ಹಿರಿಯ ಸಾಹಿತಿ ಟಿ.ಜಿ ಮೂಡೂರು ಅಮೈ ದೇವರಾವ್ ಮನೆಗೆ ಭೇಟಿ

ಮಿತ್ತಬಾಗಿಲು: ಸಾವಯವ ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಯಶಸ್ವಿ ಸಾಧಿಸಿದ ಅಮೈ ದೇವರಾವ್ ಮನೆಗೆ ಹಿರಿಯ ಸಾಹಿತಿ ನಿವೃತ್ತ ಶಿಕ್ಷಕ ಟಿ.ಜಿ ಮೂಡೂರು ಮತ್ತು ಶ್ರೀಮತಿ ಕಮಲಾ ಮೂಡೂರು ಭೇಟಿ ನೀಡಿದರು.
ಟಿ.ಜಿ ಮೂಡೂರು ಬೆಳ್ತಂಗಡಿ ಮಾದರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಮಿತ್ತಬಾಗಿಲು ಗ್ರಾಮದ ಅಮೈ ದೇವರಾವ್ ಅವರ ಶಿಷ್ಯರಾಗಿದ್ದರು.
ಹೀಗೆ ಮೂಡೂರು ವಳಂಬ್ರ ಆಲಂಗಾವು ಗೋಪಾಲಕೃಷ್ಣ ಗೌಡರ ಮನೆಗೆ ಹೋದ ಸಂದರ್ಭದಲ್ಲಿ ಶಿಷ್ಯನ ಕೃಷಿ ಚಟುವಟಿಕೆ ಬಗ್ಗೆ ತಿಳಿದುಕೊಳ್ಳಲು ಹಾಗೂ ಮನೆಗೆ ಭೇಟಿ ನೀಡುವ ಉದ್ದೇಶದಲ್ಲಿ ಹೋಗಿದ್ದರು. ದೇವರಾವ್ ಸಂಗ್ರಹಿಸಿರುವ ನೂರು ಪಾರಂಪರಿಕ ಸ್ವದೇಶಿ ಭತ್ತದ ತಳಿಯ ಬೀಜಗಳನ್ನು ವೀಕ್ಷಿಸಿದರು. ದೇವರಾವ್ ರವರು ತಾನು ಬೆಳೆದ ಮಣಿಪುರದ ವಿಶೇಷ ಭತ್ತದ ತಳಿಯ ನೀಲಿ ಬಣ್ಣದ ಅಕ್ಕಿಯನ್ನು ಗುರುವಿಗೆ ನೀಡಿದರು.
ಈ ಸಂದರ್ಭ ಗುರುಗಳನ್ನು ಶಿಷ್ಯ ದೇವರಾವ್ ಸಣ್ಣಮಟ್ಟದಲ್ಲಿ ಗುರುಕಾಣಿಕೆ ಎಂಬಂತೆ ಗೌರವಿಸಿದರು.
ನಂತರ ಮಾತನಾಡಿದ ಸಾಹಿತಿ ಮೂಡೂರು, ನಾನು ಲೇಖನಿಯಲ್ಲಿ ಪುಸ್ತಕದಲ್ಲಿ ಬರೆದು ಸಾಹಿತಿಯಾದರೆ, ಶಿಷ್ಯ ಮಣ್ಣಿನಲ್ಲಿ ದುಡಿದು ಮಣ್ಣಿನ ಲೇಖನಿಯಲ್ಲಿ ಬರೆದು ಹೆಸರುಗಳಿಸಿ ಸಾವಯವ ಕೃಷಿಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿ ಪ್ರಶಸ್ತಿಗಳಿಂದ ಪುರಸ್ಕೃತರಾದ ತನ್ನ ಶಿಷ್ಯನ ಬಗ್ಗೆ ಅತೀ ಸಂತಸಪಟ್ಟರು. ಹೀಗೆ ಸುಮಾರು ಒಂದು ಗಂಟೆ ಗುರು ಶಿಷ್ಯರು ಸಂತೋಷವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವಳಂಬ್ರ ಆಲಂಗಾವು ಗೋಪಾಲಕೃಷ್ಣ ಗೌಡ ಜೊತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.