ವೇಣೂರು-ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳದ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಂಬಳ ನಮ್ಮ ಸಂಸ್ಕೃತಿ, ಸಂಸ್ಕಾರದ ಬಿಂಬ: ಡಾ| ಅಜಿಲ

ವೇಣೂರು: ಕಂಬಳ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುತ್ತದೆ. ಕಂಬಳವನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ದಾಟಿಸಬೇಕಾದ ಅವಶ್ಯಕತೆ ಇದೆ. ಯುವ ಸಮುದಾಯ ಕಂಬಳದ ಬಗ್ಗೆ ಮಾಹಿತಿಯ ಜತೆ ಆಸಕ್ತಿ ಬೆಳೆಸಿ ಕಂಬಳವನ್ನು ಮುಂದುವರಿಸಬೇಕು. ಕಂಬಳಕ್ಕೆ ಯಾವತ್ತೂ ಯಾವುದೇ ಅಡಚಣೆ ಆಗದು ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಹೇಳಿದರು.
ಇತಿಹಾಸ ಪ್ರಸಿದ್ಧ ವೇಣೂರು ಪೆರ್ಮುಡ ಹೊನಲು ಬೆಳಕಿನ 26 ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ ವಹಿಸಿದ್ದರು. ಕುಂಡದಬೆಟ್ಟು ಜುಮ್ಮಾಮಸೀದಿಯ ಧರ್ಮಗುರು ಕೆ.ಎಂ. ಹನೀಫ್ ಸಖಾಫಿ ಬಂಗೇರ್‌ಕಟ್ಟೆ ಅವರು ಮಾತನಾಡಿದರು.
ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಂ. ರಾಜೀವ ಶೆಟ್ಟಿ ಎಡ್ತೂರು ಅವರು ಮಾತನಾಡಿ, ಕಂಬಳವು ತುಳುನಾಡಿನ ಆರಾಧನ ಕ್ರೀಡೆ. ಆದರೆ ಪೇಟಾದವರು ಅದನ್ನು ನಿರ್ಬಂಧಿಸಲು ಹೊರಟ್ಟಿದ್ದು, ಪದೇಪದೇ ಕಾನೂನು ಸಮರ ನಡೆಸುತ್ತಿದ್ದಾರೆ ಎಂದು ದೂರಿದರು.
ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ ಆನಂದ, ವೇಣೂರು ನಮನ ಕ್ಲೀನಿಕ್‌ನ ಡಾ| ಶಾಂತಿಪ್ರಸಾದ್, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರ್, ಕುಕ್ಕೇಡಿ-ನಿಟ್ಟಡೆ ಬಿಲ್ಲವ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಭಾಸ್ಕರ ಬಲ್ಯಾಯ, ವಿಮಲಚಂದ್ರ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸೋಮಯ ಹನೈನಡೆ, ಅಳದಂಗಡಿ ತಾ.ಪಂ. ಸದಸ್ಯೆ ವಿನುಷಾ ಪ್ರಕಾಶ್, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ನವೀನ್ ಪಚ್ಚೇರಿ, ಆರಂಬೋಡಿ ಗ್ರಾ.ಪಂ. ಸದಸ್ಯೆ ಕು| ಭವಿತಾ ದೇವಾಡಿಗ, ವೇಣೂರು ಪದ್ಮಾಂಬ ಸಮೂಹ ಸಂಸ್ಥೆಯ ಜಿನರಾಜ ಜೈನ್, ಜೆಫ್ರಿ ಫೆರ್ನಾಂಡಿಸ್, ಪದ್ಮನಾಭ ಬರಮೇಲು, ಮಹಾವೀರ ಜೈನ್ ಕಜೆ, ತೀರ್ಪುಗಾರರಾದ ವಿಜಯಕುಮಾರ್ ಮುಳಿಕ್ಕಾರು, ಸಮಿತಿಯ ಗೌರವ ಸಲಹೆಗಾರ ವಲೇರಿಯನ್ ಲೋಬೋ, ಉಪಾಧ್ಯಕ್ಷರಾದ ಕರುಣಾಕರ ಸಾಲ್ಯಾನ್, ಗೋಪಾಲ ಪೂಜಾರಿ, ಕೋಶಾಧ್ಯಕ್ಷ ಅಶೋಕ್ ಪಾಣೂರು, ಕಾರ್ಯದರ್ಶಿ ಭರತ್‌ರಾಜ್ ಪಾಪುದಡ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಅಧ್ಯಕ್ಷರಾದ ನಿತೀಶ್ ಎಚ್. ಸ್ವಾಗತಿಸಿ ಪ್ರಾಸ್ತಾವಿಸಿದರು. ಅನೂಪ್ ಜೆ. ಪಾಯಸ್ ನಿರ್ವಹಿಸಿ, ಸಮಿತಿಯ ಗೌರವ ಸಲಹೆಗಾರರಾದ ಶೇಖರ ಕುಕ್ಕೇಡಿ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.