ಬೆಳ್ತಂಗಡಿ: ಮತದಾರರ ಸಾಕ್ಷರತಾ ಸಂಘ ತರಬೇತಿ ಕಾರ್ಯಾಗಾರ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೇಂದ್ರ ಚುನಾವಣಾ ಆಯೋಗ ಬೆಳ್ತಂಗಡಿ ತಾಲೂಕು ಹಂತದ ಮತದಾರರ ಸಾಕ್ಷರತಾ ಸಂಘ ತರಬೇತಿ ಕಾರ್ಯಾಗಾರವು ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜಿನಲ್ಲಿ ಮಾ 19 ರಂದು ಜರುಗಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರು ಪ್ರತಿ ಬಾರಿಯೂ ಚುನಾವಣೆಯಲ್ಲಿ ಕಾನೂನು ನಿಯಮಗಳು ಬದಲಾವಣೆಯಾಗುತ್ತಿದ್ದು, ಇದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡಬೇಕು. ಯಾವುದೇ ಸಮಸ್ಯೆ ಬಂದರೂ ಟೀಂ ಆಗಿ ವರ್ಕ್ ಮಾಡಬೇಕು ಚುನಾವಣೆಯ ಯಶಸ್ವಿ ಎಲ್ಲರ ಸಹಕಾರದಿಂದ ಆಗುತ್ತದೆ. ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ಮತದಾರರಿಗೆ ತಲುಪಿಸಿ, ಅವರಲ್ಲಿ ವಿಶ್ವಾಸ ತುಂಬುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಮಾತನಾಡಿ, ಗ್ರಾಮದಲ್ಲಿರುವ ವಿಕಲಚೇತರನ್ನು ಗುರುತಿಸಿ ಅವರಿಗೆ ಭೂತಕನ್ನಡಿ ಮತ್ತು ವೀಲ್ಹ್‌ಚಯರ್ ಕೊಡಿಸಲು ಪಟ್ಟಿಯನ್ನು ನೀಡಬೇಕು. ಈಗಾಗಲೇ ಪ್ರತಿ ಪಂಚಾಯತದಲ್ಲಿ ಒಂದು ವೀಲ್ಹ್‌ಚಯರ್ ಖರೀದಿ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಕೇಳಿದ್ದೇವೆ. ನಡೆಯಲು ಸಾಧ್ಯವಿಲ್ಲದ ಹಿರಿಯ ನಾಗರಿಕರನ್ನು ಕರೆತರಲು ಪಂಚಾಯತಕ್ಕೆ ಒಂದು ವಾಹನದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ತಾರಕೇಸರಿ ಮಾತನಾಡಿ ಮತದಾನ ಮಾಡಲು ಪ್ರತಿ ಮನೆಯವರು ಸಂಕಲ್ಪ ಮಾಡಬೇಕು. ಅದಕ್ಕಾಗಿ ಪ್ರತಿ ಮನೆಗೆ ಸಂಕಲ್ಪಪತ್ರ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಮಾಸ್ಟರ್ ಟ್ರೈನರ್ ಶೈಲೇಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಜಿರೆ ಎಸ್‌ಡಿಎಂ ಪ.ಪೂ. ಕಾಲೇಜಿನ ಪ್ರಾಚಾರ್ಯ ದಿನೇಶ್ ಚೌಟ ಶುಭ ಕೋರಿದರು.
ಮಾಸ್ಟರ್ ಟ್ರೈನರ್ ಧರಣೇಂದ್ರ ಜೈನ್ ಮತದಾನ ಜಾಗೃತಿ ಬಗ್ಗೆ ಪ್ರಮಾಣವಚನ ಬೋಧಿಸಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್, ಮಾಸ್ಟರ್ ಟ್ರೈನರ್‌ಗಳಾದ ಅಜಿತ್‌ಕುಮಾರ್ ಕೊಕ್ರಾಡಿ, ಶಂಭುಶಂಕರ್, ತರಬೇತಿದಾರರಾದ ರಮೇಶ್ ಮಯ್ಯ, ರಮೇಶ್, ಗೌರೀಶ್ ಭಟ್ ಬದನಾಜೆ, ಗಣೇಶ್ ಮೊಗವೀರ ವೇಣೂರು ಉಪಸ್ಥಿತರಿದ್ದರು.
ರಮೇಶ್ ಮಯ್ಯ ಇವರ ಪ್ರಾರ್ಥನೆ ಬಳಿಕ ಸಮತಿ ಪಿ.ಎನ್ ಪದ್ಮುಂಜ ಸ್ವಾಗತಿಸಿದರು. ಚೈತ್ರ ಆರ್.ರಾವ್ ಪಡಂಗಡಿ ಕಾರ್ಯಕ್ರಮ ನಿರೂಪಿಸಿ, ವಸಂತ ನಾಯ್ಕ ಪುತ್ತಿಲ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.