HomePage_Banner_
HomePage_Banner_
HomePage_Banner_

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ:

ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ವತಿಯಿಂದ ಹೇಮಾವತಿ ವಿ. ಹೆಗ್ಗಡೆಯವರಿಗೆ ಸದ್ಧರ್ಮ ವತ್ಸಲೆ ಬಿರುದು ನೀಡಿ ಗೌರವಿಸಲಾಯಿತು 

ರತ್ನಗಿರಿಯಲ್ಲಿ ಶನಿವಾರ ಮಹಾಮಸ್ತಕಾಭಿಷೇಕ ನಡೆಯಿತು

ಉಜಿರೆ: ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಮಾ .16 ರಂದು ಧರ್ಮಸ್ಥಳದ ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಜೈನ ಧರ್ಮದ ಮೂಲ ಸತ್ವ ಮತ್ತು ತತ್ವವನ್ನು ಜೀವನದಲ್ಲಿ ಅಳವಡಿಸಿದಾಗ ಶಾಂತಿ, ನೆಮ್ಮದಿ ಸಿಗುತ್ತದೆ. ಮಸ್ತಕಾಭಿಷೇಕ ಮಾಡಿದವರಿಗೂ, ನೋಡಿದವರಿಗೂ ಪುಣ್ಯ ಸಂಚಯವಾಗಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರಕಲೆಂದು ಅವರು ಹಾರೈಸಿದರು. ಕಳೆದ ಆರು ತಿಂಗಳುಗಳಿಂದ ಮಸ್ತಕಾಭಿಷೇಕಕ್ಕಾಗಿ ವಿಶೇಷ ಒತ್ತಡದಿಂದ ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದೆ. ಎಲ್ಲರೂ ತಮ್ಮ ಮನೆಯ ಕಾರ್ಯಕ್ರಮದಂತೆ ಸ್ವಯಂ ಪ್ರೇರಣೆಯಿಂದ ಉತ್ಸಾಹದಿಂದ ಭಾಗವಹಿಸಿ ಮಸ್ತಕಾಭಿಷೇಕ ಯಶಸ್ವಿಯಾಗಿ ನಡೆಯಿತು. ನಮಗೆಲ್ಲ ಧನ್ಯತಾ ಭಾವ ಮೂಡಿ ಬಂದಿದೆ ಎಂದು ಹೆಗ್ಗಡೆಯವರು ಹೇಳಿದರು.
ಪೂಜ್ಯ ವರ್ಧಮಾನ ಸಾಗರ ಮುನಿಮಹಾರಾಜರು, ಪುಷ್ಪದಂತ ಸಾಗರ ಮುನಿಮಹಾರಾಜರು ಮತ್ತು ಶ್ರವಣಬೆಳಗೊಳದ ಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕರ ಆಶೀರ್ವಾದ ಮತ್ತು ಅನುಮತಿ ಪಡೆದು ಈ ಬಾರಿ ಮಸ್ತಕಾಭಿಷೇಕದಲ್ಲಿ ಪಂಚಕಲ್ಯಾಣದ ಬದಲು ಕಥಾನಾಯಕ ಬಾಹುಬಲಿಯ ಜೀವನವನ್ನು ಪ್ರತಿಬಿಂಬಿಸುವ ಪಂಚ ಮಹಾವೈಭವವನ್ನು ಅಳವಡಿಸಲಾಗಿದೆ.
ವಿಶೇಷವಾಗಿ ಹೇಮಾವತಿ ಹೆಗ್ಗಡೆಯವರು, ಅನಿತಾ ಸುರೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರ ವಿಶೇಷ ಪ್ರಯತ್ನ ಮತ್ತು ಮಾರ್ಗದರ್ಶನದಲ್ಲಿ ಪಂಚ ಮಹಾ ವೈಭವ ಅತ್ಯಂತ ಯಶಸ್ವಿಯಾಗಿದೆ. ಮಹಿಳೆಯರು ಧರ್ಮ ಸಂರಕ್ಷಣೆಯ ಪ್ರಭಾವನೆಯೊಂದಿಗೆ ಸಂಸ್ಕೃತಿ, ಸಂಸ್ಕಾರದ ಪ್ರಸಾರದ ರೂವಾರಿಗಳು ಎಂದು ಹೆಗ್ಗಡೆಯವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಜಲ, ಎಳನೀರು, ಕಬ್ಬಿನ ರಸ, ಕಲ್ಕ ಚೂರ್ಣ, ಅರಿಶಿನ ಶ್ರೀಗಂಧ, ಚಂದನ ಮೊದಲಾದ ಮಂಗಲ ದ್ರವ್ಯಗಳಿಂದ ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.