ಮಾ.19- 23: ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ನಡ್ವಾಲ್ ಸಿರಿ ಜಾತ್ರೆ

Advt_NewsUnder_1
Advt_NewsUnder_1
Advt_NewsUnder_1

ನಿಡಿಗಲ್: ತುಳುನಾಡಿನ ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಕನ್ಯಾಡಿ-1 ಇಲ್ಲಿ ವರ್ಷಾವಧಿ ಜಾತ್ರೆ ಹಾಗೂ ಸಿರಿ ಜಾತ್ರಾ ಮಹೋತ್ಸವ ವು ಮಾ. 19 ರಿಂದ ಮಾ.23 ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಮಾ.19 ರಂದು ವೈದಿಕ ವಿಧಿ-ವಿಧಾನ ಪ್ರಾರಂಭ, ಊರ ಪರವೂರ ಭಕ್ತಾಧಿಗಳಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಧ್ವಜಾರೋಹಣ, ಅನ್ನಸಂತರ್ಪಣೆ, ರಾತ್ರಿ 11.ಕ್ಕೆ ದೇವರ ಉತ್ಸವ, ದೀಪರಾಧನೆ, ಭೂತರಾಧನೆ, ಮಹಿಷಂತಾಯ, ಮೂರ್ತಿಲ್ಲಾಯ ದೈವಗಳ ನೇಮೋತ್ಸವ, ಮಾ.20 ರಂದು ಬೆಳಿಗ್ಗೆ ಗಣಹೋಮ, ಶತ-ರುದ್ರಾಭಿಷೇಕ, ಶ್ರೀ ದೇವರ ಉತ್ಸಹ, ಭಜನಾ ಕಾರ್ಯಕ್ರಮ, ಸಂಜೆ 6.30 ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರ.7. ರಿಂದ ಕುಮಾರ ದರ್ಶನ, ಶ್ರೀ ದೇವರ ಉತ್ಸವ, ವಸಂತ ಕಟ್ಟೆ ಪೂಜೆ, ಶ್ರೀ ಅಬ್ಬಗದಾರಗ ಚೆನ್ನೆಮಣೆ ಆಟ, ರಾತ್ರಿ 10 ರಿಂದ ದೈವಗಳ ನೇಮೊತ್ಸವ, ಕುಮಾರ ಮತ್ತು ಪಂಜುರ್ಲಿ ದೈವದ ಬೇಟಿ ನಡೆಯಲಿದೆ.
ಮಾ.21 ರಂದು ಬೆಳಿಗ್ಗೆ 11 ರಿಂದ ಆಶ್ಲೇಷ ಬಲಿ, ಶ್ರೀ ನಾಗದರ್ಶನ ಸೇವೆ ಸಂಜೆ. 4.30ರಿಂದ ಭಜನೆ ಕಾರ್ಯಕ್ರಮ, ಸಂಜೆ.6.30 ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಯು. ವಿಜಯ ರಾಘವ ಪಡ್ವೆಟ್ನಾಯ ವಹಿಸಲಿದ್ದಾರೆ. ಡಾ| ಪ್ರದೀಪ್ ನಾವೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಅನ್ನಪೂರ್ಣ ಛತ್ರದ ವ್ಯವಸ್ಥಾಪಕ ಜಿ.ಸುಬ್ರಹ್ಮಣ್ಯ ಪ್ರಸಾದ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೊಟ್ಟಾರಿ, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಉಜಿರೆ ಸಿಎ ಬ್ಯಾಂಕ್ ಅಧ್ಯಕ್ಷ ಇಚ್ಚಿಲ ಸುಂದರ ಗೌಡ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ ಭಾಗವಹಿಸಲಿದ್ದಾರೆ. ರಾತ್ರಿ . 7.30 ರಿಂದ ಕುಮಾರ ದರ್ಶನ, ವಾರ್ಷಿಕ ನಡ್ವಾಲ್ ಸಿರಿ ಜಾತ್ರೆ, ರಾತ್ರಿ 9.ರಿಂದ ‘ಮಂಗೆ ಮಲ್ಪೋಡ್ಚಿ’ ನಾಟಕ ಜರುಗಲಿದೆ. ಮಾ.22 ರಂದು ರಾತ್ರಿ ರಂಗಪೂಜೆ, ಮಾ.23 ರಂದು ರಾತ್ರಿ ೮ ರಿಂದ ದೈವಗಳ ನೇಮೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.