ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಕೆ.ಎ.ಎಸ್ ತರಬೇತಿಗೆ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿ ಶಿಬಿರವನ್ನು ಹಮ್ಮಿಕೊಂಡ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಆರ್.ಎಲ್.ಜಾಲಪ್ಪ ಆಕಾಡೆಮಿ ಸೋಲೂರಿನಲ್ಲಿ ಮಾ.20 ರಂದು ಪ್ರಾರಂಭವಾಗಲಿರುವ ಕೆ.ಎ.ಎಸ್ ತರಬೇತಿಗೆ ಆಯ್ಕೆಯಾಗಿರುವ ಮಾಲಾಡಿ ಗ್ರಾಮದ ರಮಾನಂದ ಪೂಜಾರಿಯವರ ಪುತ್ರಿ ಕು.ಸುಹಾಸಿನಿ ಇವರಿಗೆ ತರಬೇತಿ ಶುಲ್ಕ 22 ಸಾವಿರ ರೂ. ಸಹಾಯಧನವನ್ನು ಸಂಘದ ಗೌರವಾಧ್ಯಕ್ಷ, ಮಾಜಿ ಶಾಸಕ ವಸಂತ ಬಂಗೇರ ಮತ್ತು ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ ವಿತರಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ಮೂಡುಕೋಡಿ, ಕೋಶಾಧಿಕಾರಿ ಶೇಖರ ಬಂಗೇರ , ಸಂ.ಕಾರ್ಯದರ್ಶಿ ಸಚಿನ್ ಕುಮಾರ್ ನೂಜೋಡಿ, ವೇಣೂರು ಯುವವಾಹಿನಿ ಘಟಕದ ಸ್ಥಾಪಕ ಕಾರ್ಯದರ್ಶಿ ಸತೀಶ್ ಪಿ.ಎನ್, ವೇಣೂರು ಬಿಲ್ಲವ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ ಉಪಸ್ಥಿತರಿದ್ದರು .
ಕು.ಸುಹಾಸಿನಿಯವರಿಗೆ ಹಾಸ್ಟೆಲ್‌ನ ಇನ್ನಿತರ ಖರ್ಚು-ವೆಚ್ಚಕ್ಕೆ ವಸಂತ ಬಂಗೇರರು ವೈಯಕ್ತಿಕ ನೆಲೆಯಲ್ಲಿ ಹಣಕಾಸಿನ ನೆರವನ್ನು ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.