ತೋಟತ್ತಾಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕಿಂಜೆ ಕಡೆಯಿಂದ ತೋಟತ್ತಾಡಿ ಕಡೆಗೆ ಆಟೋರಿಕ್ಷಾದಲ್ಲಿ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸದ್ರಿ ತಕ್ಷೀರನ್ನು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅವರ ಬಳಿಯಿಂದ ಅಕ್ರಮ ಮದ್ಯ ಮತ್ತು ಅದನ್ನು ಸಾಗಾಟಕ್ಕೆ ಬಳಸುತ್ತಿದ್ದ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ತೋಟತ್ತಾಡಿ ಗ್ರಾಮದ ಸೈಂಟ್ ಥಾಮಸ್ ಚರ್ಚ್ ಬಳಿ ಆಟೋರಿಕ್ಷಾವನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಅಕ್ರಮವಾಗಿ ಮೈಸೂರು ಲ್ಯಾನ್ಸರ್ ಬಾಕ್ಸ್ನಲ್ಲಿ 180 ಎಮ್. ಎಲ್ 48 ಬಾಟ್ಲಿಗಳು ಕಂಡು ಬಂದಿದ್ದು, ಆರೋಪಿಗಳಾದ ಆಟೋರಿಕ್ಷಾ ಚಾಲಕ ನೆರಿಯಾ ಲೊಕೇಶ್ ಮತ್ತು ತಿಮ್ಮಪ್ಪ ಅವರನ್ನು ವಶಕ್ಕೆ ಪಡೆದುಕೊಂಡರು. ಅವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿರುತ್ತದೆ.