HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಅಕ್ರಮ-ಸಕ್ರಮ ಅರ್ಜಿ: 30ಸಾವಿರ ಗಡಿ ದಾಟುವ ಸಾಧ್ಯತೆ

ತಾಲೂಕು ಕಚೇರಿಯಲ್ಲಿ ನೂಕುನುಗ್ಗಲು; ಬೆಳಿಗ್ಗೆ 6 ಗಂಟೆಗೇ ಸರತಿ ಸಾಲು

ತಾ.ಪಂ ಸದಸ್ಯ ಜಯರಾಮ ಆಲಂಗಾರು ಅವರೂ ಸರತಿ ಸಾಲಿನಲ್ಲಿ ಟೋಕನ್‌ಗಾಗಿ ನಿಂತಿರುವುದು 
ಟೋಕನ್‌ಗಾಗಿ ದಂಬಾಲು ಬೀಳುತ್ತಿರುವ ನಾಗರಿಕರು

 ಬೆಳ್ತಂಗಡಿ: ಅಕ್ರಮ ಸಕ್ರಮ ಭೂಮಿ ಮಂಜೂರಾತಿಗೆ ಸಂಬಂಧಪಟ್ಟಂತೆ ಅರ್ಜಿ ನಮೂನೆ 57 ರಲ್ಲಿ ತಾಲೂಕು ಕೇಂದ್ರದಲ್ಲಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, ಈಗಾಗಲೇ 25 ಸಾವಿರ ಅರ್ಜಿಗಳು ಸ್ವೀಕಾರವಾಗಿದೆ.
ಮಾ. 16 ರಂದು ಈ ಅರ್ಜಿ ಪಡೆಯಲು ಕೊನೆಯ ದಿನ ಎಂದು ಘೋಷಣೆಯಾಗಿರುವ ಹಿನ್ನಲೆಯಲ್ಲಿ ಸಹಜವಾಗಿಯೇ ತಾಲೂಕು ಕಚೇರಿಯಲ್ಲಿ ಬೆಳಗ್ಗೆ 6 ಗಂಟೆಗೇ ಜನ ಬಂದು ಕಚೇರಿ ಬಾಗಿಲು ಕಾಯುವ ಕೆಲಸ ಮಾಡುತ್ತಿದ್ದಾರೆ. ಪೂರ್ವಾಹ್ನ 10ಕ್ಕೆ ಟೋಕನ್ ವಿತರಣೆ ನಡೆಯು ತ್ತಿದ್ದು, ಈ ವೇಳೆ ಜನ ಮುಗಿ ಬಿದ್ದು ನೂಕು ನುಗ್ಗಲು ಉಂಟುಮಾ ಡುತ್ತಿದ್ದಾರೆ. ಈ ನಡುವೆ ಮಧ್ಯವರ್ತಿ ಗಳೂ ಕೂಡ ಸರತಿ ಸಾಲಿನಲ್ಲಿ ನಿಂತು ಮತ್ತು ಅನ್ಯಮಾರ್ಗಗಳಿಂದ ಟೋಕನ್ ಪಡೆದು ಹೆಚ್ಚಿನ ಮೊತ್ತಕ್ಕೆ ಅದನ್ನು ಮಾರಾಟ ಮಾಡುತ್ತಿದ್ದಾರೆ ಎಂದೂ ದೂರುಗಳು ವ್ಯಾಪಕವಾಗಿ ಕೇಳಿಬಂದಿದೆ.

ತಾಲೂಕಿನಲ್ಲಿ4 ಕೌಂಟರ್‌ಗಳ ಮೂಲಕ ಅರ್ಜಿ ಸ್ವೀಕಾರ: ಜಿಲ್ಲೆಯಲ್ಲಿ 4 ಕೌಂಟರ್‌ಗಳ ಮೂಲಕ ಅರ್ಜಿ ಸ್ವೀಕಾರಕ್ಕೆ ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೊಕ್ಕಡ- ವೇಣೂರು ಹೋಬಳಿ ಕೇಂದ್ರಗಳಲ್ಲಿ ತಲಾ 1 ಮತ್ತು ಕೇಂದ್ರಸ್ಥಳ ಮಿನಿವಿಧಾನ ಸೌಧದಲ್ಲಿ 2 ಕೌಂಟರ್‌ಗಳ ಮೂಲಕ ಅರ್ಜಿ ಸ್ವೀಕಾರ ನಡೆಯುತ್ತಿದೆ. ಅರ್ಜಿ ಜೊತೆ ಆರ್‌ಟಿಸಿ ಇಡುವುದು ಕಡ್ಡಾಯವಾಗಿರುವುದರಿಂದ ಸಹಜವಾಗಿಯೇ ಆರ್‌ಟಿಸಿ ಕೇಂದ್ರದಲ್ಲೂ ಕೂಡ ಸರತಿ ಸಾಲು ಇದೆ. ತಾಲೂಕು ಕಚೇರಿ ಒಳಗೆ ಹೋಗಬೇಕಾದರೆ ಜನರನ್ನು ಸರಿಸಿ ದಾರಿಮಾಡಿಕೊಂಡು ಹೋಗಬೇಕಾದ ಸ್ಥಿತಿ ಇದೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.