ನಗದು ಸಾಗಾಟಕ್ಕೆ ನೀತಿ ಸಂಹಿತೆ: 50 ಸಾವಿರ ರೂ. ತನಕ ಮಾತ್ರ ಸಾಗಾಟಕ್ಕೆ ಅವಕಾಶ

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗದು ಸಾಗಾಟದ ಮೇಲೆ ಅಯೋಗ ಹದ್ದಿನ ಕಣ್ಣಿರಿಸಿದೆ. ಕೇವಲ 50ಸಾವಿರ ತನಕ ನಗದು ಸಾಗಾಟ ಮಾಡಲು ಮಾತ್ರ ಸಾರ್ವಜನಿಕರಿಗೆ ಅವಕಾಶ ಇರಲಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಒಂದೊಮ್ಮೆ ಐವತ್ತು ಸಾವಿರಕ್ಕಿಂತಲೂ ಅಧಿಕ ನಗದು ಹಣ ಸಾಗಿಸುವುದೇ ಅದಲ್ಲಿ ಅಂತಹ ಸಂದರ್ಭದಲ್ಲಿ ಸೂಕ್ತ ದಾಖಲೆಗಳ ಅಗತ್ಯವಿರುತ್ತದೆ. ಸೂಕ್ತ ದಾಖಲೆ ಪತ್ರಗಳೊಂದಿಗೆ ಹಣ ಸಾಗಾಟ ಮಾಡಬಹುದೆಂದ ಅವರು, ಬ್ಯಾಂಕ್‌ಗಳು ಕೂಡ ನಗದು ರವಾನಿಸುವಂತಹ ಸಂದರ್ಭದಲ್ಲಿ ಕಾನೂನನ್ನು ಪಾಲಿಸಬೇಕೆಂದರು. 10 ಸಾವಿರ ರೂಪಾಯಿಗಿಂತಲೂ ಅಧಿಕ ಮೌಲ್ಯದ ಗಿಫ್ಟ್ ಗಳನ್ನು ಸಾಗಿಸುವಂತಹ ಸಂದರ್ಭದಲ್ಲೂ ದಾಖಲೆ ಅಗತ್ಯವಾಗಿ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಮದುವೆ, ಹುಟ್ಟುಹಬ್ಬ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಚುನಾವಣಾ ಅಯೋಗದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.