಯಕ್ಷ ಯಶವಂತ ಗೌಡ ಬೆಳಾಲು, ಮೇದಿನಿ ಡಿ.ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಸಮಾಜ ಸೇವಕಿ ವೇದಾವತಿ ಜನಾರ್ದನ ಗೌಡ ನಿಡ್ಲೆ ಹಾಗೂ ನಾಟಿವೈದ್ಯೆ ದೇಜಮ್ಮ ಕಾಯರ್ತಡ್ಕ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳೆಯರ ವಿವಿಧ ಆಟೋಟ ಸ್ಪರ್ಧೆಗಳು ನಡೆದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಮಹಿಳಾ ವೇದಿಕೆ ಕಾರ್ಯದರ್ಶಿ ಗೀತಾ ರಾಮಣ್ಣ ಗೌಡ ಸ್ವಾಗತಿಸಿ, ವೇದಾವತಿ, ಜ್ಯೋತಿ ಮಿತ್ತಬಾಗಿಲು ಸನ್ಮಾನಿತರನ್ನು ಪರಿಚಯಿಸಿದರು. ತಾಲೂಕು ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಉಷಾ ಲಕ್ಷ್ಮಣ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೀನಾಕ್ಷಿ ಮಹಾಬಲ ಗೌಡ, ಗೀತಾ ಪ್ರಜ್ವಲ್ ಗೌಡ ಕೊಯ್ಯೂರು ಕಾರ್ಯಕ್ರಮ ನಿರ್ವಹಿಸಿ, ಲೀಲಾವತಿ ಬೆಳಾಲು ಧನ್ಯವಾದವಿತ್ತರು.
ಮಹಿಳಾ ಸಂಘದ ಉಪಾಧ್ಯಕ್ಷೆಯರಾದ ಭಾರತಿ ಧರ್ಣಪ್ಪ ಗೌಡ ಕೊಂದೋಡಿ, ಸುಭಾಷಿಣಿ ಜನಾರ್ದನ ಗೌಡ ಕುಳಾಯಿ, ಸಂಘದ ಪದಾಧಿಕಾರಿಗಳು, ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ನಿರ್ದೇಶಕರು, ತಾಲೂಕಿನ ಎಲ್ಲಾ ಗ್ರಾಮದ ಮಹಿಳಾ ವೇದಿಕೆ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.