HomePage_Banner_
HomePage_Banner_
HomePage_Banner_

ಮಾ.21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

Advt_NewsUnder_1

69 ಪ್ರೌಢ ಶಾಲೆಗಳಿಂದ 3491ವಿದ್ಯಾರ್ಥಿಗಳು13 ಪರೀಕ್ಷಾ ಕೇಂದ್ರ


ಬೆಳ್ತಂಗಡಿ: ಈ ಬಾರಿಯ ಎಸ್.ಎಸ್.ಎಲ್.ಸಿ ಪಬ್ಲೀಕ್ ಪರೀಕ್ಷೆ ಮಾ.21ರಿಂದ ಏ.4ರವರೆಗೆ ನಡೆಯಲಿದ್ದು, ತಾಲೂಕಿನಲ್ಲಿ 13 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾ ಗಿದೆ. ಬೆಳ್ತಂಗಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಸೇರಿದಂತೆ ಒಟ್ಟು 69 ಪ್ರೌಢ ಶಾಲೆಗಳಿಂದ ಈ ಬಾರಿ3491 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ತಿಳಿಸಿದ್ದಾರೆ.
ಪರೀಕ್ಷೆ ಬರೆಯಲಿರುವ ಒಟ್ಟು 3491 ವಿದ್ಯಾರ್ಥಿಗಳಲ್ಲಿ 1718 ಗಂಡು ಹಾಗೂ 1773 ಹೆಣ್ಣು ಮಕ್ಕಳು ಒಳಗೊಂಡಿದ್ದಾರೆ. ಪರೀಕ್ಷೆ ಕುಳಿತು ಕೊಳ್ಳುವವರಲ್ಲಿ ಪ.ಜಾತಿ- 331 ಪ. ಪಂಗಡ200, ಪ್ರವರ್ಗ-| 41, ಮುಸ್ಲಿಂ 738, ಕ್ರೈಸ್ತ 265, ಜೈನ 48, ಕೊರಗ 2, ಇತರ 1710, ಸಾಮಾನ್ಯ 156 ವಿದ್ಯಾರ್ಥಿಗಳಾಗಿದ್ದಾರೆ.
ಸರಕಾರಿ ಪ್ರೌಢ ಶಾಲೆ- 1827 ವಿದ್ಯಾರ್ಥಿಗಳು: ತಾಲೂಕಿನ 36 ಸರಕಾರಿ ಪ್ರೌಢ ಶಾಲೆಗಳಿಂದ 928 ಗಂಡು ಹಾಗೂ 893 ಹೆಣ್ಣು ಸೇರಿದಂತೆ ಒಟ್ಟು 1821 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ. ಇವರಲ್ಲಿ 230 ಪ.ಜಾತಿ, 127 ಪ.ಪಂಗಡ, 11ಪ.ವರ್ಗ-|, 466 ಮುಸ್ಲಿಂ, 19 ಕ್ರೈಸ್ತ, 13 ಜೈನ, ೨ ಕೊರಗ, 936 ಇತರ, 17 ಸಾಮಾನ್ಯ ಒಳಗೊಂಡಿದ್ದಾರೆ.
ಅನುದಾನಿತ ಪ್ರೌಢ ಶಾಲೆ-751 ವಿದ್ಯಾರ್ಥಿಗಳು: ತಾಲೂಕಿನ 9ಅನುದಾನಿತ ಪ್ರೌಢ ಶಾಲೆಗಳಿಂದ 751ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇವರಲ್ಲಿ 354 ಗಂಡು ಹಾಗೂ 397  ಹೆಣ್ಣು ಮಕ್ಕಳು ಒಳಗೊಂಡಿದ್ದಾರೆ. ಇವರಲ್ಲಿ 71 ಪ.ಜಾತಿ, 53 ಪ.ಪಂಗಡ, 14 ಪ್ರ.ವರ್ಗ-|,149 ಮುಸ್ಲಿಂ,48 ಕ್ರೈಸ್ತ, 13 ಜೈನ, 342 ಇತರ, 61 ಸಾಮಾನ್ಯರು ಒಳಗೊಂಡಿದ್ದಾರೆ.
ಅನುದಾನ ರಹಿತ ಪ್ರೌಢ ಶಾಲೆ-919 ವಿದ್ಯಾರ್ಥಿಗಳು: ತಾಲೂಕಿನ 24 ಅನುದಾನ ರಹಿತ ಪ್ರೌಢ ಶಾಲೆಗಳಿಂದ 191 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇವರಲ್ಲಿ 436 ಗಂಡು ಹಾಗೂ 483 ಹೆಣ್ಣು ಮಕ್ಕಳು ಒಳಗೊಂಡಿದ್ದಾರೆ. 30 ಪ.ಜಾತಿ, 20 ಪ.ಪಂಗಡ,16 ಪ.ವರ್ಗ-|, 123 ಮುಸ್ಲಿಂ, 198 ಕ್ರೈಸ್ತ, 22 ಜೈನ, 432 ಇತರ,74ಸಾಮಾನ್ಯ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ.
ಪರೀಕ್ಷೆಗೆ ಅವಧಿ ನಿಗದಿ : ಪ್ರಥಮ ಭಾಷೆಗೆ 100 ಗರಿಷ್ಠ ಅಂಕಗಳು, ಉಳಿದ ವಿಷಯಗಳಿಗೆ ಪ್ರತಿ ವಿಷಯಕ್ಕೆ ಗರಿಷ್ಠ 80 ಅಂಕಗಳಂತೆ ಪರೀಕ್ಷೆ ನಿಗದಿಪಡಿಸಲಾಗಿದೆ. ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ 2 ಗಂಟೆ 45 ನಿಮಿಷ ಬರೆಯಲು ಮತ್ತು 15 ನಿಮಿಷ ಓದಲು ಹಾಗೂ ದ್ವಿತೀಯ ಮತ್ತು ತೃತೀಯ ಭಾಷೆಗೆ2 ಗಂಟೆ 15ನಿಮಿಷ ಬರೆಯಲು ಮತ್ತು 15 ನಿಮಿಷ ಓದಲು ನಿಗದಿಪಡಿಸಲಾಗಿದೆ. ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಮತ್ತು ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ12ರವರೆಗೆ ಅವಧಿ ನಿಗದಿಪಡಿಸಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.