ಅಕ್ರಮ- ಸಕ್ರಮ ಭೂಮಿಯಲ್ಲಿದ್ದ ಮರಗಳ ಮಾರಣಹೋಮ: ಬಳೆಂಜದಲ್ಲಿ ಪ್ರಕರಣ ದಾಖಲು

Advt_NewsUnder_1
Advt_NewsUnder_1
Advt_NewsUnder_1

ಅಕ್ರಮ ಸಕ್ರಮ ರದ್ದತಿ ಕೋರಿ ತಹಶಿಲ್ದಾರರಿಗೆ ವರದಿ

ಬಳೆಂಜ: ಅಕ್ರಮವಾಗಿ ಮರಗಳನ್ನು ಕಡಿದು ದಿಮ್ಮಿಗಳಾಗಿ ಪರಿವರ್ತಿಸಿ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಅಟ್ಲಾಜೆ ನಿವಾಸಿ ಕವಿತಾ ರೈ ವಿರುದ್ಧ ಬೆಳ್ತಂಗಡಿ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.
ಕವಿತಾ ರೈ ಅವರು ತಮ್ಮ ಅಕ್ರಮ ಸಕ್ರಮ ಜಾಗದಲ್ಲಿದ್ದ ಮ್ಯಾಂಜಿಯಂ ಜಾತಿಗೆ ಸೇರಿದ ಮರಗಳನ್ನು ಜೆಸಿಬಿ ಯಂತ್ರವನ್ನು ಬಳಕೆ ಮಾಡಿ ಕಡಿದು ದಿಮ್ಮಿಗಳಾಗಿ ಪರಿವರ್ತಿಸಿ ರಾಶಿ ಹಾಕಿದ್ದರು. ಈ ಬಗ್ಗೆ ವೇಣೂರು ಅರಣ್ಯ ಇಲಾಖಾಧಿಕಾರಿಗಳಿಗೆ ಸೇರಿದಂತೆ ಬೆಳ್ತಂಗಡಿ ತಹಶೀಲ್ದಾರ್‌ಗೆ, ಪುತ್ತೂರು ಸಹಾಯಕ ಆಯುಕ್ತರಿಗೆ ಸ್ಥಳೀಯರು ದೂರು ನೀಡಿದ್ದರು. ಪುತ್ತೂರು ಎ.ಸಿ ಅವರು ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದಂತೆ ಸ್ಥಳಪರಿಶೀಲನೆ ನಡೆಸಿದ ಅಧಿಕಾರಿಗಳು ಪ್ರಕರಣವನ್ನು ದೃಢಪಡಿಸಿಕೊಂಡು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದ್ದ ಸ್ವತ್ತನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಕವಿತಾ ರೈ ಅವರಿಗೆ 2016ರಲ್ಲಿ ಅಕ್ರಮ ಸಕ್ರಮದಲ್ಲಿ ಮಂಜೂರುಗೊಂಡಿದ್ದ ಜಾಗದಲ್ಲಿ ಮರಗಳನ್ನು ಕಡಿಯಲಾಗಿದ್ದು, ಅಕ್ರಮ ಸಕ್ರಮವನ್ನು ರದ್ದು ಮಾಡುವಂತೆ ತಹಶೀಲ್ದಾರ್‌ಗೆ ಬರೆದಿರುವುದಾಗಿ ವೇಣೂರು ಅರಣ್ಯಾಧಿಕಾರಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.