ಉಜಿರೆಯಲ್ಲಿ ದೇಶದ ಪ್ರತಿಷ್ಠಿತ “ಅಟ್ಲಾಸ್ ಉಮ್ರಾ” ಸೇವೆ ಆರಂಭ

ಚಲ್‌ಸಫರ್ ಡಾಟ್ ಕಾಮ್, ಅಯಾನ ಟ್ರಾವೆಲ್ಸ್ ಸಂಸ್ಥೆಯ ಕಚೇರಿಯಲ್ಲಿ “ಉಮ್ರಾ” ಸೇವೆ

ಉಜಿರೆ ವಿಶ್ವಾಸ್ ಸಿಟಿ ಸೆಂಟರ್ ವಾಣಿಜ್ಯ ಮಳಿಗೆಯಲ್ಲಿ ನೂತನವಾಗಿ ಪ್ರಾರಂಭಗೊಂಡ “ಚಲ್‌ಸಫರ್ ಡಾಟ್ ಕಾಮ್, “ಅಯಾನ್ ಟೂರ್‍ಸ್ ಪ್ರೈವೆಟ್ ಲಿಮಿಟೆಡ್” ಸಂಸ್ಥೆಯ ಉದ್ಘಾಟನೆಯನ್ನು   ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಆನುವಂಶೀಯ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ನೆರವೇರಿಸಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್ ಪ್ರಭಾಕರ್, ಎಸ್‌ಡಿಎಂ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಟಿ.ಎನ್ ಕೇಶವ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋಧ್ಯೋಗ ಸಂಸ್ಥೆ ನಿರ್ದೇಶಕಿ ಮನೋರಮಾ ಭಟ್ ಜಿ.ವಿ ಮೊದಲಾದ ಗಣ್ಯರು ಭಾಗಿಯಾಗಿದ್ದರು 

ಉಜಿರೆ: ಪವಿತ್ರವಾದ ಹಜ್ಜ್ ಮತ್ತು ಉಮ್ರಾ ಯಾತ್ರೆ ಧಾರ್ಮಿಕ ಪ್ರವಾಸ ಆಯೋಜನೆಯ ವೇಳೆ ಗ್ರಾಹಕರಿಗೆ ಯಾವುದೇ ವಂಚನೆ, ನಂಬಿಕೆ ದ್ರೋಹ ಆಗದಂತೆ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕಾಗಿದೆ. ಅಟ್ಲಾಸ್ ಉಮ್ರಾ ಸಂಸ್ಥೆಯ ಸೇವೆ ಪಡೆದಿರುವವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದು ಈ ಸಂಸ್ಥೆಯ ಸೇವೆ ಉಜಿರೆಗೂ ವಿಸ್ತರಣೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಉಜಿರೆ ಹಳೆಪೇಟೆ ಕೇಂದ್ರ ಜುಮ್ಮಾ ಮಸ್ಜಿದ್ ಪ್ರಧಾನ ಧರ್ಮಗುರುಗಳಾದ ಅಲ್‌ಹಾಜ್ ಅಬ್ಬಾಸ್ ಮದನಿ ಹೇಳಿದರು.
ಚಲ್‌ಸಫರ್ ಡಾಟ್‌ಕಾಮ್ ಈ ಕಾಮರ್ಸ್ ವೆಬ್‌ಸೈಟ್ ಮೂಲಕ ಉಜಿರೆಗೆ ಅಯಾನ್ ಟ್ರಾವೆಲ್ಸ್ ಮತ್ತು ಅಟ್ಲಾಸ್ ಉಮ್ರಾ ಟೂರ್‍ಸ್ ಸಂಸ್ಥೆಯು ಉಜಿರೆ ವಿಶ್ವಾಸ ಸಿಟಿ ಸೆಂಟರ್ ವಾಣಿಜ್ಯ ಮಳಿಗೆಯಲ್ಲಿ ಮಾ. 17 ರಂದು ಶುಭಾರಂಭಗೊಂಡಿದ್ದು ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡುತ್ತಿದ್ದರು.
ದುಆ ನೆರವೇರಿಸುವ ಮೂಲಕ ಉದ್ಘಾಟಿಸಿದ ತಾ| ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಅಲ್‌ಹಾದಿ ತಂಙಳ್ ಉಜಿರೆ, ವಾಣಿಜ್ಯ ನಗರಗಳಲ್ಲಿ ಸಿಗುತ್ತಿದ್ದ ಸೌಲಭ್ಯಗಳು ಇದೀಗ ನಮ್ಮ ಊರಿನಲ್ಲೂ ಜನತೆಗೆ ಸಿಗುವಂತೆ ಮಾಡುವ ಉದ್ಧೇಶದಿಂದ “ಚಲ್‌ಸಫ್‌ರ್ ಡಾಟ್ ಕಾಮ್” ತಮ್ಮ ಸಂಸ್ಥೆಯನ್ನು ಬೆಂಗಳೂರು ನಗರದಿಂದ ಇಲ್ಲಿಗೆ ತಂದಿರುವುದು ಅಭಿನಂದನಾರ್ಹ ಎಂದರು.
ಅತಿಥಿಯಾಗಿದ್ದ ಮಂಜೊಟ್ಟಿ ಸ್ಟಾರ್‌ಲೈನ್ ಆಂಗ್ಲಮಾಧ್ಯಮ ಶಾಲಾ ಚೇರ್‌ಮೆನ್ ಸಯ್ಯಿದ್ ಹಬೀಬ್ ಸಾಹೇಬ್ ನಡ ಮಾತನಾಡಿ, ಅಟ್ಲಾಸ್ ಸಂಸ್ಥೆಯ ಮೂಲಕ ಪ್ರವಾಸ ಕೈಗೊಂಡವರು ಮತ್ತೆ ಬದಲಾಯಿಸುವುದಿಲ್ಲ. ಅಂತಹಾ ಉತ್ತಮ ಸೇವೆ ಅವರಿಂದ ಲಬ್ಯವಾಗುತ್ತಿದೆ. ಆ ಸೇವೆಯೇ ಇಂದು ಅವರನ್ನು ಪ್ರವಾಸಿ ಕ್ಷೇತ್ರದಲ್ಲಿ ಈ ಮಟ್ಟಕ್ಕೆ ಬೆಳೆಯುವಂತೆ ಮಾಡಿದೆ ಎಂದರು.
ಉಜಿರೆ ಹಳೆಪೇಟೆ ಕೇಂದ್ರ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಅಲ್‌ಹಾಜ್ ಬಿ.ಎಮ್ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಅಯಾನ್ ಟ್ರಾವೆಲ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಯು. ಮುಹಮ್ಮದ್ ಶರೀಫ್ ವಹಿಸಿದ್ದರು.
ಚಲ್‌ಸಫರ್ ಡಾಟ್ ಕಾಮ್ ಸಂಸ್ಥೆಯ ಐಟಿ ಮೆನೇಜರ್ ಶೇಖ್ ಹಾರಿಸ್ ಉಜಿರೆ, ಬೆಂಗಳೂರು ಕೇಂದ್ರ ಕಚೇರಿ ಮೆನೇಜರ್ ಶ್ವೇತಾ ಡಿಸಿಲ್ವಾ, ಡಿಜಿಟಲ್ ಮಾರ್ಕೆಟಿಂಗ್ ಎಕ್ಸ್‌ಕ್ಯೂಟಿವ್ ಮಜೀದ್ ಹುಸೈನ್, ಉಜಿರೆ ಶಾಖೆಯ ಸಿಬಂದಿಗಳಾದ ವೈಶಾಲಿ ಮತ್ತು ಅಫೀಫಾ ಸಹಕಾರ ನೀಡಿದರು.

