ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ: ನೂತನ ಬಸ್ ತಂಗುದಾಣದ ಲೋಕಾರ್ಪಣೆ

 

ಪೆರಿಂಜೆ : ರಾಜ್ಯಹೆದ್ದಾರಿ 70ರ ಪೆರಿಂಜೆ ಶ್ರೀ ಪಡ್ಡ್ಯಾರಬೆಟ್ಟ ಕ್ಷೇತ್ರದ ಬಳಿ ಕ್ಷೇತ್ರದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ ಕುಮಾರ್ ಕುಟುಂಬಸ್ಥರು ಕೊಡುಗೆಯಾಗಿ ನಿರ್ಮಿಸಿದ ಸುಸಜ್ಜಿತ ನೂತನ ಬಸ್ ತಂಗುದಾಣದ ಲೋಕಾರ್ಪಣೆಯನ್ನು ಇಂದು  (ಮಾ.15)ಮಾರೂರು ಖಂಡಿಗದ ರಾಮದಾಸ ಅಸ್ರಣ್ಣ ನೆರವೇರಿಸಿದರು.

ಶ್ರೀ ಪಡ್ಡ್ಯಾರಬೆಟ್ಟ ಕ್ಷೇತ್ರದ ಎ. ಜೀವಂಧರ ಕುಮಾರ್ ದಂಪತಿ, ವಿಕಾಶ್ ಜೈನ್, ವಿಶ್ವಾಸ್ ಜೈನ್ ಹಾಗೂ ಕುಟುಂಬಸ್ಥರು, ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಹೊಸ೦ಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾವಸಂತ್, ತಾ.ಪಂ. ಸದಸ್ಯ ಓಬಯ್ಯ ಆರಂಬೋಡಿ, ಹೊಸಂಗಡಿ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.