ಪಿಲಿಗೂಡು: ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಶಿಬಿರ

ಸರಿಯಾದ ದಾರಿಯಲ್ಲಿ ಸಾಗಲು ಹವ್ಯಾಸಗಳು ಸಹಕಾರಿ: ಶಿವಶಂಕರ ನಾಯಕ್

ಈ ಸಂಧರ್ಭದಲ್ಲಿ ಸಂಪನ್ಮೂಲ  ವ್ಯಕ್ತಿ, ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ರವರನ್ನು  ಶಾಲಾ ವತಿಯಿಂದ ಗೌರವಿಸಲಾಯಿತು.

ಪಿಲಿಗೂಡು: ಯಕ್ಷಗಾನ, ಭರತನಾಟ್ಯ, ಸಾಹಿತ್ಯ ರಚನೆ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವುದು ಅಗತ್ಯ. ಸಾಹಿತ್ಯ ರಚನೆ, ಚುಟುಕು ಸಾಹಿತ್ಯದಲ್ಲಿ ತೊಡಗಿಕೊಳ್ಳುವುದು, ಜ್ಞಾನಭರಿತ ಪುಸ್ತಕಗಳ ಓದುವಿಕೆ ಮುಂತಾದ ಉತ್ತಮ ಹವ್ಯಾಸಗಳು ಜೀವನದಲ್ಲಿ ಉತ್ತಮ ಜೀವನದಲ್ಲಿ ದಾರಿಯಲ್ಲಿ ಸಾಗಲು ನೆರವಾಗುತ್ತದೆ ಎಂದು ಉದ್ಯಮಿ ಶಿವಶಂಕರ್ ನಾಯಕ್ ಹೇಳಿದರು.
ಅವರು ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಿಷಿ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಶಿಬಿರ ಚಿಗುರು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಸಲುವಾಗಿ ರಿಷಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹಾ ಶಿಬಿರಗಳಿಂದ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡುತ್ತದೆ. ಎಳೆ ವಯಸ್ಸಿನ ಮಕ್ಕಳು ಉತ್ತಮ ರೀತಿಯ ಚಿಂತನೆಗಳ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಲಿದೆ. ವಿದ್ಯಾರ್ಥಿಗಳೂ ಶಿಬಿರದ ಪ್ರಯೋಜನ ಪಡೆದುಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳುವಂತಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ಮಾತನಾಡಿ, ಕನ್ನಡ ಸುಂದರ ಭಾಷೆಯಾಗಿದ್ದು ವಿವಿಧ ರೀತಿಯ ಸಾಹಿತ್ಯ ಪ್ರಕಾರಗಳಿವೆ. ಕಾದಂಬರಿ, ಕವನ, ಕಥೆ, ಆತ್ಮಕಥೆ, ಜೀವನಚರಿತ್ರೆ, ವಿಮರ್ಶೆ ಮೊದಲಾದವುಗಳಿವೆ. ಅದೇ ರೀತಿ ನಮ್ಮ ಸುತ್ತ ಮುತ್ತಲಿನ ಹಲವಾರು ವಿಚಾರಗಳನ್ನಿಟ್ಟುಕೊಂಡು 4ರಿಂದ6 ಸಾಲಿನ ಪದ್ಯಗಳನ್ನು ಪರೆಯಬಹುದು. ಇದನ್ನು ಚುಟುಕಗಳು ಎನ್ನುತ್ತೇವೆ. ಪ್ರಾಸಬದ್ಧ ಸಾಲುಗಳಿಂದ ಚುಟುಕಾಗಿ ಓದುಗರನ್ನು ಸೆಳೆಯುತ್ತದೆ. ಸರಳವಾಗಿ ಇದನ್ನು ವಿದ್ಯಾರ್ಥಿಗಳೂ ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡಬಹುದು ಎಂದರು.
ವಿದ್ಯಾರ್ಥಿಗಳಿಗೆ ವಿವಿಧ ಚುಟುಕು ಚಟುವಟಿಕೆ ನಡೆಸಿ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ಹಾಗೂ ಉದ್ಯಮಿ ಶಿವಶಂಕರ್ ನಾಯಕ್ ಅವರನ್ನು ಗೌರವಿಸಲಾಯಿತು.
ಪಿಲಿಗೂಡು ಸ.ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ರಿಷಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪದ್ಮುಂಜ, ಕಾರ್ಯಕ್ರಮ ಸಂಯೋಜಕಿ ದೇವಿಕಾ ಸುಳ್ಯ, ಮುಖ್ಯ ಶಿಕ್ಷಕಿ ಲೀಲಾವತಿ ಕೆ., ಸಹಶಿಕ್ಷಕಿಯರಾದ ಚಂದ್ರಕ್ಕಿ ಕೆ.ಪಿ., ಅನಿತಾ ಬಿ., ಹಳೆ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.