ವರ್ಷಕ್ಕೆ ಕನಿಷ್ಠವೆಂದರೂ 1 ಲಕ್ಷ ಮಂದಿಯನ್ನು ಪವಿತ್ರ ಉಮ್ರಾ, ಹಜ್ಜ್ ಯಾತ್ರೆಗೆ ಸುವ್ಯವಸ್ಥಿತವಾಗಿ ಕಳುಹಿಸಿಕೊಡುತ್ತಿರುವ ಸಂಸ್ಥೆ ಅಟ್ಲಾಸ್ ಉಮ್ರಾ. ಇದರ ದೇಶದ 18 ಕೇಂದ್ರಗಳ ಪೈಕಿ ಉಜಿರೆ ಕೇಂದ್ರವೂ ಒಂದಾಗಿದ್ದು ಇದೀಗ ಬುಕ್ಕಿಂಗ್‌ಗೆ ಅವಕಾಶ. ಸೂಪರ್ ಸೇವರ್ ಪೇಕೇಜ್, ಅವ್ವಲ್, ಆಲಾ, ಅಝೀಮ್, ರಂಝಾನ್ ಪೇಕೇಜ್, ಶಾಬಾನ್-ರಂಝಾನ್ ಪೇಕೇಜ್‌ಗಳು 58500ರಿಂದ ಪ್ರಾರಂಭಿಸಿ 1.17 ಲಕ್ಷ ರೂ. ವರೆಗಿನ ವ್ಯವಸ್ಥೆ ಇದೆ.
* ಸಿಂಗಲ್ ಸ್ಟಾರ್ ನಿಂದ 7 ಸ್ಟಾರ್ ಹೊಟೇಲ್‌ಗಳ ವರೆಗೆ ವ್ಯವಸ್ಥೆ, ಮೆಕ್ಕಾದ ಹರಂ ಶರೀಫ್ ಬಳಿ ಮತ್ತು ಮದೀನಾ ಪವಿತ್ರ ಸ್ಥಳದ ಬಳಿಯೇ ತಂಗುವ ವ್ಯವಸ್ಥೆ, ಟಿಕೇಟ್ ಕಾಯ್ದಿರಿಸುತ್ತಿದ್ದಂತೆ ನೀವು ತಂಗುವ ಹೊಟೇಲ್ ಕೂಡ ಬುಕ್ಕಿಂಗ್ ಆಗಲಿದ್ದು, ಅಂತಾರ್ಜಾಲ ವ್ಯವಸ್ಥೆಯಲ್ಲಿ ವೀಕ್ಷಿಸುವ ಅವಕಾಶ ಈ ಸಂಸ್ಥೆಯಲ್ಲಿದೆ.
* ಭಾರತ ಸರಕಾರದ ಪ್ರವಾಸೋಧ್ಯಮ ಇಲಾಖೆಗೆ ಅಟ್ಲಾಸ್ ಉಮ್ರಾ ಸಂಸ್ಥೆ ನೊಂದಾಯಿಸಲ್ಪಟ್ಟಿದ್ದು ವಿಶ್ವಾಸಾರ್ಹ ಸೇವೆಯ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.