HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಧರ್ಮಸ್ಥಳ: ಶ್ರೀ ಧ.ಮಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಮಹಾವಿದ್ಯಾಲಯ ಉಜಿರೆ ಇದರ ಆಶ್ರಯದಲ್ಲಿ ಸ್ಥೂಲಕಾಯದಿಂದ ಬರುವ ಹೃದಯ ಸಂಬಂಧಿ ಹಾಗೂ ಮಧುಮೇಹ ಖಾಯಿಲೆಗಳಲ್ಲಿ ಜೀವನ ಶೈಲಿಯ ಪಾತ್ರ ಎಂಬ ವಿಷಯದಲ್ಲಿ ದ್ವಿತೀಯ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನಾ  ಸಮಾರಂಭವು ಮಾ.15 ರಂದು ಉಜಿರೆ ಮಹಾವಿದ್ಯಾಲಯದಲ್ಲಿ ಜರುಗಿತು.

ಉದ್ಘಾಟನೆಯನ್ನು ಸರಕಾರದ ಉಪಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು.  ಮುಖ್ಯಅತಿಥಿಗಳಾಗಿ ಆಯುಷ್ ಇಲಾಖೆಯ ಆಯುಕ್ತೆ ಮೀನಾಕ್ಷಿ ನೇಗಿ,  ಕ್ರೀಡಾ ವಿಶ್ವವಿದ್ಯಾಲಯ ಜರ್ಮನಿಯ ಪ್ರೊ. ಡಾ. ವೊಲ್ಟ್ರನ್ಂಗ್ ಸ್ಕೊಲ್‌ಹಾರ್ನ್ ಉಪಸ್ಥಿತರಿದ್ದರು. ನವದೆಹಲಿಯ ಭಾರತೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯ ಸಂಘದ ಅಧ್ಯಕ್ಷ ಡಾ. ನವೀನ್ ಕೆ.ವಿ, ವಿಚಾರ ಸಂರ್ಕಿಣದ ಕಾರ್ಯದರ್ಶಿ ಹಾಗೂ ಕಾಲೇಜಿನ ಪ್ರಾಚಾರ್ಯ ಡಾ. ಪ್ರಶಾಂತ ಶೆಟ್ಟಿ , ಎಸ್ .ಡಿ ಎಂ  ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ  ಯಶೋವರ್ಮ,  ಸೀತಾರಾಮ ತೋಳ್ಪಾಡಿತ್ತಾಯ  ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.